ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಂಗಳೂರು ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನದ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಸಭೆ ಜರುಗಿತು.
ಈ ಸಂದರ್ಭದಲ್ಲಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ, ಆಂಜನೇಯ ಶಕ್ತಿ, ಸ್ವಾಮಿನಿಷ್ಠೆ, ಯುಕ್ತಿಯ ಮೂಲಕ ಪ್ರಸಿದ್ದಿ ಪಡೆದು ನೆಚ್ಚಿನ ದೇವರಾಗಿ ಜನರ ಕಷ್ಟ ನಿವಾರಿಸುತ್ತಾ ಬಂದಿದ್ದಾನೆ. ವಿದ್ಯಾರ್ಥಿಗಳು ತಮ್ಮ ಜೀವನಲ್ಲಿ ಧಾರ್ಮಿಕತೆ ಅಳವಡಿಸಿಕೋಳ್ಳಬೇಕು.ದೇವರ ಮೇಲೆ ನಂಬಿಕೆಯಿಂದ ಮನುಷ್ಯನು ಸಾರ್ಥಕ ಜೀವನ ನಡೆಸಲು ಸಾದ್ಯವಾಗುತ್ತದೆ ಎಂದರು.
ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ ಧಾರ್ಮಿಕ ಸಭೆ ಉದ್ಘಾಟಿಸಿದರು. ಕೋಟೇಶ್ವರ ಜಿಪಂ ಸದಸ್ಯೆ ಲಕ್ಷ್ಮೀ ಎಂ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಹಂಗಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜ ಆರ್ ಚಂದನ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲ ಅಧ್ಯಕ್ಷ ರಘುರಾಮ ದೇವಾಡಿಗ ಆಲೂರು ಉಪಸ್ಥಿತರಿದ್ದರು. ದೇವಸ್ಥಾನ ಸಂಸ್ಥಾಪಕ ಸುರೇಶ ಡಿ ಪಡುಕೋಣೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು. ತಾಲೂಕ್ ದೇವಾಡಿಗರ ಸಮಾಜ ಸೇವಾ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಸ್ವಾಗತಿಸಿದರು. ಗುರುರಾಜ ಗಾಣಿಗ ಹಂಗಳೂರು ನಿರೂಪಿಸಿ, ದಿನೇಶ ದೇವಾಡಿಗ ವಂದಿಸಿದರು.