Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಮತ್ತು ಮಹತ್ವ
    ತನ್ನಿಮಿತ್ತ

    ಬೆಳಕಿನ ಹಬ್ಬ ದೀಪಾವಳಿಯ ಆಚರಣೆ ಮತ್ತು ಮಹತ್ವ

    Updated:24/10/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಲೇಖನ.
    ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿ ಪ್ರಭು ಶ್ರೀರಾಮಚಂದ್ರನು ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಮಣಿ-ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಊರಿನ ಬೀದಿಗಳನ್ನು ಸುಗಂಧಿತದ್ರವ್ಯಗಳಿಂದ ಯುಕ್ತವನ್ನಾಗಿಸಿ ದೀಪೋತ್ಸವವನ್ನು ಆಚರಿಸಿದರು. ಅಂದಿನಿಂದ ದೀಪಾವಳಿ ಉತ್ಸವವನ್ನು ಆಚರಿಸಲಾಗುತ್ತದೆ.

    Click Here

    Call us

    Click Here

    ದೀಪಾವಳಿ ಶಬ್ದದ ಅರ್ಥ
    ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಈ ಉತ್ಸವಗಳು ವಿಭಿನ್ನವಾಗಿವೆ.

    ಭಗವಾನ ಶ್ರೀಕೃಷ್ಣನು ಅಸುರಿವೃತ್ತಿಯ ನರಕಾಸುರನನ್ನು ವಧಿಸಿ ಜನರನ್ನು ಭೋಗವಾದ, ಲೋಭ, ಅನಾಚಾರ ಹಾಗೂ ದುಷ್ಟ ಪ್ರವೃತ್ತಿಯಿಂದ ಮುಕ್ತಗೊಳಿಸಿದನು ಮತ್ತು ಪ್ರಭು ವಿಚಾರ (ದೈವೀ ವಿಚಾರ)ವನ್ನು ನೀಡಿ ಸುಖವನ್ನು ನೀಡಿದನು. ಇದುವೇ ದೀಪಾವಳಿ ಯಾಗಿದೆ.

    ಗೋಪೂಜೆ (ಗೋವತ್ಸದ್ವಾದಶಿ)
    ಭಾರತೀಯ ಸಂಸ್ಕೃತಿಯಲ್ಲಿ ಆಕಳಿಗೆ ತುಂಬಾ ಮಹತ್ವವಿದೆ. ಅವಳನ್ನು ಮಾತೆಯೆಂದು ಸಹ ಸಂಬೋಧಿಸಲಾಗುತ್ತದೆ. ಅವಳು ಸಾತ್ತ್ವಿಕಳಾಗಿರುವುದರಿಂದ ಅವಳ ಪೂಜೆಯನ್ನು ಮಾಡಿ ಎಲ್ಲರೂ ಅವಳ ಸಾತ್ತ್ವಿಕ ಗುಣಗಳನ್ನು ಸ್ವೀಕರಿಸುವುದಿರುತ್ತದೆ. ತನ್ನ ಸಹವಾಸದಿಂದ ಇತರರನ್ನು ಪಾವನಗೊಳಿಸುವ, ತನ್ನ ಹಾಲಿನಿಂದ ಸಮಾಜವನ್ನು ಬಲಿಷ್ಠಗೊಳಿಸುವ, ಕೃಷಿಗಾಗಿ ತನ್ನ ಸೆಗಣಿಯಿಂದ ಗೊಬ್ಬರವನ್ನು ನೀಡುವ, ಕೃಷಿಗೆ ಉಪಯುಕ್ತವಾದ ಎತ್ತುಗಳಿಗೆ ಜನ್ಮ ನೀಡುವ, ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು. ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆಯೋ ಹಾಗೂ ಪೂಜ್ಯಭಾವದಿಂದ ಅವಳನ್ನು ಪೂಜಿಸಲಾಗುತ್ತದೆಯೋ, ಅಲ್ಲಿನ ವ್ಯಕ್ತಿಗಳು, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ. ಇಂತಹ ಗೋಮಾತೆಯನ್ನು ಅವಳ ಕರುಗಳ ಸಹಿತ ಪೂಜೆಮಾಡಿ ದೀಪೋತ್ಸವವನ್ನು (ದೀಪಾವಳಿಯನ್ನು) ಆರಂಭಿಸಬೇಕು. ಕುಂದಾಪ್ರ ಡಾಟ್ ಕಾಂ ಲೇಖನ.

    ಧನತ್ರಯೋದಶಿಯಂದು ಹೊಸ ಬಂಗಾರವನ್ನು ಖರೀದಿಸುವ ರೂಢಿಯು ಪುರಾತನ ಕಾಲದಿಂದ ನಡೆದು ಬಂದಿದೆ. ಧನತ್ರಯೋದಶಿ ಯಂದು ಹೊಸ ಬಂಗಾರವನ್ನು ಖರೀದಿ ಮಾಡುವುದರಿಂದ ಮನೆಯಲ್ಲಿ ವರ್ಷವಿಡೀ ಧನಲಕ್ಷ್ಮೀಯು ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ಲಕ್ಷ್ಮೀ ಪೂಜೆಯ ಸಮಯದಲ್ಲಿ ನಮಗೆ ಸಂಪೂರ್ಣ ವರ್ಷದ ಜಮಾ-ಖರ್ಚಿನ ಲೆಕ್ಕವನ್ನು ನೋಡುವುದಿರುತ್ತದೆ. ಧನತ್ರಯೋದಶಿಯ ವರೆಗೆ ಲೆಕ್ಕಾಚಾರವನ್ನು ನೋಡಿ ಉಳಿದಿರುವ ಸಂಪತ್ತನ್ನು ಭಗವಂತನ ಕಾರ್ಯಕ್ಕಾಗಿ ಉಪಯೋಗಿಸಿದರೆ, ‘ಸತ್‌ಕಾರ್ಯಕ್ಕಾಗಿ ಹಣವು ಖರ್ಚಾಗುವುದರಿಂದಾಗಿ ಧನ ಲಕ್ಷ್ಮೀಯು ಕೊನೆಯತನಕ ಲಕ್ಷ್ಮೀಯ ರೂಪದಲ್ಲಿ ಮನೆಯಲ್ಲಿ ವಾಸಿಸುತ್ತಾಳೆ.’

    Click here

    Click here

    Click here

    Call us

    Call us

    ಧನವೆಂದರೆ ಹಣ; ವರ್ಷವಿಡೀ ಕಷ್ಟಪಟ್ಟು ಬೆವರು ಸುರಿಸಿ ಒಟ್ಟು ಗೂಡಿಸಿದ, ಹಣದಲ್ಲಿನ ೬ನೇ (ಶೇ.೧/೬) ಪಾಲನ್ನು ಭಗವಂತನ ಕಾರ್ಯಕ್ಕಾಗಿ ಖರ್ಚು ಮಾಡಬೇಕೆಂದು ಧರ್ಮಶಾಸ್ತ್ರವು ಹೇಳುತ್ತದೆ. ಹಿಂದಿನ ಕಾಲದಲ್ಲಿ ರಾಜ-ಮಹಾರಾಜರು ವರ್ಷದ ಕೊನೆಯಲ್ಲಿ ತಮ್ಮ ಸಂಪೂರ್ಣ ಖಜಾನೆಯನ್ನು ಸತ್ಪಾತ್ರರಿಗೆ ದಾನ ಮಾಡಿ ಖಾಲಿ ಮಾಡುತ್ತಿದ್ದರು. ಆಗ ಅವರಿಗೆ ನಾವು ಧನ್ಯರಾದೆವೆಂದು ಅನಿಸುತ್ತಿತ್ತು. ಇದರಿಂದಾಗಿ ಜನತೆ ಹಾಗೂ ರಾಜನ ನಡುವಿನ ಸಂಬಂಧವು ಕೌಟುಂಬಿಕ ಸ್ವರೂಪದ್ದಾಗಿತ್ತು. ರಾಜನ ಖಜಾನೆಯು ಜನತೆಯದ್ದಾಗಿದ್ದು ರಾಜನು ಕೇವಲ ಆ ಖಜಾನೆಯ ಸಂರಕ್ಷಕ ನಾಗಿರುತ್ತಿದ್ದನು. ಇದರಿಂದ ಜನರು ಸಹ ಯಾವುದೇ ಪ್ರತಿಬಂಧವಿಲ್ಲದೇ ತೆರಿಗೆಯನ್ನು ನೀಡುತ್ತಿದ್ದರು. ಸಹಜವಾಗಿಯೇ ಖಜಾನೆಯು ಪುನಃ ತುಂಬುತ್ತಿತ್ತು. ಧನವನ್ನು ಸತ್‌ಕಾರ್ಯಕ್ಕಾಗಿ ವಿನಿಯೋಗಿಸುವುದರಿಂದ ಆತ್ಮಬಲವು ಹೆಚ್ಚಾಗುತ್ತದೆ. ಹಣವೆಂದರೆ ಕೇವಲ ಧನವಾಗಿಲ್ಲ ಪಂಚಮಹಾಭೂತಗಳೇ ನಿಜವಾದ ಧನಗಳಾಗಿವೆ. ಯಾವುದರಿಂದ ನಮ್ಮ ಜೀವನದ ಪೋಷಣೆಯು ಸುವ್ಯವಸ್ಥಿತವಾಗಿ ನಡೆಯುತ್ತದೆಯೋ ಅಂತಹ ಧನವನ್ನು ಪೂಜಿಸುತ್ತಾರೆ. ಇಲ್ಲಿ ‘ಧನ’ ಎಂದರೆ ಶುದ್ಧಲಕ್ಷ್ಮೀ.  ಶ್ರೀಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ, ಸೂರ್ಯ ಇವುಗಳನ್ನು ಧನವೆಂದೇ ಕರೆಯಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅದುವೇ ನಿಜವಾದ ಲಕ್ಷ್ಮೀ. ಕುಂದಾಪ್ರ ಡಾಟ್ ಕಾಂ ಲೇಖನ.

    ನರಕಚತುರ್ದಶಿ
    ಶ್ರೀಕೃಷ್ಣನು ಈ ದಿನದಂದು ನರಕಾಸುರನನ್ನು ವಧಿಸಿದನು; ಆದುದರಿಂದ ಈ ದಿನವನ್ನು ನರಕಚತುರ್ದಶಿ ಎಂದು ಕರೆಯುತ್ತಾರೆ. ಇದರ ಅರ್ಥವು ‘ದುರ್ಜನ ಶಕ್ತಿಯ ಮೇಲೆ ಸಜ್ಜನ ಶಕ್ತಿಯ ವಿಜಯ’ ಎಂದಾಗುತ್ತದೆ. ಯಾವಾಗ ಸಜ್ಜನಶಕ್ತಿಯು ಜಾಗೃತಗೊಂಡು ಸಂಘಟಿತವಾಗಿ ಕಾರ್ಯ ಮಾಡುತ್ತದೆಯೋ ಆಗ ದುರ್ಜನ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತದೆ. ‘ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿಯ ಅಸುರೀ ಪ್ರವೃತ್ತಿ ಹಾಗೂ ವಿಧ್ವಂಸಕ ಪ್ರವೃತ್ತಿಯನ್ನು ಕಡಿಮೆ ಮಾಡಿ ದೈವೀಪ್ರವೃತ್ತಿಯನ್ನು ಸ್ಥಾಪಿಸಬೇಕು. ಇದರಿಂದ ಮುಂದೆ ಸಮಾಜ ಹಾಗೂ ರಾಷ್ಟ್ರದ ಮೇಲೆ ಪರಿಣಾಮವಾಗುತ್ತದೆ.’ ಸಜ್ಜನವ್ಯಕ್ತಿಗಳು ಸಂಘಟಿತರಾಗಿ ತಮ್ಮ ಜ್ಞಾನದ ಲಾಭವನ್ನು ಸಮಾಜಕ್ಕೆ ನೀಡಬೇಕು. ಈ ವಿಷಯವೇ ನರಕ ಚರ್ತುದಶಿಯಿಂದ ಕಂಡುಬರುತ್ತದೆ.

    ನರಕಚತುರ್ದಶಿ ಎಂದರೆ ನರಕರೂಪೀ ವಾಸನೆಗಳನ್ನು ಹಾಗೂ ಅಹಂಕಾರದ ಉಚ್ಚಾಟನೆಯನ್ನು ಮಾಡಿ ಆತ್ಮಜ್ಯೋತಿಯನ್ನು ಪ್ರಕಾಶಿಸುವ ದಿನವೂ ಆಗಿದೆ. ನರಕ ಚತುರ್ದಶಿಯಂದು ಮಧ್ಯರಾತ್ರಿ ಅಲಕ್ಷ್ಮೀಯನ್ನು ತೊಲಗಿಸಿ ನಮ್ಮಲ್ಲಿರುವ ನರಕರೂಪೀ ಪಾಪವಾಸನೆಗಳ ನಾಶ ಹಾಗೂ ಅಹಂಕಾರದ ಉಚ್ಚಾಟನೆ ಮಾಡುವುದಿರುತ್ತದೆ. ಆಗಲೇ ಆತ್ಮದ ಮೇಲಿನ ಅಹಂಭಾವದ ಪರದೆಯು ದೂರವಾಗಿ ಆತ್ಮಜ್ಯೋತಿಯು ಪ್ರಕಾಶಮಾನಾಗಿ ಬೆಳಗುತ್ತದೆ.

    ಲಕ್ಷ್ಮೀಪೂಜೆ
    ಕಾರಹುಣ್ಣಿಮೆ ಮತ್ತು ಆಶ್ವಯುಜ ಅಮಾವಾಸ್ಯೆಯಂದು ಲಕ್ಷ್ಮೀಯ ಪೂಜೆಯನ್ನು ಮಾಡುತ್ತಾರೆ. ಹುಣ್ಣಿಮೆ ಹಾಗೂ ಅಮಾವಾಸ್ಯೆ ಇವೆರಡೂ ಶುಭವೇ ಆಗಿವೆ ಎಂಬುದು ಇದರ ಹಿಂದಿನ ರಹಸ್ಯವಾಗಿದೆ. ‘ಹಿರಣ್ಯಮಯಿ, ತೇಜಸ್ವಿ, ಜೀವನಪೋಷಕ ಹಾಗೂ ಚೈತನ್ಯಮಯಿಯಾದಂತಹ ಲಕ್ಷ್ಮೀ ಯನ್ನು ವಾದ್ಯಘೋಷಗಳ ಸಹಿತ ಪ್ರವೇಶದ್ವಾರದಿಂದ ಮನೆಯೊಳಗೆ ಕರೆತಂದು ಅವಳ ವಾಸ್ತವ್ಯಕ್ಕೆ ಸ್ಥಾನ ನೀಡಿ ಪೂಜೆ ಮಾಡುವುದೆಂದರೆ ಲಕ್ಷ್ಮೀಪೂಜೆ.’

    ಈ ಅಮಾವಾಸ್ಯೆಯು ಶ್ರೇಷ್ಠ
    ಅಮಾವಾಸ್ಯೆಯು ಏಕತ್ವವನ್ನು ತೋರಿಸುತ್ತದೆ. ಈ ಅಮಾವಾಸ್ಯೆಯ ದಿನದಂದು ದೀಪಗಳ ಹೊಳಪು ಎಲ್ಲೆಡೆಯೂ ಶೋಭಿಸುತ್ತಿರುತ್ತದೆ. ಆದುದರಿಂದಲೇ ಈ ಅಮಾವಾಸ್ಯೆಯು ಪವಿತ್ರ ವಾಗಿದೆ. ಶರದಋತುವಿನಲ್ಲಿ ಆಶ್ವಯುಜ ಮಾಸದ ಹುಣ್ಣಿಮೆ ಮತ್ತು ಈ ಅಮಾವಾಸ್ಯೆಯು ಕಲ್ಯಾಣಕಾರಿಯಾಗಿವೆ. ಅಲ್ಲದೆ ಅವು ಎಲ್ಲ ಸಮೃದ್ಧಿಗಳನ್ನು ತರುವಂತಹವುಗಳಾಗಿವೆ. ಈ ಸಮಯದಲ್ಲಿ ರೈತರು ಬೆಳೆದ ದವಸಧಾನ್ಯ ಗಳು ಮನೆಗೆ ಬಂದಿರುತ್ತವೆ. ಮನೆಯಲ್ಲಿ ಆನಂದವಿರುತ್ತದೆ. ತಾವು ಪರಿಶ್ರಮ ಪಟ್ಟ ಫಲವು ಭಗವಂತನ ಕೃಪೆಯಿಂದ ಅವರಿಗೆ ದೊರಕಿರುತ್ತದೆ; ಕೃಷಿಯಿಂದ ಉತ್ಪನ್ನವಾದ ಬೆಳೆಯೇ ನಿಜವಾದ ಲಕ್ಷ್ಮೀಯಾಗಿದೆ. ಬೆಳೆಯು ಪ್ರತ್ಯಕ್ಷ ಜೀವನದಲ್ಲಿ ಉಪಯೋಗಿಯಾಗಿರುತ್ತದೆ. ಆದುದರಿಂದಲೇ ‘ಅನ್ನವೇ ಬ್ರಹ್ಮ’ ಎಂದು ಹೇಳಲಾಗಿದೆ.

    ಬಲಿಪಾಡ್ಯದಂದು ಬಲಿಯ ಪೂಜೆ
    ದೀಪಾವಳಿಯಲ್ಲಿನ ಕಾರ್ತಿಕ ಮಾಸದ ಪಾಡ್ಯ ಅಂದರೆ ಬಲಿಪಾಡ್ಯ. ಈ ದಿನದಂದು ಭಗವಂತನು ವಾಮನ ರೂಪದಲ್ಲಿ ಅವತರಿಸಿ ಸರ್ವಸ್ವ ವನ್ನು ಅರ್ಪಿಸಿ ದಾಸನಾಗುವ ಸಿದ್ಧತೆಯನ್ನೂ ತೋರಿಸಿದ್ದಾನೆ. ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನು ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಅವನ ರಾಜ್ಯದಲ್ಲಿ ಅಸುರೀ ವೃತ್ತಿಗೆ ಪೂರಕವಾದಂತಹ ಭೋಗಮಯ ವಿಚಾರಗಳನ್ನು ತೊಲಗಿಸಿ ಆ ಸ್ಥಾನದಲ್ಲಿ ತ್ಯಾಗದ ಭಾವನೆಯನ್ನು ಮೂಡಿಸಿ ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಹಾಗೂ ಸಮೃದ್ಧಿಯ ಜೀವನವನ್ನು ಪ್ರದಾನಿಸಿದನು. ಈ ದಿನದಂದು ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವವನ್ನು ತಲುಪಿದ ಬಲಿಯ ಸ್ಮರಣೆಯನ್ನು ಮಾಡಬೇಕು. ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಕುಕರ್ಮಗಳು ಘಟಿಸುತ್ತಿರುತ್ತವೆ; ಆದರೆ ಜ್ಞಾನ ಹಾಗೂ ಈಶ್ವರೀಕೃಪೆಯಿಂದ ದೇವತ್ವವನ್ನು ತಲುಪಬಹುದು ಎಂಬುದು ಈ ಉದಾಹರಣೆಯಿಂದ ಕಂಡುಬರುತ್ತದೆ. ಈ ರೀತಿ ನಿರ್ಭಯತೆಯಿಂದ ಸತ್ಕರ್ಮವನ್ನು ಪಾಲಿಸಿದರೆ ಅವನಿಗೆ ಮೃತ್ಯು ಭಯವು ಇರುವುದಿಲ್ಲ. ಯಮನು ಸಹ ಅವನ ಬಂಧು ಮಿತ್ರನಾಗುತ್ತಾನೆ. ಕುಂದಾಪ್ರ ಡಾಟ್ ಕಾಂ ಲೇಖನ.

    ಪಂಚಮಿಯ ಪೂಜೆ
    ಕೊನೆಯಲ್ಲಿ ಮನಸ್ಸಿನಲ್ಲಿರುವ ಮಾಲಿನ್ಯ ದೂರವಾಗಿ ಚಿತ್ತ ಶುದ್ಧಿಯಾಯಿತೆಂದರೆ ಕೆಲವು ಕಡೆ ಪಂಚಮಿಯಂದು ಈ ದೀಪಾವಳಿಯನ್ನು ಸಮಾಪ್ತಿ ಮಾಡಲು ಪಂಚಮಿ ಪೂಜೆಯನ್ನು ಆಚರಿಸುತ್ತಾರೆ.

    • ಆಧಾರ ಗ್ರಂಥ : ಸನಾತನ ಸಂಸ್ಥೆ ಪ್ರಕಾಶಿಸಿದ ಹಬ್ಬ ಮತ್ತು ಉತ್ಸವಗಳ ಮಹತ್ವ

    ► ಹಸಿರು ಪಟಾಕಿ ಅಂದ್ರೆ ಯಾವುದು ಗೊತ್ತೇ? – https://kundapraa.com/?p=42351 .

    Light fest Deepavali celebration and religious importance 

    Like this:

    Like Loading...

    Related

    Deepavali Festival
    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಶರನ್ನವರಾತ್ರಿ: ದೇವಿಯ ಒಂಭತ್ತು ಸ್ವರೂಪಗಳ ಮಹತ್ವ

    22/09/2025

    ಬೆಳಕ ಚಿತ್ರಿಸಿದ ಕ್ಷಣಗಳ ಹಬ್ಬ – ವಿಶ್ವ ಛಾಯಾಗ್ರಹಣ ದಿನ

    19/08/2025

    ಮುಖದ ಸೌಂದರ್ಯ ಹೆಚ್ಚಿಸಲು ಫೇಶಿಯಲ್‌ ಯೋಗ ಎಂಬ ಟ್ರೆಂಡ್

    11/04/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಬಸ್‌ನಲ್ಲಿ ಕುಸಿದು ಬಿದ್ದು ಮಹಿಳೆ ಸಾವು
    • ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್ ಭೇಟಿ
    • ವಿದೇಶಿ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ
    • ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಪರ್ಧೆ: ಮದರ್ ತೆರೇಸಾ ಶಾಲೆಯ ಪ್ರಿಯಾಂಶ್ ಶಂಕರ್‌ಗೆ ಚಿನ್ನದ ಪದಕ
    • ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

     

    Loading Comments...
     

      %d