ಗಂಗೊಳ್ಳಿ: ಆರೋಗ್ಯ ಅರಿವು ಕಾರ್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗ೦ಗೊಳ್ಳಿ: ಕೋಪ ಬಂದಾಗ ಶೀಘ್ರ ಪ್ರತಿಕ್ರಿಯೆಗಳನ್ನು ನೀಡಬಾರದು. ತಾಳ್ಮೆ ಮಾನಸಿಕ ಸಂತುಲತೆಯನ್ನು ತಂದುಕೊಡುತ್ತದೆ. ಸವಾಲು ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು ಎಂದು ಬೈಂದೂರಿನ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು.

Call us

Click Here

ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಹಮ್ಮಿಕೊ೦ಡಿದ್ದ ಆರೋಗ್ಯ ಅರಿವು ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.

ಸ್ವಪ್ನ ಸ್ಖಲನ ಹಸ್ತ ಮೈಥುನ ಇತ್ಯಾದಿಗಳ ಬಗೆಗೆ ಅನವಶ್ಯಕ ಹೆದರಿಕೆ ಅಥವಾ ಗೊಂದಲಗಳು ಸರಿಯಲ್ಲ. ಸಮಸ್ಯೆಗಳಿದ್ದಾಗ ತಜ್ಞ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ. ಲೈಂಗಿಕತೆಯ ಬಗೆಗೆ ಕೆಟ್ಟ ಆಸಕ್ತಿಯನ್ನು ಯಾರೂ ಕೂಡ ಬೆಳೆಸಿಕೊಳ್ಳಬಾರದು ಎಂದು ಅವರು ಹೇಳಿದರು.

ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ನಾರಾಯಣ ನಾಯ್ಕ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಕಾರ‍್ಯಕ್ರಮ ನಿರ್ವಹಿಸಿದರು. ಸಂಸ್ಕೃತ ಉಪನ್ಯಾಸಕ ಎನ್ ಸಿ ವೆಂಕಟೇಶ ಮೂರ್ತಿ ವ೦ದಿಸಿದರು.

ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Click here

Click here

Click here

Click Here

Call us

Call us

Leave a Reply