ಕೃಷಿ ಭೂಮಿಯಲ್ಲಿನ ಅಂತರಗಂಗೆ ನಿರ್ಮೂಲನೆಗೆ ಸರಕಾರ ಮುಂದಾಗಲಿ: ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ೨೫ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿರುವ ಅಂತರಗಂಗೆ ಕಳೆಯು ಸುಮಾರು ೪೦೦ರಿಂದ ೫೦೦ ಎಕರೆಯಷ್ಟು ಕೃಷಿ ಪ್ರದೇಶಕ್ಕೆ ಹಾನಿಯನ್ನುಂಟುಮಾಡುತ್ತಿದ್ದು, ರೈತರು ಕಾಯಕದಿಂದ ವಿಮುಖರಾಗುವಂತೆ ಮಾಡಿದೆ. ರೈತರಿಗೆ ತೊಡಕಾಗಿರುವ ಅಂತರಗಂಗೆಯನ್ನು ನಿರ್ಮೂಲನೆಗೊಳಿಸವಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.

Call us

Click Here

ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಿಧಾನವಾಗಿ ಹರಿಯುವ ಮತ್ತು ನಿಂತ ನೀರಿನಲ್ಲಿ ವ್ಯಾಪಕವಾಗಿ ಬೆಳೆಯುವ ಅಂತರಗಂಗೆ ನೀರಿನ ಹರಿವಿಕೆಯನ್ನೂ ಸ್ಥಗಿತಗೊಳಿಸುತ್ತದೆ. ಬಳಿಕ ನೀರಿನ ಮೇಲ್ಮೈಯನ್ನೂ ಆವರಿಸಿಕೊಂಡು ಒತ್ತಾದ ಪದರವನ್ನು ನಿರ್ಮಿಸಿ ಜಲಚರಗಳು ಹಾಗೂ ಬೆಳೆಗೆ ಆಮ್ಲಜನಕ ಪೂರೈಕೆಯಾಗದಂತೆ ಮಾಡಿ ಬೆಳೆಯನ್ನು ಕುಂಠಿತಗೊಳಿಸುತ್ತದೆ ಎಂದರು.

ಈ ಹಿಂದೆ ಅಂತರಗಂಗೆ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿದ್ದ ನಿವೃತ್ತ ಹಿರಿಯ ಭೂವಿಜ್ಞಾನಿ ಎನ್. ರಂಗನಾಥ್, ಅಂತರಗಂಗೆಯ ಹರಡುವಿಕೆಯಿಂದ ಸುತ್ತಲಿನ ಕೃಷಿ ಭೂಮಿಗೆ ಹಾನಿಯಾಗುವ ಬಗ್ಗೆ ಸಮಗ್ರ ವರದಿ ಮಂಡಿಸಿದ್ದು, ಅಂತರಗಂಗೆಯನ್ನು ಸಂಪೂರ್ಣವಾಗಿ ಯಂತ್ರೋಪಕರಣಗಳ ಮೂಲಕ ಕಿತ್ತು ಈ ಪ್ರದೇಶದಲ್ಲಿ ಮಣ್ಣು ತುಂಬಿಸಿದರೇ ಜಮೀನನ್ನು ಕೃಷಿಯೋಗ್ಯವನ್ನಾಗಿ ಮಾಡಬಹುದಲ್ಲದೇ ಕೃಷಿ ಭೂಮಿಗೆ ನೀರು ಸಮರ್ಪಕವಾಗಿ ಹರಿಯುವ ವ್ಯವಸ್ಥೆ ಮಾಡಬಹುದು ಎಂದು ವರದಿಯಲ್ಲಿ ಸೂಚಿಸಿದ್ದಾರೆಂದು ತಿಳಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ರೈತರ ಕೃಷಿಭೂಮಿಗಳಿಗೆ ಮಾರಕವಾಗಿರುವ ಅಂತರಗಂಗೆಯನ್ನು ತೆಗೆದು ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಲು ಸುಮಾರು ೫೦ಕೋಟಿ ರೂ. ಅನುದಾನದ ಅಗತ್ಯವಿದ್ದು, ಸರಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಅಗತ್ಯವಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಮುಟ್ಲುಪಾಡಿ ಸುರೇಶ್ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಬಿಜೆಪಿ ಹಿಂದೂಳಿದ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಕಿಶೋರ್ ಕುಮಾರ್, ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಉಪ್ಪೂರು, ಸತ್ಯರಾಜ್ ಬಿರ್ತಿ, ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply