ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರು ನಾದೋಪಾಸಕ ವಿದ್ವಾನ್ ವಾಗೀಶ್ ಭಟ್ ಹಾಗೂ ಖ್ಯಾತ ತಬಲಾ ವಾದಕರಾದ ರಮೇಶ್ ಶ್ಯಾನುಭಾಗ್ ಅವರನ್ನು ಸನ್ಮಾನಿಸಿದರು. ಸಭೆಯಲ್ಲಿ ಅತಿಥಿಗಳಾಗಿ ಪಿ. ಜಯವಂತ ಪೈ, ಪದ್ಮನಾಭ ಪ್ರಭು ಇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತ ಸಂಗೀತ ಕಲಾವಿದೆ ಶ್ರೀಮತಿ ಆಶಾ ಪಿ. ನಾಯಕ್ ರವರನ್ನು ಗೌರವಿಸಲಾಯಿತು. ವಿದ್ವಾನ್ ವಾಗೀಶ್ ಭಟ್ ರವರಿಂದ ಭಜನೆ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು. ಉದಯ ಭಂಡಾರ್‌ಕಾರ್ ವಂದಿಸಿದರು.