ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಬಿಂದುಶ್ರೀ ಪ್ರಶಸ್ತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ನೀಡಲಾಗುತ್ತಿರುವ ಬಿಂದುಶ್ರೀ ಪ್ರಶಸ್ತಿಗೆ ಪ್ರಸ್ತುತ ಸಾಲಿನಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಗಿರೀಶ್ ಕಾಸರವಳ್ಳಿ ಅವರನ್ನು ಆಯ್ಕೆಮಾಡಲಾಗಿದೆ.

Call us

Click Here

ತೀರ್ಥಹಳ್ಳಿ ತಾಲೂಕಿನ ಕೆಸಲೂರಿನವರಾದ ಗಿರೀಶ್ ಕಾಸರವಳ್ಳಿ ಅವರು ದೇಶದ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರು. ಮಣಿಪಾಲದಲ್ಲಿ ಬಿ.ಫಾರ್ಮಾ, ಪುಣೆ ರಾಷ್ಟ್ರೀಯ ಚಲನಚಿತ್ರ ಸಂಸ್ಥೆಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪಡೆದು ನಿರ್ದೇನಕ್ಕಿಳಿದವರು. ತನ್ನ 27ನೇ ವಯಸ್ಸಿಗೆ ಘಟಶ್ರಾದ್ಧ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಹಾಗೂ ಸ್ವರ್ಣಕಮಲ ಪಡೆಯುವುದರೊಂದಿಗೆ ನಾಲ್ಕು ಸ್ವರ್ಣಕಮಲ ಪ್ರಶಸ್ತಿ ಪಡೆದ ಹಿರಿಮೆ ಗಿರೀಶ್ ಕಾಸರವಳ್ಳಿಯವರದ್ದು. ಸದಭಿರುಚಿಯ ಪ್ರಾದೇಶಿಕ ಚಲನಚಿತ್ರವನ್ನು ನೀಡುವುದರ ಮೂಲಕ ವ್ಯಾಪಾರಿ ಚಿತ್ರಗಳಿಂದ ದೂರ ಉಳಿದವರು. ಅವರ ನಿರ್ದೇಶನದ ಎಲ್ಲಾ ಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹತ್ತಾರು ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿಗಳು ಅರಸಿ ಬಂದಿವೆ.

ಕಾಸರವಳ್ಳಿ ಅವರು ಚಲನಚಿತ್ರ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಬಿಂದಶ್ರೀ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಸಮಿತಿಯು ಸರ್ವಾನುಮತದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯು ರೂ.10,000 ನಗದು, ಶಾಶ್ವತ ಸ್ವರ್ಣ ಫಲಕ ಹಾಗೂ ಸ್ಮರಣ ಫಲಕವನ್ನು ಒಳಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸುರಭಿ ಜೈಸಿರಿ

ಸಂಸ್ಥೆಯು ತನ್ನ 17ನೇ ವರ್ಷದ ಸಂಭ್ರಮದೊಂದಿಗೆ ಫೆಬ್ರವರಿ 25ರಿಂದ 27ರ ವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ಜೈಸಿರಿ – ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದೆ.

Click here

Click here

Click here

Click Here

Call us

Call us

ಫೆಬ್ರವರಿ 25ರ ಸಂಜೆ ಲೇಖಕಿ ಹಾಗೂ ಕಿರುತೆರೆ ಕಲಾವಿದೆ ಬೆಂಗಳೂರಿನ ದೀಪಾ ರವಿಶಂಕರ್ ಸುರಭಿ ಜೈಸಿರಿಗೆ ಚಾಲನೆ ನೀಡಲಿದ್ದಾರೆ. ಸಾಹಿತಿ ರಂಗಭೂಮಿ ಕಲಾವಿದ ಜಯಶಂಕರ್ ಬೆಳಗುಂಬ ದಿನದ ನುಡಿಗಳನ್ನಾಡಿಲಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕೊಳಲು ವಾದಕ ಭುಜಂಗ ಕೊರಗ ಮರವಂತೆ ಅವರನ್ನು ಸನ್ಮಾನಿಸಲಾಗುತ್ತಿದೆ. ಬಳಿಕ ರಂಗಸುರಭಿ ಕಲಾವಿದರಿಂದ ರಾಜೇಂದ್ರ ಕಾರಂತ್ ರಚಿಸಿ, ಯೋಗೀಶ್ ಬಂಕೇಶ್ವರ ನಿರ್ದೇಶಿಸಿದ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನಗೊಳ್ಳಲಿದೆ.

ಫೆಬ್ರವರಿ 26ರಂದು ಹಟ್ಟಿಯಂಗಡಿ ಶ್ರಿ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲರಾದ ಶರಣ ಕುಮಾರ್ ದಿನದ ನುಡಿಗಳನ್ನಾಡಲಿದ್ದಾರೆ. ಚಿತ್ರ ಕಲಾವಿದ ಮಂಜುನಾಥ ಮಯ್ಯ ಉಪ್ಪುಂದ ಅವರನ್ನು ಸನ್ಮಾನಿಸಲಾಗುತ್ತದೆ. ಬಳಿಕ ನಾಟ್ಯ ಸುರಭಿ ಕಲಾವಿದರಿಂದ ವಿದ್ವಾನ್ ಚಂದ್ರಶೇಖರ್ ನಾವಡ ಅವರ ನಿರ್ದೇಶನದಲ್ಲಿ ‘ನೃತ್ಯಾಂಕುರ’ ನೃತ್ಯ ಸಂಜೆ, ಪಾರ್ವತಿ ಕಲ್ಯಾಣ ‘ನೃತ್ಯ ರೂಪಕ’ ಹಾಗೂ ನೃತ್ಯ ಕಾವ್ಯ ಕುಂಚ ವೈಭವ ಜರುಗಲಿದೆ.

ಫೆಬ್ರವರಿ 27ರಂದು ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. 2017ನೇ ಸಾಲಿನ ‘ಬಿಂದಶ್ರೀ’ ಪ್ರಶಸ್ತಿ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ ಎಸ್. ಜನಾದನ ಮರವಂತೆ ಆಶಯ ನುಡಿಗಳನ್ನಾಡಲಿದ್ದಾರೆ.

ಬಳಿಕ ನಾದ ಸುರಭಿ ಕಲಾವಿದರಿಂದ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರ ನಿರ್ದೇಶನದಲ್ಲಿ ‘ನಾದ ಸುಧಾರಸ’, ಮಾಯಾ ಸುರಭಿ ಕಲಾವಿದರಿಂದ ಸತೀಶ್ ಹೆಮ್ಮಾಡಿ ನಿರ್ದೇಶನದಲ್ಲಿ ‘ಜಾದೂಲೋಕ’, ಬಳಿಕ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಇವರಿಂದ ಆಯ್ದ ಕಲಾವಿದರ ಕೂಡುವಿಕೆಯೊಂದಿಗೆ ‘ನೂತನ ಪ್ರಸಂಗ’ ಯಕ್ಷಗಾನ ಜರುಗಲಿದೆ.

Leave a Reply