ಮನ್ನಣೆಯ ದಾಹ ಕಡಿಮೆಯಿರುವ ಸಂಸ್ಥೆಗಳಿಗೆ ಅವನತಿಯಿಲ್ಲ: ಓಂಗಣೇಶ ಉಪ್ಪುಂದ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಆರ್ಥಿಕ ಸಂಸ್ಥೆಯು ಲಾಭದ ಕಡೆ ಹೆಚ್ಚು ಗಮನ ನೀಡಿದೆ, ಲಾಭದಲ್ಲಿ ಹೆಚ್ಚಿನ ಹಣವನ್ನು ಮಕ್ಕಳ ವಿದ್ಯಾಭ್ಯಾಸ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕಿದೆ. ಮನ್ನಣೆಯ ದಾಹ ಕಡಿಮೆಯಿರುವ ಸಂಸ್ಥೆಗಳಿಗೆ ಅವನತಿ ಇಲ್ಲ ಹಾಗೂ ಇವುಗಳ ಬೆಳವಣಿಗೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ಆರ್ಥಿಕ ಸಂಸ್ಥೆಗಳು ಆಧುನಿಕತೆಗೆ ತೆರದುಕೊಳ್ಳುವ ಮೂಲಕ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಬೇಕಿದೆ. ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸುವ ಹಾಗೂ ಅವರ ಆದರ್ಶ, ಚಿಂತನೆಗಳನ್ನು ಆರ್ಥಿಕ ಸಂಸ್ಥೆಗಳಲ್ಲಿ ಅಳವಡಿಸಿಕೊಂಡು ಮಾದರಿ ಸಂಸ್ಥೆಯನ್ನಾಗಿ ಬೆಳೆಸಬೇಕಿದೆ ಎಂದು ಅಂಕಣಕಾರ ಓಂಗಣೇಶ ಉಪ್ಪುಂದ ಅಭಿಪ್ರಾಯಪಟ್ಟರು.

Call us

Click Here

ಅವರು ಆದಿತ್ಯವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಸದೃಢ ಆರ್ಥಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಹಕಾರಿಯು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದರ ಜೊತೆಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವುದು ಮತ್ತು ಶಿಕ್ಷಕರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಪ್ರಶಂಸನೀಯ ಎಂದರು.

ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಹಕಾರಿಯ ಮಾಜಿ ನಿರ್ದೇಶಕ ಕೆ.ಗೋಪಾಲಕೃಷ್ಣ ನಾಯಕ್ ಮತ್ತು ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಭಟ್ಕಳ ಶಾಖೆಯ ವ್ಯವಸ್ಥಾಪಕ ಗಣಪತಿ ಪಿ.ಪ್ರಭು ಅವರನ್ನು ಅಭಿನಂದಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಜಿ.ವೆಂಕಟೇಶ ನಾಯಕ್, ಜಿ.ವೆಂಕಟೇಶ ಶೆಣೈ, ಬಿ.ರಾಘವೇಂದ್ರ ಪೈ, ಉದಯಶಂಕರ ರಾವ್, ಮಹಾಬಲ ಪೂಜಾರಿ, ನಾರಾಯಣ ಪೂಜಾರಿ, ವತ್ಸಲಾ ಎಸ್.ಕಾಮತ್, ಮಾಲಾ ಕೆ.ನಾಯಕ್, ಆನಂದ ಜಿ. ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಬ್ಬಂದಿಗಳಾದ ಗಿರೀಶ ಶ್ಯಾನುಭಾಗ್ ಅತಿಥಿಗಳನ್ನು, ರಕ್ಷಾ ಶೆಣೈ ಮತ್ತು ಚೇತನ್ ಕಾಮತ್ ಸನ್ಮಾನಿತರನ್ನು ಪರಿಚಯಿಸಿದರು. ಅಶ್ವಿನಿ ಖಾರ್ವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಿತಾರಾ ಕಾರ್ಯಕ್ರಮ ನಿರೂಪಿಸಿದರು. ಮಹೇಶ ಶೆಣೈ ವಂದಿಸಿದರು.

Leave a Reply