ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟ ಶಿಕ್ಷಣ ನೀಡಲು ಮೂಲಭೂತ ಅವಶ್ಯಕತೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಒಂದು ಪ್ರಮುಖ ಅವಶ್ಯಕತೆ. ತರಗತಿಯಲ್ಲಿ ಬೋಧಿಸಿದ ಪಾಠಗಳ ಸ್ಥಿರೀಕರಣಕ್ಕೆ ಸ್ಮಾರ್ಟ್ ಕ್ಲಾಸ್ ಬಹಳ ಉಪಯುಕ್ತ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ದೇವಾಡಿಗ ಕೊಡುಗೆ ನೀಡಿದ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕ್ ಪಂಚಾಯತ್ ಸದಸ್ಯೆ ಜೆತಿ ವಿ. ಪುತ್ರನ್, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಶಿಕ್ಷಣ ತಜ್ಞ ಕೆ.ವಿ.ನಾಯಕ್, ನಿವೃತ್ತ ಉಪನ್ಯಾಸಕ ಜಗದೀಶ್ ರಾವ್, ನಿವೃತ್ತ ಮುಖ್ಯೋಪಾಧ್ಯಾಯ ಮಾಲಾಡಿ ವಿಶ್ವನಾಥ ಶೆಟ್ಟಿ, ಉದ್ಯಮಿಗಳಾದ ಗಣಪತಿ ನಾಯಕ್, ಟಿ. ಸಂತೋಷ್ ನಾಯಕ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ದೇವಾಡಿಗ, ಕೋಟೇಶ್ವರ ವೃತ್ತ ಶಿಕ್ಷಣ ಸಂಯೋಜಕಿ ಅನಿತಾ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾ ಸಖಾರಾಮ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಲ್ಯಾಡಿ ಸದಾರಾಮ ಶೆಟ್ಟಿ ಅತಿಥಿಗಳ ಗೌರವಿಸಿದರು. ಸಹಶಿಕ್ಷಕ ವಕ್ವಾಡಿ ವೇಣುಗೋಪಾಲ್ ಹೆಗ್ಡೆ ನಿರೂಪಿಸಿ, ಸಹಶಿಕ್ಷಕಿ ಶರ್ಮಿಳಾ ಜಿ. ವಂದಿಸಿದರು.