ಸೆ.24 ಬೆಂಗಳೂರಿನಲ್ಲಿ ಯಕ್ಷ ವೇದ ತಾಳ ನಿನಾದ. ಮಿಸ್ ಮಾಡ್ಕೊಬೇಡಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು, ಯಕ್ಷ ಸಂಘಟಕರು ಸೇರಿ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಲೆಯ ಬೆಳವಣಿಗೆಯಲ್ಲಿ ಕಲೆ, ಕಲಾವಿದ, ಪ್ರೇಕ್ಷಕ ಇವುಗಳು ಒಂದು ಸಾಮರಸ್ಯದ ಕೊಂಡಿ ಹೆಣೆದು ನಿಂತಿವೆ. ಯಕ್ಷಗಾನ ಕಲೆಯ ಸರ್ವಾಂಗೀಣ ತಿಳುವಳಿಕೆ ನೀಡುವ, ಹಿಂದಿನ ಸಂಪ್ರದಾಯ, ಇಂದಿನ ಸ್ಥಿತಿ – ದುಸ್ಥಿತಿಗಳ ಬಗೆಗಿನ ಸಮಷ್ಟಿ ಸಂವಾದವೇ ಈ ” ಯಕ್ಷ ವೇದ ತಾಳ ನಿನಾದ” ಕಾರ್ಯಕ್ರಮ.

Call us

Click Here

ಬೆಂಗಳೂರಿನ ಯಕ್ಷ ಕಲಾ ಸಾಗರ ಸೆಪ್ಟೆಂಬರ್ 24 ಭಾನುವಾರ ಮಧ್ಯಾಹ್ನ 3:30ಕ್ಕೆ ರವೀಂದ್ರ ಕಲಾಕ್ಷೇತ್ರ ಮುಂಬಾಗದ ಎಡಿಎ ರಂಗಮಂದಿರದಲ್ಲಿ ಯಕ್ಷ ವೇದ ತಾಳ ನಿನಾದ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನದ ರಾಗ, ತಾಳ, ನರ್ತನ, ಸಾಹಿತ್ಯ, ಮಟ್ಟು, ತಿಟ್ಟು, ಪ್ರಬೇಧ ಹೀಗೆ ಎಲ್ಲಾ ಆಯಾಮದ ಸಂವಾದಿಂದ ನಮ್ಮಲ್ಲಿರುವ ಜಿಜ್ಞಾಸೆಗಳಿಗೆ ಉತ್ತರ ದೊರಕಲಿದೆ.

ಪ್ರೇಕ್ಷಕರೊಂದಿಗೆ ಸಂವಾದ:
ಧಾರೇಶ್ವರರು, ಕೊಳಗಿಯವರು, ವಿಧ್ವಾನ್ರು, ಸರ್ವೇಶ್ವರರು, ಶಂಕರ ಭಾಗವತರು, ಎ.ಪಿ ಪಾಠಕರು, ಕೃಷ್ಣ ಯಾಜಿಯವರು ಭಾಗವಹಿಸಲಿದ್ದಾರೆ. ಪ್ರೇಕ್ಷಕರ ಜೋತೆ ಸಂವಾದದಲ್ಲಿ ಹಿರಿಯ ಸಾಹಿತಿಗಳು ಹಾಗು ಸಂಶೋಧಕರು ಆದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು ಪ್ರೇಕ್ಷಕರು ಮುಕ್ತವಾಗಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದು ಆಯೋಜಕರಾದ ಎ.ಎನ್ ಹೆಗಡೆ ಕಡತೋಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply