ಸಂತ ಮೇರಿ ಶಾಲೆ 80ರ ದಶಕದ ಶಿಕ್ಷಕ- ವಿದ್ಯಾರ್ಥಿಗಳ ಪುನರ್ಮಿಲನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಸಂತಮೇರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಆರಂಭಿಸಿ ೧೯೮೦ರ ತನಕ ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಕಲಿಸಿದ ಶಿಕ್ಷಕರ ಅಪೂರ್ವ ಸಮ್ಮಿಲನವು ಕೋಟೆಶ್ವರದ ಸಹನಾ ಮಿನಿ ಸಭಾಂಗಣದಲ್ಲಿ ಜರಗಿತು.

Call us

Click Here

ತಮ್ಮ ಸಂಸಾರದೊಂದಿಗೆ ಬಹತೇಕ ಗುರುಶಿಷ್ಯರು ಈ ಪುನರ್ಮಿಲನ ೧೯೮೦ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸಭಾ ಕಾರ್ಯಕ್ರಮಕ್ಕೂ ಮುನ್ನ ತಮ್ಮ ಅಂದಿನ ವಿದ್ಯಾರ್ಥಿ ಜೀವನದಲ್ಲಿ ಜತೆಗಿದ್ದು ಅಕಾಲದಲ್ಲಿ ತಮ್ಮನ್ನು ಅಗಲಿರುವ ಸಹಪಾಠಿ ಹಾಗೂ ಶಿಕ್ಷಕರಿಗೆ ಮೌನ ಸ್ಮರಣೆಯ ಮೂಲಕ ಸಂತಾಪ ಸಲ್ಲಿಸಿದ ಗುರುಶಿಷ್ಯರು ತದ ನಂತರ ಅರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಅಂದಿನ ಪ್ರಾಥಮಿಕ ಶಾಲೆಯ ಬೋಧಕರಾದ ನೆಲ್ಲಿ ಟೀಚರ್, ಜೋನ್, ಕೊಗ್ಗ ಮಾಸ್ತರ್ ಶೀನ ಸರ್ ಸಹಿತ ಪ್ರೌಡ ಶಾಲೆಯ ಅಧ್ಯಾಪಕರುಗಳಾದ ಸೂರ್ಯನಾರಾಯಣ ಶರ್ಮ, ಗಂಗಾಧರ ಐತಾಳ್, ಲೂವಿಸ್ ಫೆರ್ನಾಂಡಿಸ್, ವಾಲ್ಟರ್ ಡಿಸೋಜಾ, ಶಂಕರ್ ಶೆಟ್ಟಿ, ಶ್ಯಾಮ್ ಸುಂದರ್ ಅರೆ ಹೊಳೆ, ಝೀಟಾ ಟೀಚರ್ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಹಾಗೂ ಇದೀಗ ಉಡುಪಿ ಮಹಿಳಾ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ಅಡಿಗ ಶಿಕ್ಷಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಕುಂದಾಪುರದ ರಾಜೇಂದ್ರ ಹೊಸ್ಕೊಟೆ ಪರಿಚಯವನ್ನು ನೀಡಿ ಇಂತಹ ತೀರಾ ಅಪರೂಪದ ಮಿಲನಕ್ಕೆ ಮುನ್ನುಡಿ ಬರೆದ ಕುಂದಾಪುರದವರಾಗಿ ವಿದೇಶದಲ್ಲಿ ಉದ್ಯಮಿಯಾಗಿ ಬೆಳೆದು ಇದೀಗ ಮಂಗಳೂರಿನಲ್ಲಿ ನೆಲೆಸಿರುವ ವಿಲ್ಸನ್ ಡಿಸೋಜಾ ಹಾಗೂ ಅದನ್ನು ಸಾಕಾರಗೊಳಿಸುವುದರಲ್ಲಿ ಶ್ರಮಿಸಿದ ಕುಂದಾಪುರದ ಖ್ಯಾತ ಓರ್ಥೋಪೆಡಿಕ್ ತಜ್ಞ ಡಾ. ಶಿವಕುಮಾರ್ ಅವರ ಶ್ರಮವನ್ನು ಶ್ಲಾಘಿಸಿದರು. ಪ್ರತಿಯೋರ್ವ ಶಿಕ್ಷಕರನ್ನು ಕ್ರಮವಾಗಿ ಸುಧೀರ್ ಕಾಮತ್, ವಿಲ್ಫ್ರೆಡ್ ಡಿಲೀಮಾ, ಮನೋಹರ್ ತಿಂಗಳಾಯ, ವಿಶ್ವನಾಥ ಶೆಟ್ಟಿ, ಡಾ| ಶಿವಕುಮಾರ್, ವಿಲ್ಸನ್ ಡಿಸೋಜಾ, ವಿನ್ಸೆಂಟ್ ಡಿಸೋಜಾ, ಉದಯ ಶೆಣ್ಯೆ, ರಮಾ ಬೋಳಾರ್, ದಿವಾಕರ, ವಿಕ್ರಮ್ ಕ್ರಾಸ್ತಾ, ವೈಲೆಟ್ ಅವರು ಪುಷ್ಪಗುಚ್ಛ ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಿದರು. ಅಷ್ಟೂ ವರ್ಷಗಳ ನಂತರವೂ ನಮ್ಮನ್ನು ನೆನಪಿಟ್ಟು ಆಮಂತ್ರಿಸಿ ಸಮ್ಮಾನಿಸಿದ ವಿದ್ಯಾರ್ಥಿಗಳ ಪ್ರೀತಿಯ ಬಗ್ಗೆ ಮನದುಂಬಿ ಮಾತನಾಡಿದ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೂ ಶುಭಹಾರೈಸಿದರು. ಅತ್ಯಂತ ಉತ್ಸಾಹದಿಂದ ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡ ವಿದ್ಯಾರ್ಥಿಗಳು ಸರಿಸುಮಾರು ೪೦ ವರ್ಷಗಳ ಹಿಂದಿನ ನೆನಪುಗಳನ್ನು ಕೇವಲ ನಿನ್ನೆ, ಮೊನ್ನೆಯ ನೆನಪುಗಳಂತೆ ಈಚೆಗೆ ಎಳೆದು ತಂದರು.ಮಕ್ಕಳಂತೆ ನಲಿದು ಅಂದಿನ ದಿನಗಳನ್ನು ಮತ್ತೇ ಮತ್ತೇ ಮೆಲಕು ಹಾಕಿದರು. ಕೆಲವರು ಹಾಲಿನಂತೆ ಫಳಫಳಿಸುತ್ತಿದ್ದ ತಮ್ಮ ತಲೆಕೂದಲುಗಳನ್ನು ಸವರಿಕೊಂಡರೆ ಮತ್ತೇ ಕೆಲವರು ತಮಗೆ ಸಹಕಾರ ನೀಡುತ್ತಿರುವ ಗಾಡ್ರೇಜ್, ಇಂಡಿಕಾ ಮೊದಲಾದ ಬ್ಯ್ಲಾಕ್ ಮೆಹಂದಿಗಳಿಗೆ ಗುಟ್ಟಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಈ ಪುನರ್ಮಿಲನ ಸಂಭ್ರಮದಲ್ಲಿ ಅಂತ್ಯಾಕ್ಷರಿ, ಹೌಸಿ ಹೌಸಿ,ಡ್ಯಾನ್ಸ್, ಮ್ಯೂಸಿಕ್ ಛೇರ್, ಸ್ಪೂನ್ ಬಾಲ್ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಆಯೋಜಿಸಲಾಗಿದ್ದು, ಅಂದಿನ ನೆನಪುಗಳನ್ನು ಮತ್ತೇ ಭದ್ರವಾಗಿಸಲೋ ಎಂಬಂತೆ ತಾವು ಕಲಿತ ಶಾಲೆಗೆ ಸಂಜೆ ಸುಮಾರಿಗೆ ಆಗಮಿಸಿದ ಮಾಜಿ ವಿದ್ಯಾರ್ಥಿಗಳು ಅಲ್ಲಿ ಕ್ರಿಕೆಟ್ ಆಡಿ,ಶಾಲಾ ಕಟ್ಟಡದೆದುರು ವಿದಾಯದ ನೆನಪೆಂಬಂತೆ ಗ್ರೂಪ್ ಫೋಟೊ ತೆಗೆದು ಸಂಭ್ರಮಿಸಿದರು. ಅಷ್ಟರಲ್ಲಾಗಲೇ ಸಮಯ ಪಾದರಸದಂತೆ ಸರಿದು ಪಶ್ಚಿಮದಲ್ಲಿ ಸೂರ್ಯ ಸರಿಯಲಾರಂಭಿಸಿದ ಇನ್ನು ತಮ್ಮ ತಮ್ಮ ಗೂಡುಗಳನ್ನು ಸೇರುವ ಅನಿವಾರ್ಯತೆ ಅಲ್ಲಿ ಬಂದೊದಗಿದ್ದರಿಂದ ಮತ್ತೊಮ್ಮೆ ಸೇರುವ ಪ್ರಾಮಿಸ್‌ನೊಂದಿಗೆ ಬೇರೆ ಬೇರೆಯಾದ ಸುಮಾರು ೪೦ ವರ್ಷಗಳ ಹಿಂದಿನ ಸಹಪಾಠಿಗಳ ಪುನರ್ಮಿಲನ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಿತು.

Leave a Reply