ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಹೊಳೆಯ ಮರಳು ಅಡ್ಡೆ ಇರುವ ಪ್ರದೇಶದಲ್ಲಿ ಆಯತಪ್ಪಿ ದೋಣಿಯಿಂದ ನದಿಗೆ ಬಿದ್ದ ಉತ್ತರಪ್ರದೇಶದ ಕಾರ್ಮಿಕ ರಾಮು (40) ದಾರುಣವಾಗಿ ಮೃತಪಟ್ಟಿದ್ದಾರೆ.
ಉಪ್ಪಿನಕುದ್ರು ಹೊಳೆಯಲ್ಲಿ ರಣಧೀರ ಎಂಬುವವರ ದೋಣಿಯನ್ನು ರಿಪೇರಿ ಹಾಗೂ ಪೈಂಟಿಂಗ್ ಮಾಡಿಸಲು ತೆಗೆದುಕೊಂಡು ಹೋಗುತ್ತಿದ್ದಾಗ ದೋಣಿಯನ್ನು ಸಾಗಿಸಲು ಉಪಯೋಗಿಸುವ ಬಿದಿರು ಕೋಲಿನ ಜಲ್ಲು ತುಂಡಾಗಿ ಆಯತಪ್ಪಿ ರಾಮು ಹೊಳೆಯ ನೀರಿಗೆ ಬಿದ್ದಿದ್ದರು. ದೋಣಿಯಲ್ಲಿದ್ದ ರಣಧೀರ ನೀರಿಗೆ ಹಾರಿ ನೀರಿನಿಂದ ಎತ್ತಲು ಪ್ರಯತ್ನಿಸಿದರೂ ನೀರಿನ ಸುಳಿಯಲ್ಲಿ ಸಿಗದೆ, ಸ್ಥಳೀಯರ ಸಹಾಯದಿಂದ ಬುಧವಾರ ಮಧ್ಯಾಹ್ನ ಮೃತದೇಹವನ್ನು ಮೇಲೆತ್ತಲಾಗಿತ್ತು. ಘಟನೆಯ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.