ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ‘ರಾಜಕಾರಣ’ದ ಬಗ್ಗೆ ವಿಷಯ ಮಂಡಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆಳ್ವಾಸ್ ಕಾಲೇಜಿಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರವೇಶ ಹೆಚ್ಚುತ್ತಿರುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡದ್ದು ಹೀಗೆ
ದಕ್ಷಿಣ ಕನ್ನಡದಲ್ಲಿ ಪ್ರತಿವರ್ಷ ೨೫ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿಯೂ ಇದೆ ಸ್ಥಿತಿ ಇದೆ. ಆದರೆ ಮೂಡಬಿದಿರೆಯ ಆಳ್ವಾಸ್ ಕನ್ನಡ ಶಾಲೆಗೆ ಮಾತ್ರ ಪ್ರವೇಶ ಪರೀಕ್ಷೆ ಬರೆಯಲು ೮೦೦೦ದಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕೆಂದರೆ ಡಾ. ಆಳ್ವರು ದಕ್ಷಿಣ ಕನ್ನಡದಲ್ಲಿಯೇ ೨೮ ಶಾಲೆಗಳನ್ನು ತೆರೆಯಬೇಕಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಉತ್ಕೃಷ್ಟ ಶಿಕ್ಷಣ ಹೇಗೆ ನೀಡಬೇಕೆಂಬುದಕ್ಕೆ ಡಾ. ಮೋಹನ್ ಆಳ್ವರ ಸಂಸ್ಥೆಯೇ ಮಾದರಿ. ಹೀಗಾಗಿ ಅವರನ್ನು ರಾಜ್ಯದ ಶಿಕ್ಷಣ ಮಂತ್ರಿಯಾಗಿಸುವುದು ಒಳಿತು.