ನೀವು ವಾಟ್ಸಪ್ ಬಳಕೆದಾರರೇ? ಇರಲಿ ಸ್ಪಲ್ಪ ಜಾಗೃತೆ

Click Here

Call us

Call us

Call us

ನೀವು ವಾಟ್ಸಾಪ್ ಬಳಕೆ ಮಾಡ್ತಾ ಇರೋರಾಗಿದ್ದರೆ ನಾವು ಹೇಳುವ ವಿಷಯ ನಿಮಗೆ ಉಪಯೋಗವಾಗುತ್ತದೆ. ವಾಟ್ಸಾಪ್ ಬಳಕೆ ಮಾಡುವ ನೀವು ಎಂದಿಗೂ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್, ಬ್ಯಾಂಕ್ ವಿವರಗಳು, ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಪಾಸ್ ವರ್ಡ್ ಸಹಾಯದಿಂದ ನಿಮ್ಮ ಅಪ್ಲಿಕೇಷನ್ ಭದ್ರಪಡಿಸಿಕೊಳ್ಳಬಹುದು. ವಾಟ್ಸಾಪ್ ಈ ಸೌಲಭ್ಯ ನೀಡಿಲ್ಲ. ಆದರೆ ಬೇರೆ ಅಪ್ಲಿಕೇಷನ್ ನಿಂದ ಡೌನ್ ಲೋಡ್ ಮಾಡಿಕೊಂಡು ಪಾಸ್ ವರ್ಡ್ ಹಾಕಿಕೊಳ್ಳಿ. ಮೊಬೈಲ್ ಕಳೆದಾಗ ನಿಮ್ಮ ಮಾತುಕತೆಯ ಗೌಪ್ಯತೆಯನ್ನು ಇದು ಕಾಪಾಡುತ್ತದೆ. (ಕುಂದಾಪ್ರ ಡಾಟ್ ಕಾಂ)

Call us

Click Here

ನೀವು ಆನ್ಲೈನ್ ನಲ್ಲಿ ಇದ್ದೀರಾ ಅಥವಾ ಆಪ್ಲೈನ್ ನಲ್ಲಿ ಇದ್ದೀರಾ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ನೀವು ಬಯಸಿದರೆ ಆ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಬಹುದು. ಆಂಡ್ರಾಯ್ಡ್, ಬ್ಲಾಕ್ ಬೆರ್ರಿ, ಐಒಎಸ್ ಸೇರಿದಂತೆ ವಿಂಡೋಸ್ ಫೋನ್ ನಲ್ಲಿ ಈ ಸೌಲಭ್ಯವಿದೆ. ವಾಟ್ಸಾಪ್ ನಲ್ಲಿ ಹಾಕಿದ ಪ್ರೊಪೈಲ್ ಫೋಟೋವನ್ನು ಯಾರು ಬೇಕಾದರೂ ಡೌನ್ ಲೋಡ್ ಮಾಡಬಹುದು. ಹಾಗಾಗಿ ಪ್ರೊಫೈಲ್ ಫೋಟೋ ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಿ. contacts Only ಎಂಬುದನ್ನು ಸೆಲೆಕ್ಟ್ ಮಾಡಿ. ಪಬ್ಲಿಕ್ ಎಂಬುದನ್ನು ಸೆಲೆಕ್ಟ್ ಮಾಡಬೇಡಿ. ಫೋನ್ ಕಳೆದ ತಕ್ಷಣ ರಿಪ್ಲೇಸ್ಮೆಂಟ್ ಸಿಮ್ಮನ್ನು ಬೇರೆ ಫೋನ್ ಗೆ ಹಾಕಿ ವಾಟ್ಸಾಪ್ ನಿಷ್ಕ್ರಿಯಗೊಳಿಸಿ. ವಾಟ್ಸಾಪ್ ಪೋನ್ ನಂಬರ್ ಮೇಲೆ ಕೆಲಸ ಮಾಡುತ್ತದೆ ಎಂಬುದು ನೆನಪಿರಲಿ.

Leave a Reply