ನ.19: ಮಿ. ಆಳ್ವಾಸ್ ನುಡಿಸಿರಿ ದೇಹದಾರ್ಢ್ಯ ಸ್ಪರ್ಧೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಕರ್ನಾಟಕ ರಾಜ್ಯ ಬಾಡಿಬಿಲ್ಡಿಂಗ್ ಸಂಸ್ಥೆ ಹಾಗೂ ದ.ಕ. ಜಿಲ್ಲಾ ಬಾಡಿಬಿಲ್ಡಿಂಗ್ ಸಂಸ್ಥೆ ಇವುಗಳ ಆಶ್ಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ಈ ಬಾರಿಯ ಆಳ್ವಾಸ್ ನುಡಿಸಿರಿ-2016ರಲ್ಲಿ ರಾಜ್ಯಮಟ್ಟದ ಮಿ. ಆಳ್ವಾಸ್ ನುಡಿಸಿರಿ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ ಎಂದು ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಕಾರ್ಯಾಧ್ಯಕ್ಷ ಜಾನ್ ರೆಬೆಲ್ಲೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Call us

Click Here

ಆಳ್ವಾಸ್ ನುಡಿಸಿರಿಯಲ್ಲಿ ಇದೇ ಬಾರಿಗೆ ದೇಹದಾರ್ಢ್ಯ ಸ್ಪರ್ಧೆಯನ್ನು ಪರಿಸಚಯಿಸಿದ್ದು ನ.19ರಂದು ಅಪರಾಹ್ನ 2.00 ಗಂಟೆಯಿಂದ 4.30ರವರೆಗೆ ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆಯಲಿದೆ. ಒಟ್ಟು 7 ದೇಹತೂಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ಸುಮಾರು 100ಕ್ಕಿಂತ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ದೇಹದಾಢ್ರ್ಯಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಯ ಕೊನೆಯಲ್ಲಿ ಎಲ್ಲಾ 7 ದೇಹತೂಕ ವಿಭಾಗದ ವಿಜೇತರು ಪ್ರತಿಷ್ಠಿತ ಮಿ. ಆಳ್ವಾಸ್ ನುಡಿಸಿರಿ ಪ್ರಸಸ್ತಿಗಾಗಿ ಸೆಣಸಾಡಲಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಿಗೆ ಹಾಗೂ ಮಿ. ಆಳ್ವಾಸ್ ನುಡಿಸಿರಿ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನಗಳನ್ನು ನುಡಿಸಿರಿ ಪರವಾಗಿ ನೀಡಲಾಗುವುದು. ರಾಜ್ಯದ ಖ್ಯಾತ ದೇಹದಾರ್ಢ್ಯ ಪಟುಗಳಾದ ಲವಿನ್ ಸೋಮೇಶ್ವರ, ಸತ್ಯನಾರಾಯಣ, ನಿತ್ಯಾನಂದ ಕೋಟ್ಯಾನ್, ಆನಂದ್, ಶೌಕತ್ ಅಲಿ ಮೊದಲಾದ ದೇಹದಾರ್ಢ್ಯ ಮಿ. ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯ ದೇಹದಾರ್ಢ್ಯ ರೆಫ್ರಿ ಸುಂದರ್‍ರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply