ಆಳ್ವಾಸ್ ಸಿನಿಸಿರಿ: ಸಿನಿಪ್ರಿಯರಿಗಾಗಿ ಚಲನಚಿತ್ರೋತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಹಲವು ವಿಶೇಷತೆಗಳೊಂದಿಗೆ ಆರಂಭಗೊಳ್ಳಲಿರುವ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಕಲಾತ್ಮಕ ಸಿನಿಮಾಗಳಿಗೆ ವೇದಿಕೆಯಾಗಿರುವ ಆಳ್ವಾಸ್ ಸಿನಿಸಿರಿಯಲ್ಲಿ ಪ್ರಶಸ್ತಿ ಪುರಸ್ಕೃತ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.

Call us

Click Here

ನ.17ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಸಿನಿಸಿರಿಯಲ್ಲಿ ಪ್ರಶಸ್ತಿ ವಿಜೇತ ಹಾಗೂ ಕನ್ನಡ ಸಿನಿಮಾರಂಗದಲ್ಲಿ ದಾಖಲೆ ಮಾಡಿರುವ ಒಟ್ಟು 12 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ನ.17ರಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಈ ಮಿನಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನ.17ರಂದು ಗುಬ್ಬಚ್ಚಿಗಳು, ನಾನು ನನ್ನ ಕನಸು, ಸಿಂಹದ ಮರಿಸೈನ್ಯ, ನ.18ರಂದು ಬಂಗಾರದ ಮನುಷ್ಯ, ಅಮೆರಿಕಾ ಅಮೆರಿಕಾ, ದ್ವೀಪ, ನ.19ರಂದು ಡಿಸೆಂಬರ್ 1, ಅಮೃತಧಾರೆ, ಪುಷ್ಪಕ ವಿಮಾನ, ನ.20ರಂದು ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರ, ನಾಗರಹಾವು ಸಿನಿಮಾಗಳು ಬೆಳಿಗ್ಗೆ 10.30, ಮಧ್ಯಾಹ್ನ 2.30 ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣವನ್ನು ರೂಪಿಸಲಾಗಿದೆ. ಮಿನಿ ಥಿಯೇಟರ್ ಎನ್ನಬಹುದಾದ ರೀತಿಯಲ್ಲಿರುವ ಈ ಸಭಾಂಗಣಕ್ಕೆ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Leave a Reply