ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಕೈಬಿಟ್ಟ ಶಾಸಕ ಗೋಪಾಲ ಪೂಜಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನವನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ನಿರಾಕರಿಸಿದ್ದಾರೆ.

Call us

Click Here

ಅರಣ್ಯ ಅಭಿವೃದ್ಧಿ ನಿಗಮದಿಂದ ಸಾರ್ವಜನಿಕ ಸಂಪರ್ಕಕ್ಕೆ ಯಾವುದೇ ಅನುಕೂಲಕರ ಸ್ಥಿತಿ ಇಲ್ಲದಿರುವುದು ಮತ್ತು ಶಾಸಕನಾಗಿ ಕ್ಷೇತ್ರದಲ್ಲಿ ಮಾಡಬೇಕಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟಿರುವ ಹಿನ್ನೆಲೆಯಲ್ಲಿ ಅರಣ್ಯ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುತ್ತಿರುವುದಾಗಿ ಗೋಪಾಲ ಪೂಜಾರಿ ಅವರು ’ಕುಂದಾಪ್ರ ಡಾಟ್ ಕಾಂ’ಗೆ ತಿಳಿಸಿದ್ದಾರೆ.

ನಾಲ್ಕು ಬಾರಿ ಬೈಂದೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲ ಪೂಜಾರಿ ಅವರು, ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಎರಡೆರಡು ಭಾರಿ ಸಚಿವಸ್ಥಾನ ಕೈತಪ್ಪಿದಾಗ ತಮ್ಮ ಆಕ್ರೋಶ ಬಹಿರಂಗವಾಗಿ ಹೊರಹಾಕಿದ್ದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ತಿಳಿಸಿದ್ದರಿಂದ ಸಚಿವ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದರು. ಆದರೆ ಗೋಪಾಲ ಪೂಜಾರಿ ಅವರು ರಸ್ತೆ ಅಭಿವೃದ್ಧಿ ನಿಗಮವನ್ನು ಕೇಳಿಕೊಂಡಿದ್ದರೇ, ಸಿದ್ಧರಾಮಯ್ಯನವರು ಅರಣ್ಯ ಅಭಿವೃದ್ಧಿ ನಿಗಮ ನೀಡಿದ್ದು ಇದರಿಂದ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ ಹಾಗಾಗಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

Read this

► ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನೇಮಕ  – http://bit.ly/2e2ODaq 

Click here

Click here

Click here

Click Here

Call us

Call us

Byndoor MLA K. Gopal Poojary refuses chairmanship of forest corporation

Leave a Reply