ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಟ್ಕರೆ ಬಾಲಾ ಯೇಸುವಿನ ಆಶ್ರಮದ ವಾರ್ಷಿಕ ಮಹಾ ಹಬ್ಬ ಶಿವಮೊಗ್ಗ ಧರ್ಮ ಪ್ರಾಂತ್ಯ ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ನೇತೃತ್ವದಲ್ಲಿ ಪವಿತ್ರ ಬಲಿದಾನದ ಮೂಲಕ ಆಚರಿಸಲಾಯಿತು.
ಯೇಸುವಿನ ಪ್ರೀತಿ ಮಾಡುವುದೆಂದರೆ, ದೀನ ದಲಿತರ ಸೇವೆ ಮಾಡುವುದು.ಇತರನ್ನು ಪ್ರೀತಿಸಿ ಯೇಸುವಿನ ಶಿಸ್ಯರೆಂದು ಜಗತ್ತಿಗೆ ಸಾಬಿತು ಪಡಿಸುವ ಈ ಧ್ಯೇಯ ವಾಕ್ಯದಂತೆ ಪ್ರಪಂಚದಲ್ಲಿ ಹಲವರಿಗೆ ಉಣ್ಣಲು ಅನ್ನವಿಲ್ಲಾ, ಕೆವರಿಗಂತೂ ಉಣ್ಣಲು ಬಟ್ಟಲೂ ಕೂಡ ಇಲ್ಲ, ಅವರಿಗಾಗಿ ಸ್ಪಂದಿಸಿ, ಅವರಿಗೆ ನೆರವಾಗೋಣ ಎಂದು ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ಸಂದೇಶ ನೀಡಿದರು.
ಇದೆ ಸಂದರ್ಭದಲ್ಲಿ ಅವರು ಕಾರ್ಮೆಲ್ ಯಾಜಕರು ಆರಂಭಿಸಿದ ‘ಕಾರ್ಮೆಲ್ ಎಪ್’ ನ್ನು ಬಿಡುಗಡೆ ಮಾಡಿದರು.
ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ. ಅನಿಲ್ ಡಿಸೋಜಾ ಕುಂದಾಪುರ ವಲಯದ ಪರವಾಗಿ ಬಿಶಪರ ಸನ್ಮಾನಿಸಿ. ಕಾರ್ಮೆಲ್ ಯಾಜಕರು ಪ್ರಕಟಿಸಿದ 2017 ರ ‘ಬೈಬಲ್ ಡೈರಿ’ಯನ್ನು ಉದ್ಘಾಟಿಸಿದರು. ಹಬ್ಬದಲ್ಲಿ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಧರ್ಮ ಭಗಿನಿಯರು ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ಹಬ್ಬದ ತಯಾರಿಗಾಗಿ ಬ್ರದರ್ ಟಿ.ಕೆ. ಜಾರ್ಜ್ ಮೂರು ದಿನಗಳ ಧ್ಯಾನ ಕೂಟ ನಡೆಸಿಕೊಟ್ಟಿದ್ದರು.
ವಂ.ಧರ್ಮಗುರು ವಿಲ್ಫ್ರೆಡ್ ಫ್ರಾಂಕ್ ಸಭಾ ಕಾರ್ಯಕ್ರಮ ನೆಡೆಸಿಕೊಟ್ಟರು. ಕೋಟೆಶ್ವರ ಇಗರ್ಜಿ ವಂ.ಧರ್ಮಗುರು ವಿನ್ಸೆಂಟ್ ಡಿಸೋಜಾ, ದಾನಿಗಳನ್ನು ಗೌರವಿಸಿದರು, ವಂ.ಧರ್ಮಗುರು ರಾಯನ್ ಪಾಯ್ಸ್ ಗಾಯನ ಮಡಳಿಯ ನೇತ್ರತ್ವವನ್ನು ವಹಿಸಿದ್ದರು. ವಂ.ಧರ್ಮಗುರು ವಿಲಿಯಂ ಮಿರಾಂದಾ ವಂದಿಸಿದರು.















