ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎರಡು ದಿನದ ಹಿಂದೆ ಅಂಗಡಿಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ನಡೆಸಿದ ಘಟನೆ ತಾಲೂಕಿನ ಬಿದ್ದಲ್‌ಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ತೀರ್ವ ಅಸ್ವಸ್ಥಗೊಂಡಿರುವ ಎಂಟು ವರ್ಷದ ಬಾಲಕಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಬಿದ್ಕಲ್‌ಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ರಾಮದಾಸ ಪ್ರಭು (53) ಅತ್ಯಾಚಾರ ನಡೆಸಿದ ಕಾಮುಕ. ಮೂಲತಃ ಉತ್ತರಕನ್ನಡದವರಾದ ಬಾಲಕಿಯ ಪೋಷಕರು ಬಿದ್ಕಲ್‌ಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಏಕಾಂಗಿಯಾಗಿ ಅಂಗಡಿಗೆ ತೆರಳಿದ್ದ ಬಾಲಕಿಗೆ ಆಪಾದಿತ ರಾಮದಾಸ ಪುಸಲಾಯಿಸಿ ಅಮಾನುಷ ಕೃತ್ಯ ನಡೆಸಿದ್ದು, ಎರಡು ದಿನಗಳಿಂದ ಬಾಲಕಿ ಅಸ್ವಸ್ಥಗೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದು, ತೀರ್ವ ಅಸ್ವಸ್ಥಗೊಂಡಿರುವುದರಿಂದ ಮಣಿಪಾಲಕ್ಕೆ ಕರೆದೊಯ್ಯಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ ಪೊಲೀಸರು ತನಿಕೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಪಾದಿತನನ್ನು ಬಂಧಿಸಲಾಗಿದೆ. ಈ ಹೇಯ ಕೃತ್ಯವನ್ನು ಕುಂದಾಪುರದ ನಾಗರಿಕರು ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.