ಕುಂದಾಪ್ರ ಡಾಟ್ ಕಾಂ ಸಉದ್ದಿ.
ಕೋಟೇಶ್ವರ: ಕುಂದಾಪುರದ ಕ್ರಿಕೆಟ್ ತಂಡ ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ ತಂಡ ಎಮ್‌ಪಿಎಲ್ ಸೆಮಿಫೈನಲ್‌ಗೆ ದಾಪುಗಾಲನ್ನಿಟ್ಟಿದೆ. ತಂಡ ಆಡಿದ ಐದು ಪಂದ್ಯದಲ್ಲಿ ನಾಲ್ಕರಲ್ಲಿ ಗೆದ್ದು ಸೆಮಿಸ್‌ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸೆಮಿಫೈನಲ್ ಪಂದ್ಯ ಡಿಸೆಂಬರ್ ೨೯ ರಂದು ನಡೆಯಲಿದೆ
ತಂಡದ ಪ್ರಮುಖ ಆಟಗಾರರಾದ ಬಿ.ಅಖಿಲ್, ಕೆ.ಸಿ.ಕಾರಿಯಪ್ಪ, ಮಾಷುಕ್ ಹುಸೇನ್ ಹಾಗೂ ನೇಹಲ್ ಡಿಸೋಜ ಅವರ ಸ್ಥಿರವಾದ ಆಟದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ತಂಡದಲ್ಲಿ ಕುಂದಾಪುರದ ಸ್ಥಳೀಯ ಪ್ರತಿಭೆಗಳಾದ ಶಶಾಂಕ್ ಪೂಜಾರಿ, ವಿಘ್ನೇಶ್ ಭಟ್ ಹಾಗೂ ಪ್ರಸನ್ನ ನಾವಡ ಅವರು ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಕೋಟೇಶ್ವರದ ಉದ್ಯಮಿ ಅಬ್ದುಲ್ ಸತ್ತಾರ್ ಅವರ ಮಾಲೀಕತ್ವದ ತಂಡ ಭಾಗವಹಿಸಿದ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಎಲ್ಲರಿಗೂ ಸಂತಸ ತಂದಿದೆ. ತರಬೇತುದಾರರಾಗಿ ಕುಂದಾಪುರ ಪ್ರದೀಪ್ ವಾಜ್ ತಂಡವನ್ನು ಸನ್ನದ್ದುಗೊಳಿಸಿದ್ದರು.
ಗೆಲುವಿನ ದಾರಿ:
ಮೊದಲ ಪಂದ್ಯ ಎಸ್‌ಎ ಬೋಳಾರ್ ವಿರುದ್ದ ಮೂರು ವಿಕೆಟ್‌ನಿಂದ ಗೆಲುವು, ದ್ವಿತೀಯ ಪಂದ್ಯ ಕೋಸ್ಟಲ್ ಡೈಜೆಸ್ಟ್ ವಿರುದ್ಧ ೩೮ ರನ್ನಗಳಿಂದ ಸೋಲು, ಮೂರನೇ ಪಂದ್ಯಾಟದಲ್ಲಿ ಯುನೈಟೆಡ್ ಉಳ್ಳಾಲ ಎದುರು ಮೂರು ರನ್ನಗಳಿಂದ ರೋಮಾಂಚನಕಾರಿಯಾಗಿ ಗೆಲುವು. ನಾಲ್ಕನೆಯ ಪಂದ್ಯಾಟದಲ್ಲಿ ಸುರತ್ಕಲ್ ಸ್ಟೈಕರ‍್ಸ್ ವಿರುದ್ಧ ೭೨ ರನ್‌ಗಳಿಂದ ಗೆಲುವು ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಉಡುಪಿ ಟೈಗರ‍್ಸ್ ವಿರುದ್ಧ ಏಳು ವಿಕೆಟ್‌ಗಳಲ್ಲಿ ದಾಖಲೆಯ ಗೆಲುವು ಸಾಧಿಸಿದೆ. ಕೋಟೇಶ್ವರದ ಕೋಡಿ ಹಬ್ಬದ ಸಂದರ್ಭದಲ್ಲಿ ಹಿಂದಿಯ ಚಲನಚಿತ್ರ ನಟ ಸುನೀಲ್ ಶೆಟ್ಟಿ ತಂಡದ ಜೆರ್ಸಿ ಹಾಗೂ ಥೀಂ ಹಾಡನ್ನು ಅನಾವರಣಗೊಳಿಸಿದ್ದರು.