ಜೇಸಿಐ ಕುಂದಾಪುರ ಸಿಟಿ ಪದಪ್ರದಾನ ಸಮಾರಂಭ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವಶಕ್ತಿ ರಾಷ್ಟ್ರದ ಶಕ್ತಿ. ಯುವಕರಲ್ಲಿ ಅಗಾಧ ಪ್ರತಿಭೆಯಿದ್ದು, ತಮ್ಮ ಪ್ರತಿಭೆಯನ್ನು ಸಮಾಜದ ಅಭ್ಯುದಯಕ್ಕೆ ಬಳಸಿಕೊಳ್ಳಲು ಬದ್ಧತೆ ತೋರಿಸಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾರ್ಥ ದ್ವೇಷ ಮರೆತು ಸತ್ಪ್ರಜೆಗಳಾಗಿ ಬದುಕಬೇಕಿದೆ. ಭಾರತದ ಶ್ರೇಷ್ಠತೆ, ಸನಾತನ ಧರ್ಮದ ಔಚಿತ್ಯವನ್ನು ಜಗತ್ತಿಗೆ ತೋರಿಸುವ ಸಲುವಾಗಿ ನಾವೆಲ್ಲ ಆದರ್ಶ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಜೇಸಿಸ್‌ನ ವಲಯ ೧೫ರ ಪೂರ್ವ ವಲಯಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಹೇಳಿದರು.

Call us

Click Here

ಅವರು ಕುಂದಾಪುರದ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆದ ಜೇಸಿಐ ಕುಂದಾಪುರ ಸಿಟಿಯ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಅಂತರಾಷ್ಟ್ರೀಯ ಖ್ಯಾತೀಯ ಜಾದೂಗಾರ ಓಂಗಣೇಶ್ ಮಾತನಾಡಿ ಜೇಸಿಯಂತಹ ಘಟಕಗಳು ತಾಲೂಕು ಮಟ್ಟದಲ್ಲಿ ಹೆಚ್ಚು ಕ್ರಿಯಾಯೋಜನೆಗಳಲ್ಲಿ ಕ್ರಿಯಾತ್ಮಕವಾಗಿ ಸಮಾಜಮುಖಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಜೊತೆಗೆ ಯುವಕರಿಗೆ ಹೆಚ್ಚಿನ ತರಬೇತಿ, ಮಾರ್ಗದರ್ಶನವನ್ನು ನೀಡಬೇಕು ಎಂದರು.

ಜೇಸಿ ವಲಯ೧೫ರ ಉಪಾಧ್ಯಕ್ಷೆ ಸೌಮ್ಯ ರಾಕೇಶ್ ನೂತನ ಸದಸ್ಯರಿಗೆ ಪ್ರಮಾಣ ವಚನ ಭೋಧಿಸಿ, ಜೇಸಿಐ ಕುಂದಾಪುರ ಸಿಟಿಯ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಭಾರತೀಯ ಜೇಸಿಸ್‌ನ ಪೂರ್ವ ವಲಯಾಧ್ಯಕ್ಷ ಜಾನ್ ಆರ್ ಡಿ’ಸಿಲ್ವ, ಕರ್ಣಾಟಕ ಬ್ಯಾಂಕ್ ತ್ರಾಸಿ ಶಾಖೆ ವ್ಯವಸ್ಥಾಪಕ ಗೌತಮ್ ಶೆಟ್ಟಿ, ಜೇಸಿಐ ಕುಂದಾಪುರ ಸಿಟಿಯ ಸಲಹೆಗಾರರಾದ ರವಿಕಿರಣ್ ಮುರ್ಡೇಶ್ವರ, ಕೆ.ಕೆ. ಶಿವರಾಮ್, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಾಧ್ಯಕ್ಷರಾದ ಗಿರೀಶ್ ಹೆಬ್ಬಾರ್, ರಾಘವೇಂದ್ರಚರಣ ನಾವಡ, ಕೆ. ಕಾರ್ತಿಕೇಯ ಮಧ್ಯಸ್ಥ, ನಾಗೇಂದ್ರ ಪೈ, ಚಂದ್ರಕಾಂತ, ಜೇಸಿ ವಲಯ ನಿರ್ದೇಶಕ ನಿತಿನ್ ಅವಭೃತ, ಜೇಸಿರೆಟ್ ಅಧ್ಯಕ್ಷೆ ಗೀತಾ ಜೆ. ಸುವರ್ಣ, ಯುವ ಜೇಸಿ ಅಧ್ಯಕ್ಷ ಪ್ರಜ್ವಲ್ ದೇವಾಡಿಗ, ನಿಕಟಪೂರ್ವ ಕಾರ್ಯದರ್ಶಿ ಗೌತಮ್ ನಾವಡ, ಕಾರ್ಯಕ್ರಮ ಸಂಯೋಜಕ ರಾಘವೇಂದ್ರ, ಜೇಸಿರೆಟ್ ಪೂರ್ವಾಧ್ಯಕ್ಷೆ ಸುನೀತಾ ಶ್ರೀಧರ್ ಉಪಸ್ಥಿತರಿದ್ದರು.

ಜೇಸಿಐ ಕುಂದಾಪುರ ಸಿಟಿಯ ೨೦೧೬ನೇ ಸಾಲಿನ ಅಧ್ಯಕ್ಷ ಮಂಜುನಾಥ ಕಾಮತ್ ಅವರು ನೂತನ ಅಧ್ಯಕ್ಷ ಶ್ರೀಧರ ಸುವರ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಾಗೇಶ್ ನಾವಡ, ಅಭಿಷೇಕ್, ರಿತೇಶ್ ಕಾಮತ್, ಜಯಶೀಲ ಪೈ, ಅಭಿಲಾಷ್, ಮಿಥುನ್ ಸುವರ್ಣ, ಅತಿಥಿಗಳನ್ನು ಪರಿಚಯಿಸಿದರು. ಜೇಸಿಐ ಕುಂದಾಪುರ ಸಿಟಿಯ ನೂತನ ಅಧ್ಯಕ್ಷ ಶ್ರೀಧರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಕಾಮತ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪ್ರಶಾಂತ್ ಹವಾಲ್ದಾರ್ ವಂದಿಸಿದರು.

Click here

Click here

Click here

Click Here

Call us

Call us

 

Leave a Reply