ಕುಂದಾಪುರ: 94ಸಿ ಅರ್ಜಿದಾರರಿಗೆ ಹಕ್ಕುಪತ್ರ ನೀಡಲು ವಿಳಂಬ. ಮಿನಿ ವಿಧಾನಸೌದ ಮುತ್ತಿಗೆ ಯತ್ನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 94ಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೇ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರ ಹಾಗೂ ತಾಲೂಕು ಅಧಿಕಾರಿಗಳ ನಡೆಯನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಇಲ್ಲಿನ ತಾಲೂಕು ಪಂಚಾಯತ್ ಎದುರು ಬೃಹತ್ ಸಾರ್ವಜನಿಕ ಸಭೆ ಹಾಗೂ ಕುಂದಾಪುರ ಶಾಸ್ತ್ರೀ ವೃತ್ತದಿಂದ ಪ್ರತಿಭಟನಾ ಮೆರವಣಿಗೆ, ವಿಧಾನಸೌಧ ಮುತ್ತಿಗೆಗೆ ಯತ್ನ ನಡೆಯಿತು.

Call us

Click Here

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕಳೆದ ತಿಂಗಳು ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದಾಗ ಹಕ್ಕುಪತ್ರ ವಿತರಣೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದರೂ ಈವರೆಗೆ ಒಂದೇ ಒಂದು ಹಕ್ಕುಪತ್ರ ವಿತರಣೆಯಾಗಿಲ್ಲ. ಮಿನಿ ವಿಧಾನಸೌಧ ಬಡವರ ಪಾಲಿಗೆ ದುರಂತ ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಬಡವರ ಹಕ್ಕುಪತ್ರ ವಿತರಣೆ ಬಗ್ಗೆ ಕಂದಾಯ ಇಲಾಖೆ, ರಾಜ್ಯ ಸರಕಾರ ನಿರ್ಲಕ್ಷ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 1700 ಅರ್ಜಿಗಳನ್ನು ತಾಲೂಕಿನಲ್ಲಿ ವಿಲೇವಾರಿ ಮಾಡಬಹುದು. ಆದರೆ ಇದರಲ್ಲಿ ಕನಿಷ್ಠ 100ರಷ್ಟು ಹಕ್ಕುಪತ್ರ ನೀಡುವ ಶಕ್ತಿ ತಾಲೂಕು ಆಡಳಿತಕ್ಕಿಲ್ಲ ಎಂದ ಅವರು ಬೆಳ್ವೆ ಗ್ರಾಪಂ ವ್ಯಾಪ್ತಿಯಲ್ಲಿ 29 ಅರ್ಜಿದಾರರಿಗೆ ಶುಲ್ಕ ಪಾವತಿಗೆ ನಡಾವಳಿ ನೀಡಿದ್ದು, ಈವರೆಗೆ ನೋಟಿಸ್ ನೀಡಿಲ್ಲ. ತಾಲೂಕಿನಲ್ಲಿ 94ಸಿಸಿಯಡಿ ಒಟ್ಟು 18 ಅರ್ಜಿ ಸ್ವೀಕೃತವಾಗಿದ್ದು, 18 ಬಾಕಿ ಇದೆ. ಬೈಂದೂರು ಹೋಬಳಿಯಲ್ಲಿ ಒಟ್ಟು 4416 ಅರ್ಜಿಗಳಲ್ಲಿ ಈವರೆಗೆ ಯಾವುದೇ ಹಕ್ಕುಪತ್ರ ವಿತರಣೆ ಆಗಿಲ್ಲ ಎಂದರು.

ಗೋಮಾಳ, ಕುಮ್ಕಿ ಸ್ಥಳ ಸರಕಾರದ್ದಾಗಿದ್ದು, ಹಕ್ಕು ಪತ್ರ ನೀಡಲು ನಿಮಗೇನು ಅಡ್ಡಿ ಎಂದು ಪ್ರಶ್ನಿಸಿದ ಅವರು, ರಸ್ತೆ ಮಾರ್ಜನ್ ಜಾಗದಲ್ಲಿ ಕೂತವರಿಗೆ ಬದಲಿ ಜಾಗ, ಮನೆ ಮಂಜೂರು ಮಾಡಿ ಸ್ಥಳಾಂತರಿಸಿ, ಸುಖಾಸುಮ್ಮನೆ ಅವರ ತಂಟೆಗೆ ಎಚ್ಚರ ಎಂದು ಗುಡುಗಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ಆಗಿಲ್ಲ ಎನ್ನುತ್ತಾರೆ. ಸರ್ವೆಯೇ ಆಗಿಲ್ಲ ಡೀಮ್ಡ್ ಫಾರೆಸ್ಟ್ ಮಾಡೋದು ಯಾವಾಗ? ಸರಕಾರದ ಆಡಳಿತ ಇಷ್ಟೊಂದು ಹದಗೆಟ್ಟಿದೆ ಎಂದು ತಿಳಿದಿಲ್ಲ. ಮಿನಿ ವಿಧಾನಸೌಧ ಜಡ್ಡುಗಟ್ಟಿದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದವರು ಅಧಿಕಾರಿಗಳ ವಿಳಂಬ ನೀತಿಯನ್ನು ಖಂಡಿಸಿದರು.

ಎರಡು ವಾರ ಗಡುವು:
ತಾಲೂಕು ಆಡಳಿತಕ್ಕೆ ಎರಡು ವಾರ ಗಡವು ನೀಡುತ್ತಿದ್ದು, 94ಸಿ ಅರ್ಜಿದಾರರಿಗೆ ಹಕ್ಕು ಪತ್ರ ವಿತರಿಸದಿದ್ದರೆ, ಕಟ್ಟಕಡೆಯ ಫಲಾನುಭವಿಗೂ ಹಕ್ಕುಪತ್ರ ವಿತರಣೆ ತನಕ ಮಿನಿವಿಧಾನ ಸೌಧ ಮುಂದೆ ದರಣಿ ಕೂರುತ್ತೇನೆ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

Click here

Click here

Click here

Click Here

Call us

Call us

ಪ್ರತಿಭಟನಾಕಾರರ ಬಂಧನ, ಬಿಡುಗಡೆ:
ಕುಂದಾಪುರ ಶಾಸ್ತ್ರೀವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಮಿನಿ ವಿಧಾನಸೌಧ ಬಳಿ ತೆರಳುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಮಿನಿವಿಧಾನಸೌಧ ಪ್ರವೇಶಿಸದಂತೆ ಎರಡೂ ಗೇಟ್‌ಗಳನ್ನು ಮುಚ್ಚಿ ಕೋರ್ಟ್ ಆವರಣದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಪ್ರತಿಭಟನಾಕಾರರು ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಂತೆ ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಪೊಲೀಸರು ಬಂಧಿಸಿ ಬಳಿಕ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಇತರರನ್ನು ಬಂಧಿಸಿ ಸ್ವಲ್ಪ ಹೊತ್ತಿನ ಬಳಿಕ ಬಿಡುಗಡೆಗೊಳಿಸಲಾಯಿತು.

ಜಿಪಂ ಸಾಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಜಿಪಂ ಸದಸ್ಯರಾರ ಲಕ್ಷ್ಮೀ ಮಂಜು ಬಿಲ್ಲವ, ಶೋಭಾ ಪುತ್ರನ್, ಶ್ರೀಲತಾ ಸುರೇಶ್ ಶೆಟ್ಟಿ, ಶಂಕರ ಪೂಜಾರಿ, ತಾಪಂ ಅಧ್ಯಕ್ಷ ಜಯಶ್ರೀ ಸುಧಾಕರ ಮೊಗವೀರ, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಪಂ ಸದಸ್ಯರಾದ ಕರಣ್ ಪೂಜಾರಿ, ರೂಪಾ ಪೈ, ಚಂದ್ರ ಪೂಜಾರಿ, ಉದಯ ಪೂಜಾರಿ, ಹದ್ದೂರು ರಾಜೀವ ಶೆಟ್ಟಿ ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಬಿಜೆಪಿ ಮುಖಂಡರಾದ ಬಿ. ಕಿಶೋರ್ ಕುಮಾರ್, ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಮಹೇಶ್ ಪೂಜಾರಿ,  ಶರತ್ ಶೆಟ್ಟಿ ಉಪ್ಪುಂದ ಪ್ರತಿಭಟನೆ ನೇತೃತ್ವ ವಹಿಸಿ ಬಂಧನಕ್ಕೆ ಒಳಗಾಗಿದ್ದರು.

ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕರ ರಾಘವ ಪಡೀಲ್, ಠಾಣಾಧಿಕಾರಿ ನಾಸಿರ್ ಹುಸೇನ್ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

?????????????

Leave a Reply