ಅಂಬೇಡ್ಕರ್ ಭವನ ಸೊತ್ತುಗಳಿಗೆ ಹಾನಿ

Call us

Call us

Call us

ಕುಂದಾಪುರ: ದಲಿತರಿಗೆ ಮೀಸಲಿಟ್ಟಿರುವ ಇಲ್ಲಿನ ಭಂಡಾರ್‌ಕಾರ್ಸ್‌ ಕಾಲೇಜು ರಸ್ತೆಯ ಲ್ಲಿರುವ ಅಂಬೇಡ್ಕರ್ ಭವನದ ಸೊತ್ತುಗಳಿಗೆ ಹಾನಿ ಉಂಟುಮಾಡಿ ರುವುದು ಬೆಳAmbetkar bhavana damagedಕಿಗೆ ಬಂದಿದ್ದು ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಲಕ್ಷಾಂತರ ರೂಪಾ ಯಿ ವೆಚ್ಚದಲ್ಲಿ 2011ರಲ್ಲಿ ನಿರ್ಮಾಣಗೊಂಡು ಲೋಕಾರ್ಪ ಣೆಗೊಂಡಿರುವ ಅಂಬೇಡ್ಕರ್ ಭವನದ ಮುಂಬದಿಯ ಸೆನಿಂಗ್ ಗಾಜು, ಕಿಟಕಿಯ ಗಾಜು, ಅಲ್ಲದೆ ಭವನದೊಳಗಿನ ಶೌಚಾಲಯದ ಪಕ್ಕದ ಬೇಸಿನ್‌ಗಳನ್ನು ಜಖಂಗೊಳಿಸಲಾಗಿದೆ.

Call us

Click Here

ಅಂಬೇಡ್ಕರ್‌ಭವನ ವಠಾರ ಮಾಲಿನ್ಯಗೊಳಿಸುವುದು, ಸೊತ್ತು ಹಾನಿಗೊಳಿಸುವುದು ನಡೆಯುತ್ತ ಲಿದ್ದರೂ ಪುರಸಭೆ ಕಣ್ಮುಚ್ಚಿ ಕುಳಿತಿದೆ. ಭವನದ ರಕ್ಷಣೆಗೆ ಸೂಕ್ತ ಏರ್ಪಾಟು ಮಾಡುವಂತೆ ಪುರಸಭೆಗೆ ಮನವಿ ಈ ಹಿಂದೆ ಸಲ್ಲಿಸಲಾಗಿದ್ದರೂ ಸ್ಪಂದನ ದೊರೆತ್ತಿಲ್ಲ. ಕಾವಲುಗಾರರ ನೇಮಕ ಮಾಡುವಂತೆ ಒತ್ತಾಯಿಸಿದ್ದರೂ ಕ್ರಮ ತೆಗೆದುಕೊಂಡಿಲ್ಲ. ಭವನದ ಒಳಪ್ರವೇಶಿಸಿ ಬಹಿರ್ದೆಶೆ ಮಾಡುವುದು, ಸೊತ್ತುಗಳಿಗೆ ಹಾನಿ ಉಂಟು ಪಡಿಸುವುದು ನಡೆಯುತ್ತಿದೆ. ದಲಿತರನ್ನು ಅಪಮಾನಿಸುವ ಇಂತಹ ಹೇಯಕತ್ಯ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸೂಕ್ತ ಹೋರಾಟ ರೂಪಿಸಲಾಗುವುದು ಎಂದು ದಲಿತ ಮುಖಂಡ ಉದಯಕುಮಾರ್ ತಲ್ಲೂರು ತಿಳಿಸಿದ್ದಾರೆ.

ಕಟ್ಟಡಕ್ಕೆ ಸುಣ್ಣ ಬಳಿಯದೆ ವರ್ಷವೇ ಸಂದಿದೆ. ರಾತ್ರಿ ಹೊತ್ತಿನಲ್ಲಿ ಭವನ ಪ್ರವೇಶಿಸಿ ಹೊಲಸು ಎಸೆಯುವುದು ನಡೆಯುತ್ತಿದೆ. ಭವನದ ಸೊತ್ತುಗಳಿಗೆ ರಕ್ಷಣೆಯೇ ಇಲ್ಲದ್ದಂತಾಗಿದೆ. ಸರಕಾರಿ ನಿರ್ಲಕ್ಷ್ಯದ ಫಲವಾಗಿ ದಲಿತರ ಸೊತ್ತು ಸಂಕಷ್ಟಕ್ಕೀಡಾಗಿದೆ. ಪುರಸಭೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಕೊರಗ ಸಮುದಾಯದ ಮುಖಂಡ ವಿ.ಗಣೇಶ್ ವಡೇರಹೋಬಳಿ ಹೇಳಿದ್ದಾರೆ.

Leave a Reply