ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಪೊಲಿಯೋ ನಿರ್ಮೂಲನೆಯಲ್ಲಿ ರೋಟರಿಯ ಪಾತ್ರದ ಬಗ್ಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೃಹತ್ ಬ್ಯಾನರೊಂದನ್ನು ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಅನಾವರಣ ಗೊಳಿಸಲಾಯಿತು.
ವಿಶ್ವ ಪೊಲೀಯೋ ದಿನಾಚರಣೆ ಸಂಬಂಧ ನಡೆದ ಈ ಬೃಹತ್ ಬ್ಯಾನರನ್ನು ಉದ್ಘಾಟಿಸಿದ ರೋಟರಿ ಜಿಲ್ಲೆ ೩೧೮೨ ನಿಯೋಜಿತ ಗವರ್ನರ್ ಅಭಿನಂನದನ ಶೆಟ್ಟಿಯವರು ಮಾತನಾಡಿ, ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಹೋರಾಟದ ಯಶೋಗಾಥೆಯನ್ನು ಬಿಂಬಿಸುವ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನವರ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ವಲಯ ೧ರ ಪಲ್ಸ್ ಪೋಲಿಯೋ ಕೊ.ಆರ್ಡಿನೇಟರ್ ಬಿ.ಎಂ. ಚಂದ್ರಶೇಖರ, ಮಾಜಿ ಸಹಾಯಕ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿ ಸಹಕರಿಸಿದರು. ರೋಟರಿ ಸನ್‌ರೈಸ್ ಸದಸ್ಯರಾದ ಪ್ರಮೋದ ಕುಮಾರ ಶೆಟ್ಟಿ, ಸೀತಾರಾಮ, ಅರುಣಚಂದ್ರ ಕೊತ್ವಾಲ್, ಸಿ.ಹೆಚ್. ಗಣೇಶ, ರಾಮಕೃಷ್ಣ ಐತಾಳ, ಉಲ್ಲಾಸ ಕ್ರಾಸ್ತಾ, ಶಿವಾನಂದ ಎಂ.ಪಿ., ಸದಾನಂದ ಉಡುಪ, ರಾಜು ಪ್ರಜಾರಿ, ಮಂಜುನಾಥ ಕೆ.ಎಸ್ ಮತ್ತು ರಾಘವೇಂದ್ರ ಯು.ಕೆ. ಇನ್ನಿತರರು ಉಪಸ್ಥಿತರಿದ್ದರು.