ನಾಟಕಗಳಿಂದ ಮನೋರಂಜನೆ ಜೊತೆಗೆ ಜಾಗೃತಿ: ಎಸ್. ರಾಜು ಪೂಜಾರಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಾಟಕಗಳು ಮನೋರಂಜನೆಯ ಜತೆಗೆ ಸಮಾಜಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ದೃಶ್ಯ ಮಾಧ್ಯಮದ ಕಡೆಗೆ ಆಕರ್ಷಿತರಾಗಿರುವ ಜನರನ್ನು ರಂಗಭೂಮಿ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳತ್ತ ಸೆಳೆಯಲು ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.

Call us

Click Here

ಬೈಂದೂರಿನ ರಂಗಾಸಕ್ತರು, ಯಳಜಿತದ ಸಮ್ಮಿಲನ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್ ಮತ್ತು ಮರವಂತೆಯ ’ಸಾಧನಾ’ ಸಂಯುಕ್ತ ಆಶ್ರಯದಲ್ಲಿ ಸಾಧನಾ ಸಮದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕಾರಿಪುರ ಗುಡಿ ರಂಗ ಪಯಣದ ನಾಟಕ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಸಮ್ಮಿಲನದ ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ರಂಗಕರ‍್ಮಿ ಸತ್ಯನಾ ಕೊಡೇರಿ ವಂದಿಸಿದರು. ಸಮ್ಮಿಲನದ ಅಧ್ಯಕ್ಷ ರಂಗ ಮರಾಠಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಸಾಧನಾ ಕೋಶಾಧಿಕಾರಿ ನಾರಾಯಣ ದೇವಾಡಿಗ ಬಪ್ರಿಮನೆ, ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಇದ್ದರು.

ರಂಗ ಪಯಣ ತಂಡದ ಕಲಾವಿದರು ಖ್ಯಾತ ರಂಗ ನಿರ್ದೇಶಕ ಇಕ್ಬಾಲ್ ಅಹ್ಮದ್ ನಿರ್ದೇಶಿಸಿರುವ ’ಕಣಿವೆಯ ನೆಳಲ್ಲಿ’, ’ತಗಡುದಾರನ ಮದುವೆ’ ಮತ್ತು ’ನೆರೆಹೊರೆಯವರು’ ಎಂಬ ಮೂರು ಕಿರುನಾಟಕಗಳನ್ನು ಪ್ರದರ್ಶಿಸಿದರು.

Leave a Reply