ಹೆಮ್ಮಾಡಿ: ಶಿಕ್ಷಕ ಭೋಜು ಹಾಂಡರಿಗೆ ಡಿವೈಎಫ್‌ಐ ಶ್ರದ್ಧಾಂಜಲಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರಿಗೆ ಹೆಮ್ಮಾಡಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ನೇತೃತ್ವದಲ್ಲಿ ಆಯೋಜಿಸಿದ್ದ  ಶ್ರದ್ದಾಂಜಲಿ ಸಭೆಯಲ್ಲಿ ಅವರ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಸಲ್ಲಿಸಿ ಮೊಂಬತ್ತಿ ಬೆಳಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Call us

Click Here

ಶಿಕ್ಷಕ ಹಾಗೂ ಕುಂದಾಪುರ ಸಮುದಾಯ ಸಂಘಟನೆಯ ಕಾರ್ಯದರ್ಶಿ ಸದಾನಂದ ಬೈಂದೂರು ಮಾತನಾಡಿ, ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರು ತಾವೂ ಬೆಳೆಯುವುದರೊಂದಿಗೆ ಎಲ್ಲರೂ ಬೆಳೆಯಬೇಕು, ಬದುಕನ್ನು ಪ್ರೀತಿಸಬೇಕು ಎಂಬ ಆಶಯವನ್ನಿಟ್ಟುಕೊಂಡವರು. ತಾವು ತರಗತಿಗಳಿಗೆ ಹೊರಡುವ ಮೊದಲು ಚಿತ್ರಕಲೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಐದು ನಿಮಿಷದ ಮೊದಲು ತಮ್ಮ ಮೇಜಿನ ಎದುರಿಟ್ಟು ತಯಾರಾಗುತ್ತಿದ್ದರು. ಶಿಸ್ತುಬದ್ದ ಜೀವನ ನಡೆಸಿದ ಭೋಜು ಹಾಂಡರು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು.

ಅದೆಷ್ಟೊ ವಿದ್ಯಾರ್ಥಿಗಳು ಇವರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲಿಯೂ ಸಹ ತಾನೊಬ್ಬ ದೊಡ್ಡ ಕಲೆಗಾರನಾಬೇಕೆಂದು ಕನಸು ಕೂಡ ಕಂಡವರಲ್ಲ. ತಾನು ಕಲಿತದ್ದನ್ನು ಮಕ್ಕಳಿಗೂ ತಲುಪಿಸಬೇಕು ಆ ಮೂಲಕ ವಿದ್ಯಾರ್ಥಿಗಳ ಏಳಿಗೆಯಾಗಬೇಕೆಂದು ಕನಸು ಕಂಡಿದ್ದರು. ಅವರ ವೃತ್ತಿ ಜೀವನದಲ್ಲಿ ಶಿಕ್ಷಕರನ್ನು ಕೂಡ ಬೆಳೆಸಿದ್ದಾರೆ. ಯಾರ ಮನಸ್ಸಿಗೂ ನೋವು ಮಾಡದೇ ಸರಳ ಸಜ್ಜನ ವ್ಯಕ್ತಿತ್ವದಿಂದಲೇ ಹಲವರ ಪ್ರೀತಿಗೆ ಪಾತ್ರರಾಗಿದ್ದರು. ಈ ದಿನ ದೊಡ್ಡ ಚೇತನವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸದಾನಂದ ಬೈಂದೂರು ದುಖಃ ವ್ಯಕ್ತಪಡಿಸಿದರು.

ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ಭೋಜು ಹಾಂಡರು ಹೆಮ್ಮಾಡಿ ಡಿವೈಎಫ್‌ಐ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಡಿವೈಎಫ್‌ಐನ ಎಲ್ಲಾ ಕಾರ್ಯಕ್ರಮಗಳಿಗೂ ಮಾರ್ಗದರ್ಶಕರಾಗಿದ್ದರು. ಅವರ ಈ ಅಕಾಲಿಕ ಸಾವು ನಮಗೆ ತುಂಬಲಾರದ ನಷ್ಟ. ಭೋಜು ಹಾಂಡರು ಕಲೆಯನ್ನು ಪ್ರೀತಿಸುತ್ತಿದ್ದರು. ಕಲೆಯೊಂದು ವ್ಯವಹಾರವಾಗಿರುವ ಈ ದಿನದಲ್ಲಿ ಎಲ್ಲರಿಗೂ ಕಲೆಯನ್ನು ತಲುಪಿಸಬೇಕೆಂಬ ಮಹದಾಸೆ ಇಟ್ಟುಕೊಂಡವರು ಎಂದರು.

ಕುಂದಾಪುರ ಎಪಿಎಂಸಿ ನೂತನ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಮಾತನಾಡಿದರು. ಭೋಜು ಹಾಂಡ ಕುಟುಂಬದವರಾದ ರಮೇಶ ಹಾಂಡ ಉಪಸ್ಥಿತರಿದ್ದರು. ಡಿವೈಎಫ್‌ಐ ಸಂಘಟನೆಯ ವೆಂಕಟೇಶ, ಹರೀಶ, ನಾಗೇಶ, ಸುರೇಶ, ಪ್ರದೀಪ ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಜಗದೀಶ್ ಆಚಾರ್, ರಾಮ ಕುಲಾಲ್, ವಾಸು ಕಟ್ಟು, ಲಕ್ಷ್ಮಣ ಮೂವತ್ತುಮುಡಿ ಉಪಸ್ಥಿತರಿದ್ದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಪ್ರಸ್ತಾಪಿಸಿ ಸ್ವಾಗತಿಸಿದರು. ಡಿವೈಎಫ್‌ಐ ಕಾರ್ಯದರ್ಶಿ ವಿಘ್ನೇಶ್ ವಂದಿಸಿದರು.

Click here

Click here

Click here

Click Here

Call us

Call us

 

Leave a Reply