ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೇಸಿಐ ಶಿರೂರು, ಜೇಸಿರೆಟ್ ವಿಭಾಗ, ದುರ್ಗಾಂಬಿಕಾ ನವೋದಯ ಸಂಘ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ಕಾರ್ಯ ಕ್ರಮ ದುರ್ಗಾಂಬಿಕಾ ಸಭಾಭವನ ಕರಿಕಟ್ಟೆ ಯಲ್ಲಿ ನಡೆಯಿತು.
ಶಿರೂರು ಜೇಸಿ ಜೇಸಿರೆಟ್ ಅಧ್ಯಕ್ಷ ಗಂಗಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಷ್ಟ್ರೀಯ ಸಂಯೋ ಜಕಿ ಜೇಸಿರೆಟ್ ವಿಭಾಗದ ರೂಪಶ್ರೀ ರತ್ನಾಕರ ಇಂದ್ರಾಳಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.ಮಹಿಳೆಯರಿಗೆ ಸೂಕ್ತ ಅವಕಾಶ ದೊರೆ ತಾಗ ಪ್ರತಿಭೆ ಹೊರಹೊಮ್ಮುತ್ತದೆ. ಕುಟುಂಬ ಹಾಗೂ ಸಮಾಜ ನಿರ್ವ ಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದರು. ವೇದಿಕೆಯಲ್ಲಿ ದುರ್ಗಾಂಬಿಕಾ ದೇವಸ್ಥಾನ ಸೇವಾ ಸಂಘ ಕೋಟೆಮನೆ ಅಧ್ಯಕ್ಷ ಕೆ.ಎನ್. ಆಚಾರ್, ಶಿರೂರು ಜೇಸಿಐ ಅಧ್ಯಕ್ಷರು, ಪುಷ್ಪಾ ಆರ್. ಮೇಸ್ತ ಅರಮನೆಹಕ್ಲು ಶಿರೂರು, ಭಟ್ಕಳ ಸಿಟಿ ಜೇಸಿ ಅಧ್ಯಕ್ಷ ನಾಗರಾಜ್ ಶೇಟ್, ಕಾರ್ಯದರ್ಶಿ ಪಾಂಡುರಂಗ ಅಳ್ವೆಗದ್ದೆ, ಜೂನಿಯರ್ ಜೇಸಿ ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಅನ್ನಪೂರ್ಣಾ ಮೇಸ್ತ, ಪುಷ್ಪಾ ಆರ್. ಮೇಸ್ತ, ಸರೋಜಾ ಮೇಸ್ತ, ರೂಪಾ ರೇವಣRರ್, ಚಿನ್ನಮ್ಮ ಸೆಬಾಸ್ಟಿನ್ ರವರನ್ನು ಪಂಚರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಶಿರೂರು ಜೇಸಿರೇಟ್ ಪೂರ್ವಾಧ್ಯಕ್ಷೆ ಜಾನ್ವಿ ಪ್ರಸಾದ್‌ಪ್ರಭು ಸ್ವಾಗತಿಸಿದರು.ಶ್ರೇಯಾ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಜೇಸಿರೆಟ್ ವೀರಮ್ಮ ವಂದಿಸಿದರು. ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅನ್ನಪೂರ್ಣಾ ಮೇಸ್ತ ತಂಡ ಪ್ರಥಮ ಸ್ಥಾನ ಪಡೆಯಿತು. ಸರೋಜಾ ಮೇಸ್ತ ತಂಡ ದ್ವಿತೀಯ ಸ್ಥಾನ ಪಡೆಯಿತು.