ಶ್ರೀ ಕ್ಷೇತ್ರ ಹಾಲಾಡಿ ಯಕ್ಷಗಾನ ಮೇಳ ತಿರುಗಾಟಕ್ಕೆ ಚಾಲನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಿದ್ದಾಪುರ: ನಟನೆ ಹಾಗೂ ಭಾವನೆಗಳಿಂದ ಕೂಡಿದ ಕಲೆ ಯಕ್ಷಗಾನ. ಯಕ್ಷಗಾನವನ್ನು ನಂಬಿ ಬೆಳೆದು ಬಂದವರು ಹೆಸರು ಪಡೆದುಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಂದ ನಡೆಯಲ್ಪಡುವ ಯಕ್ಷಗಾನ ಮೇಳಗಳು ಧರ್ಮವನ್ನು ಪ್ರಸಾರ ಪಡಿಸುತ್ತವೆ. ಭಕ್ತರ ಭಕ್ತಿಯ ಭಂಡಾರ ಹೋತ್ತು ಸಾಗುವ ಕಲೆ ಯಕ್ಷಗಾನ. ಇದು ಧರ್ಮವನ್ನು ಸಾರುವ ರಥವಾಗಿದೆ ಎಂದು ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಅವರು ಹೇಳಿದರು.
ಅವರು ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದಲ್ಲಿ ನಡೆದ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಪ್ರಥಮ ದೇವರ ಸೇವೆಯಾಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Call us

Click Here

ಒಳ್ಳೆಯ ಆಡಳಿತಗಾರರು ಇದ್ದಾಗ ಕ್ಷೇತ್ರಗಳು ಹಾಗೂ ಕ್ಷೇತ್ರಗಳಿಂದ ನಡೆಸಲ್ಪಡುವ ಮೇಳಗಳು ಅಭಿವೃದ್ಧಿ ಹೊಂದುತ್ತವೆ. ಕ್ಷೇತ್ರದ ಧರ್ಮದರ್ಶಿ ಹಾಲಾಡಿ ತಾರನಾಥ ಶೆಟ್ಟಿಯ ಬದ್ದತೆ, ಮೇಳದ ವ್ಯವಸ್ಥಾಪಕರಾದ ವೈ. ಕರುಣಾಕರ ಶೆಟ್ಟಿ ಅವರ ಕರ್ತವ್ಯ ನಿಷ್ಠೆ ಹಾಲಾಡಿ ಮೇಳವನ್ನು ಉನ್ನತ ಸ್ಥಾನಕ್ಕೆ ಕೊಂಡೋಯ್ದಿದೆ ಎಂದು ಹೇಳಿದರು.

ಪೆರ್ಡೂರು ಹಾಗೂ ಹಾಲಾಡಿ ಮೇಳದ ಸಂಚಾಲಕ ವೈ. ಕರುಣಾಕರ ಶೆಟ್ಟಿ ಅವರು ಮೇಳದ ಪ್ರಥಮ ದೇವರ ಸೇವೆಯಾಟಕ್ಕೆ ಚಾಲನೆ ನೀಡಿ ಮಾತನಾಡಿ, ಹಾಲಾಡಿ ಮೇಳವು ಈ ಬಾರೀ ಅಽಕೃತವಾಗಿ ನನಗೆ ಸಿಕ್ಕಿರುದು ಬಯಸದೆ ಬಂದ ಭಾಗ್ಯವಾಗಿದೆ. ಈ ಬಾರೀ ಮೇಳವನ್ನು ನೂತನವಾಗಿ ಸುಸಜ್ಜೀತವಾಗಿ ತಿರುಗಾಟಕ್ಕೆ ಹೊರಟಿದೆ. ಹಾಲಾಡಿ ಮೇಳವನ್ನು ಯಕ್ಷಗಾನ ಮೇಳದಲ್ಲಿಯೇ ನಂಬರ್‌ಒನ್ ಮೇಳವಾಗಿ ಮಾಡಲಾಗುದು. ಕಲಾವಿದರು ಕಲೆಗೆ ಗೌರವ ನೀಡುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಆಡಳಿತ ಮೊಕ್ತೇಸರ ಹಾಲಾಡಿ ತಾರಾನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಶ್ರೀ ಮರ್ಲುಚಿಕ್ಕು ದೈವಸ್ಥಾನದ ಜೀಣೋದ್ಧಾರ ಸಮಿತಿ ಗೌರಾವಾಧ್ಯಕ್ಷ ಎಚ್. ರಾಮಚಂದ್ರ ಶೆಟ್ಟಿ ಅವರು ಮೇಳದ ರಂಗಸ್ಥಳ ನಿರ್ಮಾಣ ಮಾಡಿರುವ ಮಂಜುನಾಥ ಆಚಾರ್ಯ ಹಳ್ಳಾಡಿ ಅವರನ್ನು ಸಮ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ವಾಸ್ತು ತಜ್ಞ ಹಾಗೂ ಪ್ರಸಂಗಕರ್ತ ಬಸವ ಶೆಟ್ಟಿಗಾರ್, ಜನಜಾಗೃತಿ ವೇದಿಕೆಯ ಹಾಲಾಡಿ ವಲಯಾಧ್ಯಕ್ಷ ತಲ್ಲೂರುಮಕ್ಕಿ ಗಣಪಯ್ಯ ಶೆಟ್ಟಿ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಮಂಜುನಾಥ ಕಾಮತ್, ಹಾಲಾಡಿ ಮೇಳದ ವ್ಯವಸ್ಥಾಪಕ ಮೋಹನ್ ಬಡಾಳ ಹಾಗೂ ದೇವಸ್ಥಾನದ ಆಡಳಿತ ಮಂಡಳಿ, ಪ್ರತಿನಿಽಗಳು ಮತ್ತು ಮೊದಲಾದವರು ಉಪಸ್ಥಿತರಿದರು. ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Leave a Reply