ಮಾರಣಕಟ್ಟೆ ಸಂಭ್ರಮದ ಮಕರ ಸಂಕ್ರಮಣ ಉತ್ಸವ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರುಗಿತು.

Call us

Click Here

ಮಾರಣಕಟ್ಟೆ ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಕ್ಷೇತ್ರದ ಅರ್ಚಕರು, ದರ್ಶನ ಪಾತ್ರಿಗಳು, ಚಿತ್ತೂರು ಗುಡಿಕೇರಿ ಮನೆಯವರು ಉತ್ಸವದಲ್ಲಿ ಪಾಲ್ಗೊಂಡರು.

ಜ. 14ರಿಂದ ಜ. 16ರ ವರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಮಹಾ ಮಂಗಳಾರತಿ ಅನಂತರ ಮಂಡಲ ಸೇವೆ ಜರಗಲಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕಿನಿಂದ ಆಗಮಿಸಿದ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ತರು ಹೆಚ್ಚಿನ ಕಾಳಜಿ ವಹಿಸಿ ಪೊಲೀಸರೊಡನೆ ಸಹಕರಿಸಿದರು.

ಸಿಂಗಾರ ಮತ್ತು ಸೇವಂತಿಗೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯ ವಾದುದರಿಂದ ಬುಟ್ಟಿಯಲ್ಲಿ ಅವುಗಳನ್ನು ಹೊತ್ತು ಭಕ್ತರು ಸರದಿಯಲ್ಲಿ ಕಾಣಿಕೆ ಸಲ್ಲಿಸಿದರು.

ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಕುಂದಾಪುರ ಹಾಗೂ ಉಡುಪಿ ತಾಲೂಕಿನಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ವಿಶೇಷ ಬಸ್‌ ಸೌಕರ್ಯವಿತ್ತು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರು, ಜಿ.ಪಂ. ಅಧ್ಯಕ್ಷ ದಿನಕರ, ಕಳೆದ ಐದು ವರ್ಷಗಳಿಂದ ಅನ್ನ ಸಂತರ್ಪಣೆ ಮಾಡುತ್ತಿರುವ ಮುಂಬಯಿ ಉದ್ಯಮಿ ಸತೀಶ ಕೊಠಾರಿ ಸಹಿತ ಅನೇಕ ಪ್ರಮುಖರು ಆಗಮಿಸಿದ್ದರು.

Click here

Click here

Click here

Click Here

Call us

Call us

Leave a Reply