ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದ ಯುವಕರ ಪಡೆ ಸಂಘಟನೆಯಲ್ಲಿ ಒಂದು ನಂಬಿಕೆ ಇಟ್ಟುಕೊಂಡು ಮುಂದೆ ಬಂದಾಗ ಎನೂ ಬೇಕಾದರೂ ಸಾಧಿಸಿ ತೋರಿಸುವ ಛಲ ಇಂದಿನ ಯವಕರಲ್ಲಿ ಇದೆ. ಅದಕ್ಷಾಗಿ ಸರಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಸಮಾಜದ ದಾನಿಗಳಿಂದ ಸಹಾಯ ಪಡೆದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವುದರದೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಾಗ ಮಾತ್ರ ನಮ್ಮ ಸಮಾಜವು ಏಳಿಗೆಯಾಗಲು ಸಾಧ್ಯ ಎಂದು ಉಡುಪಿ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಅರುಣ್ ಭಂಡಾರಿ ಪರ್ಕಳ ಹೇಳಿದರು.
ಅವರು ಕುಂದಾಪುರ ಕುಂದೇಶ್ವರ ರಸ್ತೆ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಕುಂದಾಪುರ ತಾಲೂಕು ಪರಿಯಾಳ ಸಮಾಜ ಹಾಗೂ ಮಹಿಳಾ ಪರಿಯಾಳ ಸಮಾಜ ಜಂಟಿ ಆಶ್ರಯದಲ್ಲಿ ಜರುಗಿದ ೪ನೇ ವಾರ್ಷೀಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಸುಜಯ್ ಸುವರ್ಣ ವಕ್ವಾಡಿ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಯು. ಶಂಕರ್ ಸಾಲಿಯಾನ್ ಕಟಪಾಡಿ, ದ.ಕ.ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಮಂಗಳೂರು ಗೌರವಧ್ಯಕ್ಷ ಸಂಜೀವ ಬಂಗೇರ ಮಾರ್ನವಿ ಕಟ್ಟೆ, ಮಂಗಳೂರು ಜಿಲ್ಲಾ ಮಹಿಳಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷೆ ಶರ್ಮಿಳಾ ಆರ್. ಸಾಲಿಯಾನ್, ಕೂಳೂರು, ಉಡುಪಿ ಜಿಲ್ಲಾ ಮಹಿಳಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷೆ ವಸಂತಿ ಭಾಸ್ಕರ್ ನೇಜಾರು, ಕಾರ್ಕಳ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಕುರ್ಕಾಲು, ಕಾರ್ಕಳ ಜಿಲ್ಲಾ ಪರಿಯಾಳ ಸಮಾಜ ಸುಧಾರಕರ ಸಂಘ ಅಧ್ಯಕ್ಷ ಸಂಜೀವ ಸಾಲಿಯಾನ್ ಬೆಳುವಾಯಿ, ಮಂಗಳೂರು ಉಳ್ಳಾಲ ವಲಯ ಪರಿಯಾಳ ಸಮಾಜ ಸುಧಾರಕರ ಅಧ್ಯಕ್ಷ ಪ್ರಭಾಕರ ಬಂಗೇರ ಕೋಟೆಕಾರ, ಕುಂದಾಪುರ ಪರಿಯಾಳ ಸಮಾಜ ಸುಧಾರಕರ ಸಂಘದ ಪ್ರದಾನ ಕಾರ್ಯದರ್ಶಿ ಮಹೇಶ ಸುವರ್ಣ ಅರಾಟೆ, ಕೋಶಾಧಿಕಾರಿ ಸಂತೋಷ ಸಾಲಿಯಾನ್ ಬಸ್ರೂರು, ಮಹಿಳಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಸುವರ್ಣ ವಕ್ವಾಡಿ, ಸುಭಾಶ್ ಭಂಢಾರಿ ಗುಜ್ಜಾಡಿ, ಅರುಣ ಭಂಢಾರಿ ಬೈಕಾಡಿ ಉಪಸ್ಥಿತರಿದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮಹಿಳಾ ಗುರುತಿಸಿ ಹಾಗೂ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಗಳನ್ನು ನಿಡಿ ಗೌರವಿಸಲಾಯಿತ್ತು. ಸಂತೋಷ ಸಾಲಿಯಾನ್ ಬಸ್ರೂರು ಕಾರ್ಯಕ್ರಮ ನಿರೂಪಿಸಿ, ರೇಷ್ಮಾ ಉದಯ ಸುವರ್ಣ ವಕ್ವಾಡಿ ಸ್ವಾಗತಿಸಿ, ಸೌಮ್ಯ ಸಂತೋಷ ಸಾಲಿಯಾನ್ ಬಸ್ರೂರು ವಂದಿಸಿದರು.