Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕರಾವಳಿಯಲ್ಲಿ ನಡೀತಿದೆ ಭಟ್ಟರ ಹೈ ಡ್ರಾಮಾ….!
    ವಿಶೇಷ ವರದಿ

    ಕರಾವಳಿಯಲ್ಲಿ ನಡೀತಿದೆ ಭಟ್ಟರ ಹೈ ಡ್ರಾಮಾ….!

    Updated:21/04/2015No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಸಿನೆಮಾ ಕ್ಷೇತ್ರದಲ್ಲಿ ಏನಾದರೂ ಹೊಸತನವನ್ನು ಮಾಡುತ್ತಲೇ ಹೆಸರುವಾಸಿಯಾಗಿರುವ ಕರಾವಳಿ ಪ್ರದೇಶದ, ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್ರ ಹೊಸ ಸಿನೆಮಾ `ಡ್ರಾಮಾ’ ಇನ್ನೇನು ಸೆಟ್ ಏರುವ ಹಂತದಲ್ಲಿದ್ದು, ಅಂತಿಮ ಹಂತದ ಚಿತ್ರೀಕರಣವಿದೀಗ ಕುಂದಾಪುರದ ಕಡಲ ತೀರದ ಹಲವು ಭಾಗಗಳಲ್ಲಿ ನಡೆಯುತ್ತಿದೆ.ಚಿತ್ರದ ಶೀಷರ್ಿಕೆ ಗೀತೆಯ ಚಿತ್ರೀಕರಣ ಬೀಜಾಡಿಯ ಸನ್ ಪೀಸ್ಟ್ ರೆಸಾರ್ಟ್  ಸಮೀಪದ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ.ಇದಕ್ಕಾಗಿ ಸಂಪೂರ್ಣ ಚಿತ್ರತಂಡ ವಾರಗಳ ಕಾಲ ಇಲ್ಲಿ ಬೀಡುಬಿಟ್ಟಿದ್ದು ಚಿತ್ರದ ಕ್ಲೈಮ್ಯಾಕ್ಸ್ ಹಂತದ ಸಾಹಸ ದ್ರಶ್ಯಗಳನ್ನು ಈ ಭಾಗದಲ್ಲಿ ಚಿತ್ರೀಕರಿಸಲಿದೆ.ಕುಂದಾಪುರ ,ಮರವಂತೆ ಪ್ರದೇಶಗಳಲ್ಲೂ ಸಿನೇಮಾದ ಚಿತ್ರೀಕರಣ ನಡೆಯಲಿದೆ.

    Click Here

    Call us

    Click Here

    * ಚಿತ್ರ: `ಡ್ರಾಮಾ’ * ಚಿತ್ರದ ನಾಯಕ ಯಶ್. * ಇನ್ನೋರ್ವ ನಾಯಕ ನೀನಾಸಂ ಸತೀಶ್ * ನಾಯಕಿ ರಾಧಿಕಾ ಪಂಡಿತ್ * ಇನ್ನೋರ್ವ ನಾಯಕಿ ಸಿಂಧು ಲೋಕನಾಥ್ * ನಿರ್ದೇಶಕ ಯೋಗರಾಜ್ ಭಟ್ಟ್ ಹಾಗೂ ಚಿನ್ನು ಪ್ರಕಾಶ್ ಮಾಸ್ಟರ್  * ಹಾಡಿನ ಚಿತ್ರೀಕರಣ ನಡೆಯುತ್ತಿರುವುದು

    ಚಿತ್ರೀಕರಣಕ್ಕೆ ಪೂರ್ವಭಾವಿಯಾಗಿ ನಿರ್ದೇಶಕ ಯೋಗರಾಜ್ ಭಟ್ಟರು ಕಳೆದ ಕೆಲ ದಿನಗಳ ಹಿಂದೆ ಕರಾವಳಿ ಭಾಗಕ್ಕೆ ಆಗಮಿಸಿ ಸ್ಥಳೀಯ ಸುಂದರ ಪ್ರದೇಶಗಳಿಗೆ ಭೇಟಿ ನೀಡಿ ಸ್ತಳ ಪರಿಶೀಲಿಸಿದ್ದರು.

    ಇಬ್ಬರು ನಾಯಕರಿಗೆ ಇಬ್ಬರು ನಾಯಕಿಯರು: ಚಿತ್ರದಲ್ಲಿ ಇರ್ವರು ನಾಯಕರು ಮತ್ತು ಅವರಿಗೆ ಇರ್ವರು ನಾಯಕರಿಯರಿದ್ದು ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ವೆಂಕಟೇಶ್ ಎನ್ನುವ ಮಂಡ್ಯದ ತರ್ಲೆ ಹುಡುಗನ ಪಾತ್ರ ಮಾಡಿದ್ದು,ಈ ಮಾತಿನ ಮಲ್ಲನಿಗೆ ತಕ್ಕದಾದ ನಾಯಕಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ.ಈಕೆ ಸಿಕ್ಕಾಪಟ್ಟೆ ಮೋಜಿನ ಹುಡುಗಿ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರದ ಇನ್ನೊಂದು ಜೋಡಿ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಇವರುಗಳು. ಚಿತ್ರದಲ್ಲಿ ಸತೀಶ್ ಮಾತಿನ ಮಲ್ಲನಾದರೆ ಸಿಂಧು ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಡ್ರಾಮಾ ತನಿನನನ… ಓತ್ಲಾ ಹಿತವಚನ…. : ಬೀಜಾಡಿ ಕಡಲ ತೀರದಲ್ಲಿ ದಿನಾಂಕ 26.ರಿಂದ ಚಿತ್ರದ ಶೀರ್ಷಿಕೆ ಗೀತೆಗೆ ನಾಯಕ ನಾಯಕಿಯರು ಹೆಜ್ಜೆ ಹಾಕುತ್ತಿದ್ದಾರೆ…ಡ್ರಾಮಾ ತನಿನನನ…..ಓತ್ಲಾ ಹಿತವಚನ….. ಎನ್ನುವ ಶಿರ್ಷಿಕೆ ಗೀತೆಗೆ ಬೆಲೂನು ಕಟ್ಟಿದ ಸೈಕಲ್ ಹಾಗೂ ಬಣ್ಣಬಣ್ಣದ ಕೊಡೆಗಳನ್ನು ಹಿಡಿದು ಹಾಡಿನ ಮೇಕಿಂಗ್ನಲ್ಲಿ ನಾಯಕರು ಮತ್ತು ನಾಯಕಿಯರು ಬ್ಯುಸಿಯಾಗಿದ್ದಾರೆ .

    Click here

    Click here

    Click here

    Call us

    Call us

    ಅದ್ದೂರಿ ಸಹ ಕಲಾವಿದರ ತಂಡ: ಚಿತ್ರ ಸಂಪೂರ್ಣ ಮನೋರಂಜನೆಗೆ ಒತ್ತು ನೀಡಿದ್ದರೂ ಕೂಡ ಸಾಹಸ ದ್ರಶ್ಯಗಳಿಗೇನೂ ಕಮ್ಮಿ ಇಲ್ಲ. ಲೋಹಿತಾಶ್ವ ಮತ್ತು ಧೀರ ರಾಕ್ಲೈನ್ ವೆಂಕಟೇಶ್ ಖಳನಾಯಕರಾಗಿ ನಟಿಸುತ್ತಿದ್ದಾರೆ.ಚಿತ್ರ ಮನೋರಂಜನೆಗೆ ಒತ್ತು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ, ಪ್ರಾಯದ ವಯಸ್ಸಿನ ಯುವಕ-ಯುವತಿಯರಮನೋಭಾವನೆಯನ್ನು, ವ್ಯಕ್ತಿತ್ವವನ್ನು ಚಿತ್ರ ಬಿಂಬಿಸುತ್ತದೆ.

    ಚಿತ್ರ ನಿರ್ಮಾಣದ ಜವಬ್ದಾರಿಯನ್ನು ಜಯಣ್ಣ, ಕೋರಿಯೋಗ್ರಾಫರ್ ಜವಬ್ದಾರಿಯನ್ನು ಚಿನ್ನು ಪ್ರಕಾಶ್ ಮಾಸ್ಟರ್, ಛಾಯಾಗ್ರಹಣವನ್ನು ಕ್ರಷ್ಣ ನಿರ್ವಹಿಸುತ್ತಿದ್ದು ಚಿತ್ರಕ್ಕೆ ಹರಿಕ್ರಷ್ಣರವರ ಸಂಗೀತವಿದೆ.

    ಈಗಾಗಲೇ ಮೈಸೂರು ಭಾಗದಲ್ಲಿ ಚಿತ್ರೀಕರಣ ಮುಗಿದಿದ್ದು ಕರಾವಳಿ ಭಾಗದಲ್ಲಿ ಕ್ಲೈಮಾಕ್ಸ್ ಚಿತ್ರೀಕರಣದ ನಂತರ ರೀ ರೆಕಾಡರ್ೀಂಗ್ ಹಾಗೂ ತಾಂತ್ರಿಕ ಕೆಲಸಗಳ ನಂತರ ಅಂದರೆ ಆಗಸ್ಟ್ ನ ಮೊದಲನೇ ವಾರದಲ್ಲಿ ಸಿನೇಮಾ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆ ಚಿತ್ರತಂಡದ್ದು.

    ಒಟ್ಟಾರೆ ಸಿನೀಮಾ ರಸಿಕರಿಗೆ ಸದಾ ಹೊಸತನವನ್ನು ಉಣಬಡಿಸುತ್ತಾ, ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿರುವ ನಿದರ್ೇಶಕ ಯೋಗರಾಜ್ ಭಟ್ಟರ `ಡ್ರಾಮಾ’ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ರಂಜಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

    – ಯೊಗೀಶ್ ಕುಂಭಾಶಿ

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಸೈಕಲ್‌ನಲ್ಲಿ 3,300 ಕಿಮೀ ಕ್ರಮಿಸಿ ಲಡಾಕ್ ಯಾತ್ರೆ ಪೂರೈಸಿದ ಹಳ್ಳಿಹೊಳೆಯ ಯುವಕ ದಿನೇಶ್‌ ಬೋವಿ

    30/09/2025

    ಹಾರರ್, ಹಾಸ್ಯ ಮತ್ತು ವಿಸ್ಮಯದ ಪರಿಗೆ ಪ್ರೇಕ್ಷಕ ಫಿದಾ –  ‘ಛೂ ಮಂತರ್’ ಚಿತ್ರ ವಿಮರ್ಶೆ

    11/02/2025

    ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಟ್ರಿಪಲ್‌ ತಲಾಖ್‌ ಸಿನಿಮಾಗೆ ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಚಿತ್ರ ಪ್ರಶಸ್ತಿ

    24/01/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.