ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಸಂಯೋಜಕ ವೃತ್ತದಲ್ಲಿ 2016-17ರ ಅಂತ್ಯದಲ್ಲಿ ಮತ್ತು 2017-18ನೇ ಸಾಲಿನ ಆರಂಭದಲ್ಲಿ ನಿವೃತ್ತರಾದ ಐವರು ಮುಖ್ಯ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನಿವೃತ್ತಿ ಹೊಂದಿದ ಸ.ಹಿ.ಪ್ರಾ.ಶಾಲೆ ಕೋಣಿಯ ರಘುವೀರ ಕೆ., ಸ.ಹಿ.ಪ್ರಾ.ಶಾಲೆ ಟಿ.ಟಿ.ರಸ್ತೆಯ ಶಂಕರ ಶೇರೇಗಾರ್, ಹಿಂದೂ ಮಾದರಿ ಹಿ.ಪ್ರಾ.ಶಾಲೆ ಬಸ್ರೂರಿನ ಇಂದಿರಾ ಆರ್.ಶೆಟ್ಟಿ, ಸ.ಹಿ.ಪ್ರಾ.ಶಾಲೆ ಬಳ್ಕೂರು-ಉತ್ತರದ ರೋಸಾ ಇವ್ಲಿನ್ ಮೊಂತೆರೋ, ಆರ್.ಸಿ.ಅನುದಾನಿತ ಹಿ.ಪ್ರಾ.ಶಾಲೆ ಬಸ್ರೂರಿನ ಲೀನಾ ಡಿ’ಸೊಜಾ ಅವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆದೂರು ಸೀತಾರಾಮ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಶಿಕ್ಷಣ ಸಂಯೋಜಕಿ ಶ್ರೀಮತಿ ದೇವಕುಮಾರಿ, ಮುಖ್ಯ ಶಿಕ್ಷಕಿ ಶ್ರಿಮತಿ ಸುಮನಾ ಅವರು ನಿವೃತ್ತರನ್ನು ಸನ್ಮಾನಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರ ಮಾದರಿ ಹಿ.ಪ್ರಾ. ಶಾಲೆ ವಡೇರಹೋಬಳಿಯ ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ವಂದಿಸಿದರು. ಶಂಕರ ಶೆಟ್ಟಿ, ಸಂಧ್ಯಾ, ತಿಲೋತ್ತಮಾ ಬಾಯಿ ಸಹಕರಿಸಿದರು.