ಮೈಸೂರು ವಿವಿ 95ನೇ ವಾರ್ಷಿಕ ಘಟಿಕೋತ್ಸವ

Call us

Call us

Call us

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ 95ನೇ ಘಟಿಕೋತ್ಸವ ಸಮಾರಂಭ ಏ.17 ರಂದು ನಡೆಯಲಿದ್ದು, 28,580 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ. ಅಂದು ಬೆಳಗ್ಗೆ 11ಕ್ಕೆ ಕ್ರಾಫ‌ರ್ಡ್‌ ಭವನದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ಭಾರತೀಯ ವಿಜಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಪೊ›.ಗೋವರ್ಧನ್‌ ಮೆಹ್ತಾ ಪದವಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ವಜುಬಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪೊ›.ಕೆ.ಎಸ್‌.ರಂಗಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Call us

Click Here

ಈ ಬಾರಿ ಮೈಸೂರು ವಿವಿ ವ್ಯಾಪ್ತಿಯ 28,580 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಇವರಲ್ಲಿ 16,259 ಮಹಿಳೆಯರು (ಶೇ.57) ಮತ್ತು 12,321 ಪುರುಷರು(ಶೇ.43) ಗಳಿಗೆ ಪದವಿ ನೀಡಲಾಗುತ್ತಿದ್ದು, ಕಳೆದ ವರ್ಷದಂತೆ ಈ ವರ್ಷವೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಪದವಿ ಸ್ವೀಕಾರ ಮಾಡುತ್ತಿರುವ ಪೈಕಿ 21,683 (ಮಹಿಳೆಯರು-12,665, ಪುರುಷರು-9018) ಪದವಿ, 6507 (ಮಹಿಳೆಯರು-3461, ಪುರುಷರು-3046) ಜನರಿಗೆ ಸ್ನಾತ್ತಕೋತ್ತರ ಪದವಿ ಹಾಗೂ 390 (ಪುರುಷರು-257, ಮಹಿಳೆಯರು-133,) ಮಂದಿಗೆ ಪಿಎಚ್‌ಡಿ ಪದವಿ ನೀಡಲಾಗುತ್ತಿದೆ.

ಪಿಎಚ್‌ಡಿ ಪದವಿ: ವಿವಿಧ ವಿಷಯಗಳಲ್ಲಿ 390 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುತ್ತಿದ್ದು, ಇವರಲ್ಲಿ 257 ಪುರುಷರು ಮತ್ತು 133 ಮಹಿಳೆಯರು ಸೇರಿದ್ದಾರೆ. ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದ 12 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಚಿನ್ನದ ಪದಕ ಮತ್ತು ಬಹುಮಾನ ವಿತರಣೆ ಮಾಡಲಾಗುವುದು. ಉಳಿದವರಿಗೆ ಸಂಜೆ 4ಕ್ಕೆ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಪಿಎಚ್‌ಡಿ, ಬಹುಮಾನ ಮತ್ತು ಚಿನ್ನದ ಪದಕ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು. ವಿವಿ ಪರೀûಾಂಗ ಕುಲಸಚಿವ ಪೊ›.ಜಯದೇವರಾಜೇ ಅರಸ್‌ ಸುದ್ದಿಗೋಷ್ಠಿಯಲ್ಲಿದ್ದರು.

202 ಮಂದಿಗೆ ಚಿನ್ನದ ಪದಕ, ಬಹುಮಾನ
ವಿವಿಧ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 202 ವಿದ್ಯಾರ್ಥಿಗಳಿಗೆ ವಿವಿಯಲ್ಲಿ ಸ್ಥಾಪಿಸಿರುವ ದತ್ತಿ 318 ಚಿನ್ನದ ಪದಕ ಹಾಗೂ 172 ನಗದು ಬಹುಮಾನ ವಿತರಿಸಲಾಗುತ್ತಿದೆ. ಬಹುಮಾನ ಪಡೆಯುತ್ತಿರುವವರ ಪೈಕಿಯೂ ಮಹಿಳೆಯರೇ ಮೇಲುಗೈ ಸಾಧಿಸಿದ್ದು, 123 ಮಂದಿ ಮಹಿಳೆಯರಿಗೆ ಮತ್ತು 79 ಪುರುಷರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಲಾ ನಿಕಾಯದಲ್ಲಿ 127 ಮಂದಿ ಸಂಶೋಧಕರಿಗೆ ಪಿಎಚ್‌ಡಿ ಪದವಿ ಕೊಡಲಾಗುತ್ತಿದ್ದು, 7615 ಅಭ್ಯರ್ಥಿಗಳಿಗೆ ಸ್ನಾತ್ತಕ ಮತ್ತು ಸ್ನಾತ್ತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ. ಅದರಂತೆ ವಾಣಿಜ್ಯ ನಿಕಾಯದಲ್ಲಿ 22 ಮಂದಿಗೆ ಪಿಎಚ್‌ಡಿ, 11,810 ಪದವಿ, ಶಿಕ್ಷಣ ನಿಕಾಯದಲ್ಲಿ 20 ಪಿಎಚ್‌ಡಿ, 3853 ಪದವಿ, ಕಾನೂನು ನಿಕಾಯದಲ್ಲಿ 5 ಪಿಎಚ್‌ಡಿ, 34 ಪದವಿ, ವಿಜಾnನ ಮತ್ತು ತಂತ್ರಜಾnನ ನಿಕಾಯದಲ್ಲಿ 216 ಪಿಎಚ್‌ಡಿ, 4878 ಅಭ್ಯರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಬ್ಯಾಚುಲರ್‌ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ನೀಡಲಾಗುತ್ತಿದೆ ಎಂದು ಹೇಳಿದರು.

Click here

Click here

Click here

Click Here

Call us

Call us

Leave a Reply