ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ವಿ ಪಾಟೀಲ್ ಅವರನ್ನು ಕುಂದಾಪುರ ಬಾರ್ ಅಸೋಷಿಯೇಶನ್ ರಿ. ಕುಂದಾಪುರ ಇದರ ವತಿಯಿಂದ ಬೀಳ್ಕೊಡಲಾಯಿತು.
ಕುಂದಾಪುರದ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ಹೆಚ್ಚುವರಿ ಜಿಲ್ಲಾ ಮತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಅವರು ಇದೀಗ ಬೆಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಪ್ರಧಾನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುತ್ತಾರೆ.
ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ನನ್ನ ಅವಧಿಯಲ್ಲಿ ಬಹಳಷ್ಟು ಕಸ್ಟಡಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿದ ಸಮಾಧಾನ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರಾದವರು ಸಾಕಷ್ಟು ಪರಿಶೀಲಿಸಿ ನ್ಯಾಯಾದಾನ ಮಾಡೋ ಅವಶ್ಯಕತೆ ಬಹಳಷ್ಟು ಇದೆ ಎಂದರಲ್ಲದೆ, ಕುಂದಾಪುರ ವಕೀಲರ ಸಹಕಾರವನ್ನು ಸ್ಮರಿಸಿದರು.
ಕುಂದಾಪುರ ಬಾರ್ ಅಸೋಷಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ ನಾನು ಕಂಡ ಮೇಧಾವಿ ಜಡ್ಜ್‌ಗಳಲ್ಲಿ ಪಾಟೀಲ್ ಕೂಡಾ ಒಬ್ಬರು. ಮಾನವೀಯತೆಯ ಜೊತೆಗೆ ಪ್ರಕರಣಗಳನ್ನು ಸುಲಭವಾಗಿ ಪರಿಶೀಲಿಸಿ ನ್ಯಾಯದಾನ ಮಾಡುವ ಶಕ್ತಿ ಪಾಟೀಲ್‌ರಿಗೆ ಇದೆ. ಎಲ್ಲರನ್ನು ಪ್ರೀತಿಸುವ ಜೊತೆ, ಗೌರವದಿಂದ ನೋಡುವ ಭಾವನೆ ಇದ್ದು, ಅವರೊಬ್ಬ ಸೇಹ್ನ ಜೀವಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಲಾವಣ್ಯ ಎಚ್ ಎನ್, ೨ನೇ ಹಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚಂದ್ರಶೇಖರ ಬಣಕಾರ್ ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿಗಳಾದ ಎ.ಬಿ.ಶೆಟ್ಟಿ, ಜಿ ಸಂತೋಷ್ ಕುಮಾರ್ ಶೆಟ್ಟಿ, ರಾಮಕೃಷ್ಣ ರಾವ್, ರವಿಕಿರಣ್ ಮುರ್ಡೆಶ್ವರ, ಟಿ.ಬಿ.ಶೆಟ್ಟಿ, ಕಾಳಾವಾರ ಉದಯ್ ಕುಮಾರ್ ಶೆಟ್ಟಿ, ಸಳ್ವಾಡಿ ನಿರಂಜನ್ ಹೆಗ್ಡೆ, ಎ. ಶಶಿಧರ ಹೆಗ್ಡೆ, ಕಾಳಾವರ ಪ್ರದೀಪ್ ಶೆಟ್ಟಿ, ಕೈಲಾಡಿ ಬಾಲಕೃಷ್ಣ ಶೆಟ್ಟಿ, ಕೆ.ಸಿ.ಶೆಟ್ಟಿ, ಕೆ. ಕುಸುಮಾಕರ ಶೆಟ್ಟಿ, ಕೆರಾಡಿ ಪ್ರಸನ್ನ ಕುಮಾರ ಶೆಟ್ಟಿ, ರಾಮದಾಸ್ ನಾಯಕ್, ಧನಂಜಯ ಶೆಟ್ಟಿ ಮತ್ತು ಸಹಾಯಕ ಸರಕಾರಿ ಅಭಿಯೋಜಕರಾದ ಮಮ್ತಾಜ್ ಮುಂತಾದವರು ನ್ಯಾಯಾಧೀಶರ ಸೇವೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕುಂದಾಪುರ ಬಾರ್ ಅಸೋಷಿಯೇಶನ್ ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ಹೆಚ್. ರವೀಶ್ಚಂದ್ರ ಶೆಟ್ಟಿ ವಂದಿಸಿದರು, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.