ರೋಟರಿ ಸನ್ರೈಸ್ : ಸಮಾಜ ಮುಖಿ ಸೇವೆಗೆ ಸಂದಿತು 31 ಜಿಲ್ಲಾ ಪ್ರಶಸ್ತಿಗಳ ಗೌರವ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ತನ್ನ 2016-17ರ ಸಾಲಿನಲ್ಲಿ ನಡೆಸಿದ ಸಮಾಜ ಮುಖಿ ಸೇವೆಗಳು ಮತ್ತು ಬಹುಮುಖಿ ಕಾರ್ಯಕ್ರಮಗಳಿಂದ ರೋಟರಿ ಜಿಲ್ಲಾ ೩೧೮೨ ವತಿಯಿಂದ ದಾಖಲೆಯ ೩೧ ಜಿಲ್ಲಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಾಧನೆಯ ಮೈಲಿಗಲ್ಲನ್ನು ಸೃಷ್ಠಿಸಿದೆ.

Call us

Click Here

ಹಾಸನದಲ್ಲಿ ನಡೆದ ರೋಟರಿ 3182 ಆವಾರ್ಡ್ ನೈಟ್ ಮತ್ತು ಜಿಲ್ಲಾ ಎಸೆಂಬ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಡಿ.ಎಸ್.ರವಿಯವರು ರೋಟರಿ ಸನ್ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳರಿಗೆ 14 ಪ್ರಥಮ 9 ದ್ವಿತೀಯ 8 ತೃತೀಯ ಒಟ್ಟು 31 ಪ್ರಶಸ್ತಿಗಳನ್ನು ನೀಡಿ
ಗೌರವಿಸಿದ್ದಾರೆ. ಮಧ್ಯಮ ವಿಭಾಗದ ಕ್ಲಬ್ಗಳಲ್ಲಿ ರೋಟರಿ ಸನ್ರೈಸ್ ಇಡೀ ಜಿಲ್ಲೆಯಲ್ಲೇ ದ್ವಿತೀಯ ಅತ್ಯುತ್ತಮ ಕ್ಲಬ್ ಪ್ರಶಸ್ತಿ ಗಳಿಸಿದೆ. ಕ್ಲಬ್ ಸರ್ವಿಸ್, ಒಕೇಶನಲ್ ಸರ್ವಿಸ್ ಮತ್ತು ಟೀಚ್ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲೇ ಮೊದಲ ಸ್ಥಾನಕ್ಕೆ ಭಾಜನವಾಗಿದೆ. ಸಮುದಾಯ ಸೇವೆ ಮತ್ತು ಅಂತರಾಷ್ಟ್ರೀಯ ಸೇವೆಯಲ್ಲಿ ಜಿಲ್ಲೆಯಲ್ಲೇ ತೃತೀಯ ಪ್ರಶಸ್ತಿ ಗಳಿಸಿದೆ. ಕ್ಲಬ್ ಸರ್ವಿಸ್ನಲ್ಲಿ 8 ಪ್ರಶಸ್ತಿ ಒಕೇಶನಲ್ಲ್ಲಿ 5 ಪ್ರಶಸ್ತಿ ಸಮುದಾಯ ಸೇವೆಯಲ್ಲಿ ೭ ಪ್ರಶಸ್ತಿ, ಟೀಚ್ ಕಾರ್ಯಕ್ರಮದಲ್ಲಿ ೫ ಪ್ರಶಸ್ತಿ, ಇಂಟರ್ನ್ಯಾಶನಲ್ ಸರ್ವಿಸ್ನಲ್ಲಿ ೪ ಪ್ರಶಸ್ತಿ, ಯುತ್ ಸರ್ವಿಸ್ ನಲ್ಲಿ 1 ಪ್ರಶಸ್ತಿ ತನ್ನದಾಗಿಸಿಕೊಂಡಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೋಟರಿ ಸನ್ರೈಸ್ ಸದಸ್ಯರಾದ ಸತೀಶ್ ಎನ್ ಶೇರೆಗಾರ್, ಪ್ರಮೋದ್ ಕುಮಾರ್ ಶೆಟ್ಟಿ, ಬಿ.ಎಂ ಚಂದ್ರ ಶೇಖರ್, ದಿನಕರ್ ಪಟೇಲ್, ಅಜೀತ್, ಗಣೇಶ್.ಸಿ.ಎಚ್., ನಾಗೇಶ್ ನಾವಡ, ಸದಾನಂದ ಉಡುಪ, ರಾಜು ಪೂಜಾರಿ, ಶಿವಾನಂದ ಎಂ.ಪಿ ಉಪಸ್ಥಿತರಿದ್ದರು. ರೋಟರಿ ಸನ್ರೈಸ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಈ ಪ್ರಶಸ್ತಿಗಳ ಸುರಿಮಳೆಗೆ ಸಹಕರಿಸಿದ ಎಲ್ಲಾ ರೋಟರಿ ಸನ್ರೈಸ್ ಸದಸ್ಯರಿಗೆ ವಲಯ ಸಹಾಯಕ ಗವರ್ನರ್ ಮಧುಕರ್ ಹೆಗ್ಟೆ ಅವರ ಮಾರ್ಗದರ್ಶನಕ್ಕೆ ರೋಟರಿ ಸನ್ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಮತ್ತು ಕಾರ್ಯದರ್ಶಿ ನಾಗೇಶ್ ನಾವಡ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply