ಕುಂದಾಪುರ: ಸತ್ವಭರಿತ ಶಿಕ್ಷಣಕ್ಕೆ ಹೆಸರಾಗಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆ 2015-16ನೇ ಸಾಲಿನಲ್ಲಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ರೆಗ್ಯುಲರ್ ತರಗತಿ ಆರಂಭಿಸಲಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪರೀಕ್ಷೆ ಎದುರಿಸುವಲ್ಲಿ ಸಶಕ್ತರಾಗಬೇಕೆಂಬ ನೆಲೆಯಲ್ಲಿ ಸಂಸ್ಥೆ ಉಚಿತ ಶಿಬಿರಕ್ಕೆ ಲಕ್ಷಾಂತರ ರೂ ವ್ಯಯಿಸಿದೆ. ಸಿಇಟಿ ಕೋಚಿಂಗ್‌ನಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನ ಪಡೆದುಕೊಂಡಿರುವ ಹೆದ್ರಾಬಾದ್‌ನ ನಾರಾಯಣಿ ಮತ್ತು ಚೆತನ್ಯ ಇನ್‌ಸ್ಟಿಟ್ಯೂಟ್‌ನ ನುರಿತ ಉಪನ್ಯಾಸಕರು ಇನ್ನು ಮುಂದಕ್ಕೆ ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ರೆಗ್ಯುಲರ್ ತರಗತಿ ತೆಗೆದುಕೊಳ್ಳಲಿದ್ದಾರೆ. ಸಿಇಟಿ, ಜೆಇಇ, ಐಐಟಿಯಂತಹ ಪರೀಕ್ಷೆಗೆ ತಳಮಟ್ಟದಿಂದಲೇ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಆಂಧ್ರದ ಈ ಉಪನ್ಯಾಸಕ ವರ್ಗ ಖ್ಯಾತಿ ವೆತ್ತಿದೆ. ಪ್ರಥಮ ಪಿಯುಸಿಯಿಂದಲೇ ಸಿಇಟಿ ತರಗತಿ ಆರಂಭಗೊಳ್ಳುವುದರಿಂದ ದೊಡ್ಡ ಮಟ್ಟದ ವೃತ್ತಿಪರ ಶಿಕ್ಷಣದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಭಯ ನೀಗಲಿದೆ ಎಂದು ತಂಡದ ಪ್ರಮುಖ ತರಬೇತುದಾರ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಸಿಇಟಿ ಕ್ರ್ಯಾಶ್ ಕೋರ್ಸ್‌ನಲ್ಲಿ ನಿರೀಕ್ಷೆಗೂ ಮೀರಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಈ ನೆಲೆಯಲ್ಲಿ ಸಿಇಟಿ ರೆಗ್ಯುಲರ್ ತರಗತಿ ನಡೆಸಬೇಕೆಂಬ ಇಚ್ಛೆ ಉಂಟಾಯಿತು. ಈ ಶೆಕ್ಷಣಿಕ ವರ್ಷದಿಂದ ಸಿಇಟಿ ಅಲ್ಲದೆ ಜೆಇಇ, ಐಐಟಿ ಮತ್ತು ಎಐಪಿಎಂಟಿ ವಿಷಯಗಳಿಗೆ ಭಾರತದಲ್ಲಿಯೇ ಹೆಸರುವಾಸಿ ಯಾಗಿರುವ ಹೈದ್ರಾಬಾದ್‌ನ ನಾರಾಯಣಿ ಮತ್ತು ಚೈತನ್ಯ ಸಂಸ್ಥೆ ಅನುಭವಿ ಶಿಕ್ಷಕರು ತರಗತಿ ನಡೆಸಿಕೊಡಲಿದ್ದಾರೆ. ಇಲ್ಲಿಯೇ ವಾಸ್ತವ್ಯವಿದ್ದು ಮಾರ್ಗದರ್ಶನ ನೀಡಲಿ ದ್ದಾರೆ. ಸಿಇಟಿಯಲ್ಲಿ ರಾಷ್ಟ್ರೀಯ ಮಟ್ಟದ ತರಬೇತಿ ನೀಡಿದ 20 ವರ್ಷಕ್ಕೂ ಅಧಿಕ ಅನುಭವಿ ಉಪನ್ಯಾಸಕರಿವರು. ಈ ನೆಲೆ ಯಲ್ಲಿ ಪ್ರಥಮ ಪಿಯುಸಿಯಿಂದಲೇ ಈ ಶೆಕ್ಷ ಣಿಕ ವರ್ಷದಲ್ಲಿ ತರಗತಿ ಆರಂಭಿಸ ಲಾಗುತ್ತದೆ. ಅಧ್ಯಯನಕ್ಕೆ ಬೇಕಾಗುವ ಕಲಿಕಾ ಸಾಮಗ್ರಿ, ಪ್ರತಿ ವಿಷಯ ಮತ್ತು ಅಧ್ಯಾಯ ಗಳಿಗೆ ಬೇಕಾಗುವ ಕಲಿಕಾ ಪರಿಕರ, ಪ್ರತಿ ಶನಿವಾರ ಪದವಿ ಪೂರ್ವ ಮಂಡಳಿಯ ಪ್ರಶ್ನೆ ಪತ್ರಿಕೆ ಯನ್ನಾಧರಿಸಿದ ಮಾದರಿ ಪರೀಕ್ಷೆಗಳು, ಪ್ರತಿ ಸೋಮವಾರ ಸಿಇಟಿ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ನಿರಂತರ ವೌಲ್ಯಮಾಪನ ವಿವರಗಳನ್ನು ಪೋಷಕರಿಗೆ ಪ್ರತಿ ವಾರ ತಿಳಿಸಲಾಗುತ್ತದೆ. ಪ್ರತಿ 6 ವಾಕ್ಕೊಮ್ಮೆ ಪೋಷಕರ ಸಭೆ ಕರೆದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸ ಲಾಗುತ್ತದೆ. ಇದೊಂದಿಗೆ ಉಚಿತ ಸೇತು ಬಂಧ(ಬ್ರಿಡ್ಜ್ ಕೋರ್ಸ್) ನೀಡಲಾ ಗುತ್ತದೆ. ಮುಂದಿನ ವರ್ಷ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತ ಆರಂಭಿಸುವ ಬಗ್ಗೆ ಸಂಸ್ಥೆ ಚಿಂತನೆ ನಡೆಸಿದೆ ಎಂದು ಡಾ.ಜಿ.ಎಚ್. ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.