ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶಕುಮಾರ್ ಶೆಟ್ಟಿ ಉಪ್ಪುಂದ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶಕುಮಾರ್ ಎಂ. ಶೆಟ್ಟಿ ಉಪ್ಪುಂದ ಆಯ್ಕೆಯಾಗಿದ್ದಾರೆ.

Call us

Click Here

ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹರೀಶಕುಮಾರ್ ಎಂ, ಶೆಟ್ಟಿ ಉಪ್ಪುಂದ, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ ಗಾಣಿಗ, ಅಂಬಿಕಾ ರಾಜು ದೇವಾಡಿಗ, ರಾಜೇಶ ಕಾರಂತ, ಜಯಂತಿ ವಿಜಯಕೃಷ್ಣ ಪಡುಕೋಣೆ, ನರಸಿಂಹ ಹಳಗೇರಿ, ಡಾ. ಅಭೀಷೆಕ್ ಪಿಳ್ಳೆ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿತ್ತು.

ಕೊಲ್ಲೂರಿನ ಜಗದಾಂಬಿಕಾ ಅತಿಥಿ ಗೃಹದಲ್ಲಿ ಕೊಲ್ಲೂರು ದೇಗುಲದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಗನ್ನಾಥ ಅವರ ನೇತೃತ್ವದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಸಲಾಗಿತ್ತು.  ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಹರೀಶ್‌ಕುಮಾರ್ ಶೆಟ್ಟಿ ಅವರ ಪರವಾಗಿ ೬ ಮಂದಿ ಸದಸ್ಯರು ಕೈ ಎತ್ತುವ ಮೂಲಕ ಬಹುಮತ ತೋರಿದ್ದರಿಂದಾಗಿ ಅವರು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ದೇವಸ್ಥಾನದ ಪರಂಪರೆ ಹಾಗೂ ಪದ್ಧತಿಯಂತೆ ಚಾಂದ್ರಮಾನ ಯುಗಾದಿಯ ನಂತರದ ಬದಲಾವಣೆಯಲ್ಲಿ ದೇಗುಲದ ತಂತ್ರಿಗಳಾಗಿ ಹಿರಿಯ ಅರ್ಚಕರಾದ ಮಂಜುನಾಥ ಅಡಿಗರ ಸರದಿ ಪ್ರಾರಂಭವಾದ್ದು, ಸಭೆಯಲ್ಲಿ ಅರ್ಚಕ ಪ್ರತಿನಿಧಿ ಮಂಜುನಾಥ ಅಡಿಗರು ಪಾಲ್ಗೊಂಡಿದ್ದರು.

Click here

Click here

Click here

Click Here

Call us

Call us

Leave a Reply