ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಸುಳ್ಯ: ಕುಂದಾಪುರದಿಂದ ವೆಲಂಕಣಿ ಪುಣ್ಯ ಕ್ಷೇತ್ರದ ದರ್ಶನಕ್ಕೆ ತೆರಳಿ ಟೆಂಪೊ ಟ್ರಾವೆಲರ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ಸುಳ್ಯದ ಕನಕಮಜಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಆಸೀಸಿ ಫ್ರಾನ್ಸಿಸ್, ಅನಿತಾ ಹಾಗೂ ಮಗು ಸಾವಿಯನ್ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ ವಾಹನ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಕುಂದಾಪುರ ಚರ್ಚ್ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ ಅವರ ಪತ್ನಿ ಆಲಿಸ್ ರೀಟಾ, ಹಿರಿ ಮಗ ಅಂಟೋನಿ ಸಂದೇಶ್, ಮಿತ್ರ ಅಂಟೋನಿ ಆಲ್ಮೇಡಾ ಅವರು ಪ್ರಯಾಣಿಸುತ್ತಿದ್ದು ಎಲ್ಲರಿಗೂ ಗಾಯಗಳಾಗಿವೆ. ವಾಹನ ಚಾಲಕ ಆರ್ಚಿ ಕರ್ವಾಲ್ಲೊ ಮತ್ತು ಸತೀಶ್ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘










