ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ರ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಯುವ ಜೇಸಿ ಸದಸ್ಯರಿಗೆ ಟೆಕ್ ಆಫ್ ೨೦೧೭ ತರಬೇತಿ ಕಾರ್ಯಗಾರವನ್ನು ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಪರ್ಕಳ ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಬೆಳ್ಮಣ್ಣು ಜ್ಯೂನಿಯರ್ ಜೇಸಿವಿಂಗ್, ಜೇಸಿಐ ಸಾಸ್ತಾನ ವೈರ್ಬೆಂಟ್ ಜ್ಯೂನಿಯರ್ ಜೇಸಿವಿಂಗ್ ಸಂಯುಕ್ತ ಆಶ್ರಯದಲ್ಲಿ ಯುವ ಜೇಸಿ ಸದಸ್ಯರಿಗೆ ಒಂದು ದಿನದ ಪರಿಣಾಮಕಾರಿಯಾಗಿ ಭಾಷಣ ಕಲೆ ಬಗ್ಗೆ ತರಬೇತಿ ಕಾರ್ಯಗಾರವು ರಂದು ಕುಂದಾಪುರ ಬಿ.ಆರ್.ರಾವ್ ಹಿಂದು ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಲಯ ೧೫ರ ತರಬೇತಿ ವಿಭಾಗದ ಸಂಯೋಜಕ ಜೇಸಿ ವಿಷ್ಣು ಕೆ.ಬಿ, ಪೂರ್ವ ವಲಯಾಧಿಕಾರಿ ಜೇಸಿ ಶಕೀರ್ ಎಮ್.ಹಾವಂಜೆ, ಜೇಸಿಐ ಕುಂದಾಪುರ ಅಧ್ಯಕ್ಷೆ ಜೇಸಿ ಅsಕ್ಷತಾ ಗಿರೀಶ ಐತಾಳ ಜೇಸಿಐ ಪರ್ಕಳ ಅಧ್ಯಕ್ಷೆ ಜೇಸಿ ಆಶ.ಬಿ.. ತರಬೇತುದಾರರಾಗಿ ಜೇಸಿ ರಾಘವೇಂದ್ರ ಪ್ರಭು ಹಾಗೂ ಜೇಸಿ ಸುಬ್ರಹ್ಮಣ್ಯ ಜಿ ಜೇಸಿಐ ಸಾಸ್ತಾನ ವೈರ್ಬೆಂಟ್ ಅಧ್ಯಕ್ಷ ಜೇಸಿ ದಿನೇಶ್ ಭಾಂಧವ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು ಜೇಸಿಐ ಪರ್ಕಳ ಜ್ಯೂನಿಯರ್ ಜೇಸಿವಿಂಗ್ ಅಧ್ಯಕ್ಷ ಜೆಜೆಸಿ ಸ್ವರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. .ಕಾರ್ಯಕ್ರಮದಲ್ಲಿ ಜೇಸಿಐ ಸಾಸ್ತಾನ ವೈರ್ಬೆಂಟ್ ಜ್ಯೂನಿಯರ್ ಜೇಸಿವಿಂಗ್ ಅಧ್ಯಕ್ಷ ಜೆಜೆಸಿ ಶ್ರೀಶಾ ಆಚಾರ್. ಜೇಸಿಐ ಕುಂದಾಪುರ ಜ್ಯೂನಿಯರ್ ಜೇಸಿ ಅಧ್ಯಕ್ಷ ಜೆಜೆಸಿ ಸುಬ್ರಮಣ್ಯ ಆಚಾರ್, ಜೇಸಿಐ ಬೆಳ್ಮಣ್ಣು ಜ್ಯೂನಿಯರ್ ಜೇಸಿವಿಂಗ್ ಅಧ್ಯಕ್ಷ ಜೆಜೆಸಿ ಅಭಿಜಿತ್ ರಾವ್, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಜೇಸಿ ಚೇತನ್ ದೇವಾಡಿಗ ಉಪಸ್ಥಿತರಿದ್ದರು ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ಜೇಸಿ ಚೇತನ್ ದೇವಾಡಿಗ ಕಾರ್ಯಕ್ರಮದ ಪ್ರಾಸ್ಥವಿಕ ಮಾತುಗಳನ್ನು ನುಡಿದರು. ವಿವಿಧ ಘಟಕಗಳ ಸುಮಾರು ೨೫ ಅಧಿಕ ಜೆಜೆಸಿ ಸದಸ್ಯರು ಕಾರ್ಯಗಾರದಲ್ಲಿ ತರಬೇತಿಯನ್ನು ಪಡೆದುಕೊಂಡರು ಜೇಸಿಐ ಬೆಳ್ಮಣ್ಣು ಜ್ಯೂನಿಯರ್ ಜೇಸಿವಿಂಗ್ ಅಧ್ಯಕ್ಷ ಜೆಜೆಸಿ ಅಭಿಜಿತ್ ರಾವ್ ವಂದನಾರ್ಪಣೆ ಮಾಡಿದರು.