ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ನಲ್ಲಿ ಧರ್ಮಗುರು ರೆ. ಫಾ .ರೋನಾಲ್ಡ್ ಮಿರಾಂದ ಅಧ್ಯಕ್ಷತೆಯಲ್ಲಿ ನಡೆದ ಚರ್ಚ್‌ನ ಪಾಲನ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಸ್ಟ್ಯಾನಿ ಡಯಾಸ್ ಹಾಗೂ ಕಾರ್ಯದರ್ಶಿಯಾಗಿ ಅನಿತಾ ನಜ್ರೆತ್ ಇವರು ಸರ್ವಾನುಮತದಿಂದ ಆಯ್ಕೆಯಾದರು. ಮುಖ್ಯ ಸಂಘಟಕರಾಗಿ ಸಿಸಿಲಿಯಾ ರೆಬೆರೊ ಮತ್ತು ಆರ್ಥಿಕ ಸಮಿತಿ ಸದಸ್ಯರಾಗಿ ಡಾ. ರೋಶನ್ ಪಾಯಸ್, ವೋಲ್ಗಾ ಡಯಾಸ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೊ, ಮಾರ್ಟಿನ್ ಡಯಾಸ್ ಸಹಕರಿಸಿದರು.