ವಾಟ್ಸಾಪ್ ಬಳಕೆದಾರರಿಗೊಂದು ಶುಭಸುದ್ದಿ. ಇನ್ನುಮುಂದೆ ವಾಟ್ಸಾಪ್‍ನ್ನು ಡೆಸ್ಕ್ ಟಾಪ್ /ಲ್ಯಾಪ್‍ಟಾಪ್‍ನಲ್ಲಿ ಕ್ರೋಮ್ ಬ್ರೌಸರ್ ಮೂಲಕ ಬಳಸಬಹುದು. ಹೌದು ವಾಟ್ಸಾಪ್ ಇಂದಿನಿಂದ ಹೊಸ ಸೇವೆ ಆರಂಭಿಸಿದ್ದು ಡೆಸ್ಕ್ ಡಾಪ್ ಬ್ರೌಸರ್ ಮೂಲಕವೇ ಸಂದೇಶ ಕಳುಹಿಸಬಹುದು.
ಹೊಸ ಸೇವೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ವಾಟ್ಸಾಪ್ ಹೊಸ ಆವೃತ್ತಿಯ ಹೊಂದಿರುವ ಆಂಡ್ರಾಯ್ಡ್,ಬ್ಲ್ಯಾಕ್‍ಬೆರ್ರಿ, ವಿಂಡೋಸ್ ಓಸ್ ಬಳಕೆದಾರರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಐಫೋನ್ ಗ್ರಾಹಕರು ಹೊಸ ಸೇವೆಯಿಂದ ವಂಚಿತರಾಗಲಿದ್ದಾರೆ. ಅಷ್ಟೇ ಅಲ್ಲದೇ ಕೆಲ ಅದೃಷ್ಟಶಾಲಿಗಳಿಗಷ್ಟೇ ಈ ಆಪ್‍ನ್ನು ಬಳಸುವ ಅವಕಾಶ ಸಿಗಲಿದೆ ಎಂದು ವಾಟ್ಸಾಪ್ ಹೇಳಿದೆ.
ನಿಮ್ಮ ಕಂಪ್ಯೂಟರ್‍ನಲ್ಲಿ ಕ್ರೋಮ್ ಬ್ರೌಸರ್ ಓಪನ್ ಮಾಡಿ web.whatsapp.com ಹೋಗಿ. ಬಳಿಕ ಸ್ಮಾರ್ಟ್‍ಫೋನ್ ಮೂಲಕ ವಾಟ್ಸಾಪ್ ಮೆನುವಿಗೆ ಹೋಗಿ ವಾಟ್ಸಾಪ್ ವೆಬ್ ಆಯ್ಕೆಯನ್ನು ಆರಿಸಿಕೊಳ್ಳಿ. ನಂತರ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ವೆಬ್ ಮತ್ತು ವಾಟ್ಸಾಪ್‍ನ್ನು ಪೇರ್ ಮಾಡುವ ಮೂಲಕ ಬಳಸಬಹುದು.