ಕುಂದಾಪ್ರ ಡಾಟ್ ಕಾಂ ವರದಿ.
ಒಂದು ಭಾಷೆಯನ್ನು ಉಳಿಸುವ, ಕಟ್ಟುವ, ಬಳಕೆಗೆ ಅನುಕೂಲವಾಗುವಂತೆ ಮಾಡುವ ಕಾರ್ಯ ವಿಶ್ವದೆಲ್ಲಡೆಯೂ ನಡೆಯುತ್ತಲೇ ಇರುತ್ತದೆ. ಅದರೊಂದಿಗೆ ವಿಶ್ವವ್ಯಾಪಿಯಾದ ಭಾಷೆಯೆದುರು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಪ್ರಾದೇಶಿಕ ಭಾಷೆಗಳನ್ನು ವಿಶ್ವಭಾಷೆಗೆ ಸರಿಸಾಟಿಯಾಗಿ ನಿಲ್ಲಿಸಬೇಕೆಂಬ ಪ್ರಯತ್ನಗಳೂ ಸದಾ ಒಂದಿಲ್ರ್ಲೆಂದು ರೂಪದಲ್ಲಿ ಚಾಲ್ತಿಯಲ್ಲಿರುತ್ತದೆ ಇಂತಹ ಭಾಷೆಯನ್ನು ಜೀವಂತವಾಗಿರಿಸಿ ಆಯಾ ಭಾಷೆಗಳಲ್ಲಿಯೇ ಲೇಖನಗಳನ್ನು ಪ್ರಕಟಿಸಿ ಜ್ಞಾನವನ್ನು ಹಂಚಿಕೊಳ್ಳುವ ಕಾರ್ಯಕ್ಕೆ ಆಧುನಿಕ ಯುಗದಲ್ಲಿ ತಾಂತ್ರಿಕ ನೆಲೆಗಟ್ಟನ್ನು ಒದಗಿಸಿ ಪೋಷಿಸುತ್ತಿರುವುದು ಲಾಭರಹಿತ ಸ್ವಂತಂತ್ರ ವಿಶ್ವಕೋಶ ವಿಕಿಪೀಡಿಯ.
ವಿಕಿಪೀಡಿಯಾದಲ್ಲಿ ಕರಾವಳಿ ಕರ್ನಾಟಕದ ಭಾಷೆಗಳು
ಕನ್ನಡವೂ ಸೇರಿದಂತೆ ಜಗತ್ತಿನ ೨೯೪ ಭಾಷೆಗಳಲ್ಲಿ ಲಭ್ಯವಿರುವ ‘ವಿಕಿಪಿಡಿಯಾ ವಿಶ್ವಕೋಶ’ ಕರ್ನಾಟಕ ಕರಾವಳಿಯ ಭಾಷೆಗಳನ್ನು ಅಂತರ್ಜಾಕ್ಕೆ ಸೇರಿಸುವ ಕಾರ್ಯದಲ್ಲಿಯೂ ನಿರತವಾಗಿದೆ. ಕರಾವಳಿ ಭಾಷೆಗ ವಿಕಿಮೀಡಿಯನ್ನರ ಮುತುವರ್ಜಿಯಿಂದಾಗಿ ಕರ್ನಾಟಕ ಕರಾವಳಿಯ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪ್ರಮುಖ ಭಾಷೆಗಳಾದ ಕನ್ನಡ, ತುಳು, ಕೊಂಕಣಿಯನ್ನೂ ವಿಕೀಕರಣಗೊಳಿಸುವ ಪ್ರಯತ್ನ ಆಸಕ್ತರ ಬಳಗದಿಂದ ಸದ್ದಿಲ್ಲದೇ ಸಾಗಿದೆ.
ಇದೇ ಉದ್ದೇಶದಿಂದ ಹುಟ್ಟಿಕೊಂಡ ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯ ಪ್ರಮುಖ ಭಾಷೆಯ ಮಾಹಿತಿ, ಲೇಖನಗಳನ್ನು ವಿಕಿಪೀಡಿಯಾಕ್ಕೆ ಸೇರಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಕರ್ನಾಟಕ ಕರಾವಳಿಯ ತುಳುಭಾಷಿಕರಿರುವ ಶಾಲೆಗಳಲ್ಲಿ ತುಳು ಭಾಷೆಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಒಂದು ವಿಶ್ವಕೋಶವನ್ನು ಒದಗಿಸುವುದಕ್ಕೆ ವಿಕಿಪೀಡಿಯಾದಂತಹ ಸ್ವತಂತ್ರ ವಿಶ್ವಕೋಶ ಮುಂದೆ ಸಹಕಾರಿಯಾಗಲಿದೆ ಎಂಬ ಕಾರಣದಿಂದ ಕರಾವಳಿ ವಿಕಿಮೀಡಿಯನ್ನರ ಸಂಘ ಇಲ್ಲಿನ ಭಾಷೆಗಳಲ್ಲಿ ವಿಕಿಪೀಡಿಯಾವನ್ನು ನಿರ್ವಹಿಸುತ್ತಿದೆ.
ನುಡಿಸಿರಿಯಲ್ಲಿ ಕಾರ್ಯಾಗಾರ
ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ ೨೦೧೬ರಲ್ಲಿ ಮೊದಲ ಭಾರಿಗೆ ಕರಾವಳಿ ಮಿಕಿಮೀಡಿಯನ್ನರುಗಳ ಸಂಘವು ಕನ್ನಡ, ತುಳು ಮತ್ತು ಕೊಂಕಣಿ ವಿಕಿಪೀಡಿಯಾಗಳ ಸಂಪಾದನೋತ್ಸವ, ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದು ಕರಾವಳಿ ಭಾಷೆಗಳನ್ನ್ಲು ವಿಕಿಪೀಡಿಯಾದಲ್ಲಿ ಬಳಸಿಕೊಳ್ಳುವ ಬಗೆಗೆ ಮಾಹಿತಿ ಒದಗಿಸುತ್ತಿದೆ.
ಕನ್ನಡ ವಿಕಿಪೀಡಿಯಾದ ನಿರ್ವಾಹಕ ಯು. ಬಿ. ಪವನಜ ಅವರ ಮಾರ್ಗದರ್ಶನದಲ್ಲಿ ಕರಾವಳಿ ಮಿಕಿಮೀಡಿಯನ್ನರ ಸಂಘವು ಅಸ್ತಿತ್ವಕ್ಕೆ ಬಂದಿದ್ದು, ಅಂತರ್ಜಾಲ ಕೇಂದ್ರಿತ ಈ ಸಂಘದಲ್ಲಿ ಈವರೆಗೆ ೧೮ಮಂದಿ ಸದಸ್ಯರಾಗಿದ್ದಾರೆ. ವಿಕಿಪೀಡಿಯಾದ ಬಗ್ಗೆ ಕಾರ್ಯಗಾರ ಹಮ್ಮಿಕೊಂಡು ವಿಕಿಪೀಡಿಯಾ ಶಿಕ್ಷಣ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದೊಂದಿಗೆ ಕಾರ್ಯಚರಿಸುತ್ತಿದೆ.
ನಿಮಗೆ ಗೊತ್ತಾ?
- ಅಂತರ್ಜಾಲದಲ್ಲಿ ಪ್ರತಿ ವಿಷಯಕ್ಕೂ ಆಕರವನ್ನು ಸೂಚಿಸುವ ಸ್ವತಂತ್ರ ವಿಶ್ವಕೋಶ – ವಿಕಿಪೀಡಿಯಾ
- ಅತಿ ಹೆಚ್ಚು ಓದುಗರನ್ನು ಪಡೆದಿರುವ ವಿಶ್ವದ ೫ನೇ ಮುಖ್ಯ ಜಾಲತಾಣ
- ವಿಕಿಪೀಡಿಯಾದಲ್ಲಿ ಜಗತ್ತಿನ ೨೯೪ ಭಾಷೆಗಳಲ್ಲಿ ೩ ಕೋಟಿಗೂ ಅಧಿಕ ಲೇಖನಗಳಿವೆ
- ೨೦೦೩ರಿಂದ ಕನ್ನಡದಲ್ಲಿ ವಿಕಿಪೀಡಿಯಾ ಅಸ್ತಿತ್ವದಲ್ಲಿದೆ.
- ಕರಾವಳಿ ಕರ್ನಾಟಕದ ತುಳು, ಕೊಂಕಣಿ ಭಾಷೆಯೂ ವಿಕಿಪೀಡಿಯಾದಲ್ಲಿದೆ.
- ವಿಕಿಮೀಡಿಯಾ ಫೌಂಡೇಷನ್ ಎಂಬ ಲಾಭರಹಿತ ಸಂಸ್ಥೆಯ ಬೆಂಬಲದಿಂದ ಲಕ್ಷಾಂತರ ಸ್ವಯಂ ಸೇವಕರಿಂದ ಸಂಪಾದಿಸಲ್ಪಡುತ್ತಿರುವ ಸ್ವತಂತ್ರ ಮತ್ತು ಮುಕ್ತ ಅಂತರ್ಜಾಲ ತಾಣ
- ವಿಕಿಪೀಡಿಯಾ ಕನ್ನಡ ವಿಭಾಗವನ್ನು ಪ್ರಸಿದ್ಧ ಗ್ಯಾಜೆಟಿಯರ್ ಯು. ಬಿ. ಪವನಜ ನಿರ್ವಹಿಸುತ್ತಿದ್ದು, ನೂರಾರು ಬರಹಗಾರರಿಂದ ಕನ್ನಡದಲ್ಲಿ ಈವರೆಗೆ ಸಾವಿರಾರು ಲೇಖನಗಳು, ಮಾಹಿತಿ ಪ್ರಕಟಿಗೊಂಡಿದೆ.
ಉತ್ತಮ ವರದಿಗೆ ಧನ್ಯವಾದಗಳು