ಭಂಡಾರ್ಕಾರ್ಸ್ ಕಾಲೇಜು: ನವೀಕೃತ ರಂಗಮಂದಿರ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ನವೀಕೃತ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗಮಂದಿರವನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಂ ಅವರು ಉದ್ಘಾಟಿಸಿದರು.

Call us

Click Here

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲೇಜು ಆರಂಭವಾಗಿ ಐದು ದಶಕಗಳನ್ನು ಪೊರೈಸಿದೆ. ಯಾವುದೇ ಸಂಸ್ಥೆಯಾಗಲಿ ಕಾಲ ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಆಯಾ ಕಾಲದ ಅನುಸಾರ ಬದಲಾವಣೆಗಳು ಅತ್ಯಗತ್ಯವಾಗಿರುತ್ತದೆ. ಅದರ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕಾಲೇಜು ಹಮ್ಮಿಕೊಂಡಿದೆ. ಅದರಲ್ಲಿ ಸಫಲತೆಯನ್ನು ಕಂಡಿದ್ದೇವೆ. ಯಾವುದೇ ಕೆಲಸವನ್ನಾಗಲಿ ಒಳ್ಳೆಯ ಮನಸ್ಸಿನಿಂದ ಮಾಡಿದಾಗ ಆರ್ಥಿಕ ಸಹಾಯ ತನ್ನಂತಾನೆ ಒದಗಿಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೇ ಭೌತಿಕ ಸವಲತ್ತುಗಳು ಪರಿಪೂರ್ಣವಾಗಿ ಸಫಲತೆ ಬರಬೇಕಾದರೆ ಅದನ್ನು ಕ್ರೀಯಾತ್ಮಕ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು. ತನ್ಮೂಲಕ ಹೊರಗಿನವರಿಗೂ ಇದರ ಕುರಿತು ತಿಳಿದಂತಾಗುತ್ತದೆ. ಅಲ್ಲದೇ ಒಳ್ಳೆಯ ಕಾರ್ಯಗಳಿಗೆ ಉಪಯೋಗವಾಗಲಿ ಎಂದು ಶುಭಹಾರೈಸಿದರು.

ಲಯನೆಸ್ ಶೋಭಾ ಸೋನ್ಸ್ ಲಯನ್ಸ್ ಪಿ.ಡಿಜೆ ಪ್ರಕಾಶ್ ಸೋನ್ಸ್ ಮತ್ತು ವೇದಿಕೆಯನ್ನು ವಿಶ್ವಸ್ಥ ಮಂಡಳಿಯ ಸದಸ್ಯರಾದ ಲಯನ್ಸ್ ಪ್ರಕಾಶ್ ಸೋನ್ಸ್ ಮತ್ತು ಲಯನೆಸ್ ಶೋಭಾ ಸೋನ್ಸ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.  ನವೀಕೃತ ಕುಂಭಾಶಿ ರಾಧಾಬಾಯಿ ವೆಂಕಟರಮಣ ಪ್ರಭು ರಂಗಮಂದಿರವನ್ನು ನವೀಕೃತಗೊಳಿಸುವಲ್ಲಿ ಆರ್ಥಿಕ ಸಹಾಯ ನೀಡಿದ ಕುಂಭಾಶಿ ಕೇಶವ ಪ್ರಭು ಸಹೋದರರ ಪರವಾಗಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥರಾದ ಕೆ.ದೇವದಾಸ ಕಾಮತ್, ರಾಜೇಂದರ್ ತೋಳಾರ್, ಪ್ರಜ್ನೇಶ್ ಪ್ರಭು ಉಪಸ್ಥಿತರಿದ್ದರು.

ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ನಾರಾಯಣ ತಂತ್ರಿ ವಂದಿಸಿದರು. ಇತಿಹಾಸ ಉಪನ್ಯಾಸಕ ಪ್ರೊ.ಕೆ.ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

 

Click here

Click here

Click here

Click Here

Call us

Call us

Leave a Reply