ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ ಇಲ್ಲಿನ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿನ್ಮಯಿ 622 ಅಂಕ ಪಡೆದಿದ್ದಾರೆ. ಕನ್ನಡದಲ್ಲಿ 125, ಇಂಗ್ಲಿಷ್ 100, ಹಿಂದಿ 99, ವಿಜ್ಞಾನ 99, ಸಮಾಜ ವಿಜ್ಞಾನ 99, ಗಣಿತ 100 ಅಂಕ ಪಡೆದಿದ್ದಾರೆ. ಇವರು ಹಟ್ಟಿಯಂಗಡಿ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ಗಣೇಶ ಎಸ್. ಮತ್ತು ಶ್ರೀಮತಿ ಜಿ ಹೆಗ್ಡೆ ಇವರ ಪುತ್ರಿ. ಗ್ರಾಮೀಣ ಪ್ರದೇಶದ ವಂಡ್ಸೆ ಸಮೀಪದ ಕಳಿ ನಿವಾಸಿ ಆಗಿರುವ ಚಿನ್ಮಯಿ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ.





