ಮಾ.31: ಗಲ್ಫ್ ನಮ್ಮ ಕುಂದಾಪ್ರ ಕನ್ನಡ ಬಳಗ ಉದ್ಘಾಟನೆ. ವ್ಯಾಪಾರ- ಕಾರ್ಯನಿರ್ವಾಹಕರ ಸಮಾವೇಶ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಘ್ ಇದರ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶ ಮಾಚ್ 31ರ ಬೆಳಿಗ್ಗೆ ಯುಎಐ ಬರ್‌ದುಬಾಯಿ ರೀಜೆಂಟ್ ಪ್ಯಾಲೇಸ್ ಹೋಟೆಲ್‌ನಲ್ಲಿ ಜರುಗಲಿದ್ದು ಸಕಲ ಸಿದ್ಧತೆ ನಡೆದಿದೆ. ಕುಂದಾಪುರ ಭಾಷಿಕರನ್ನು ಒಂದುಗೂಡಿಸುವುದರೊಂದಿಗೆ ಒಂದು ಸಾಂಸ್ಥಿಕ ರೂಪ ನೀಡಿ, ಪರಸ್ಪರ ಸಹಾಯ ಸಹಕಾರ ಮಾಡುವ ಸಲುವಾಗಿ ಹುಟ್ಟುಹಾಕಿರುವ ಕುಂದಾಪ್ರ ಕನ್ನಡ ಬಳಗದ ಉದ್ಘಾಟನೆಯೊಂದಿಗೆ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶದಲ್ಲಿ ಕುಂದಾಪುರ ಮೂಲಕ ವಿವಿಧ ಉದ್ಯಮಿಗಳು ಒಂದೆಡೆ ಸೇರಲಿದ್ದಾರೆ.

Call us

Click Here

ಕುಂದಾಪ್ರ ಕನ್ನಡ ಬಳಗ:
ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಕುಂದಾಪ್ರ ಭಾಷಿಕರ ಕೂಡಿವಿಕೆ ಒಂದು ವೇದಿಕೆ ದೊರಕಿಸಿಕೊಡುವುದು. ಉದ್ಯೋಗ ಅರಿಸಿ ಬರುವ ಕುಂದಾಪುರಿಗರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸುವುದು, ಕುಂದಾಪುರ ಭಾಷೆಯ ಬದುಕು, ಕಲೆ ಸಾಹಿತ್ಯವನ್ನು ದಾಖಲಿಸುವುದು, ಭಾಷಿಕ ಸಾಧಕರನ್ನು ಗುರುತಿಸಿ ಗೌರವ ಸನ್ಮಾನ ನೀಡುವುದು ಇದರ ಜೊತೆ ಜೊತೆಗೆ ಬಡ ವಿದ್ಯಾರ್ಥಿಗಳಿಗೆ, ಅಶಕ್ತರು ಹಾಗೂ ವಯೋವೃದ್ಧರಿಗೆ ನೆರವು ಸೇರಿದಂತೆ ಹಲವು ಪ್ರಮುಖ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ನಮ್ಮ ಕುಂದಾಪ್ರ ಕನ್ನಡ ಬಳಗವನ್ನು ಸ್ಥಾಪಿಸಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ.

ಸಂಸ್ಥೆಯ ಮಹಾಪೋಷಕರಾಗಿ ರಾಮೀ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾದ ವರದರಾಜ ಶೆಟ್ಟಿ ಅವರಿದ್ದರೇ ಗೌರವಾಧ್ಯಕ್ಷರಾಗಿ ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್ ಅಧ್ಯಕ್ಷ ಪ್ರವೀಣ ಶೆಟ್ಟಿ ವಕ್ವಾಡಿ ತೊಡಗಿಸಿಕೊಂಡಿದ್ದಾರೆ. ಈರ್ವರೂ ಗಲ್ಫ್ ಹಾಗೂ ತಮ್ಮ ಹುಟ್ಟೂರಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡವರು. ಸಂಸ್ಥೆಯ ಅಧ್ಯಕ್ಷರಾಗಿ ಗಲ್ಘ್‌ನಲ್ಲಿ ಉದ್ಯೋಗಿಯಾಗಿರುವ ಕ್ರೀಯಾಶೀಲ ವ್ಯಕ್ತಿತ್ವದ ಮೂಲಕ ಹತ್ತಾರು ಕನ್ನಡಪರ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಸಾಧನಾ ದಾಸ್, ಉಪಾಧ್ಯಕ್ಷರಾಗಿ ದಿನೇಶ್ ಸಿ.ಡಿ, ಕಾರ್ಯದರ್ಶಿಯಾಗಿ ಸುಧಾಕರ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ದೇವಾಡಿಗ, ಕೋಶಾಧಿಕಾರಿಯಾಗಿ ಸುಜಿತ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಉದ್ಘಾಟನಾ ಸಮಾರಂಭ:
ನಮ್ಮ ಕುಂದಾಪ್ರ ಕನ್ನಡ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವ್ಯಾಪಾರ ಮತ್ತು ಕಾರ್ಯನಿರ್ವಾಹಕರ ಸಮಾವೇಶದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಚಿತ್ತಾರಿ ಗ್ರೂಫ್ ಆಫ್ ಕಂಪೆನಿ ಆಡಳಿತ ಪಾಲುದಾರ ಪಿ. ಸುಖಾನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆ ಇದ್ದು, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಉದ್ಯಮಿ ಹಮೀದ್, ಮುಂಬೈ ಉದ್ಯಮಿ ಮಂಜುನಾಥ ಬಿಲ್ಲವ, ಉದ್ಯಮಿ ಕೆ. ವೆಂಕಟೇಶ ಕಿಣಿ ಬೈಂದೂರು, ಉದ್ಯಮಿ ಇಬ್ರಾಹಿಂ ಗಂಗೊಳ್ಳಿ, ಜನಾರ್ದನ ಉಪ್ಪುಂದ, ಶೀನಾ ದೇವಾಡಿಗ, ಬಾಸುಮ ಕೊಡಗು ಸೇರಿದಂತೆ ಹಲವು ಪ್ರಮುಖರು ಭಾಗವಹಿಸುವ ನಿರೀಕ್ಷೆ ಇದ್ದು, ವಾಗ್ಮಿ ಪತ್ರಕರ್ತ ಅರುಣ್‌ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಇದರೊಂದಿಗೆ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಹಲವು ಪ್ರಮುಖರು ಭಾಗವಹಿಸಲಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Click here

Click here

Click here

Click Here

Call us

Call us

Namma kundapra kannada balaga gulf inauguration and business & executive meet on 31 march 2017. Place Regent palace hotel burdubai – UAE. 

Leave a Reply