ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ: ಸಾನಿಧ್ಯ ಸಂಕೋಚ – ಬಾಲಾಲಯ ಪ್ರತಿಷ್ಠೆ ಸಂಪನ್ನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇತಿಹಾಸ ಪ್ರಸಿದ್ಧ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಸಾನಿಧ್ಯ ಸಂಕೋಚ ಹಾಗೂ ಬಾಲಾಲಯ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳ ಪರ್ಯಾಂತ ಸಾಂಗವಾಗಿ ಜರುಗಿದವು.

Call us

Click Here

ಶ್ರೀ ದೇವಳದ ಅಮೂಲಾಗ್ರ ಜೀಣೋದ್ಧಾರದ ಪ್ರಯುಕ್ತ ವೇದಮೂರ್ತಿ ಕುತ್ಯಾರು ಕೇಂಜಿ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ಸಂಕೋಚ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮಗಳು ಜರುಗಿದವು. ನಾಗದೇವರ ದರ್ಶನ, ಕಾಲಭೈರವ ದೇವರ ದರ್ಶನ, ವಿವಿಧ ಹೋಮ ಹವನಾದಿಗಳು ಜರುಗಿದವು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ವೆಂಕಟ ಪೂಜಾರಿ, ಧಾರ್ಮಿಕ ಮುಂದಾಳು ಬಿ.ಎಂ. ಸುಕುಮಾರ ಶೆಟ್ಟಿ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply