ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶುಕ್ರವಾರ ಶರನ್ನವರಾತ್ರಿಯ ಮಹಾ ನವಮಿಯಂದು ಸುಹೂಮೂರ್ತದಲ್ಲಿ ಪುಷ್ಪರಥೋತ್ಸವ ನಡೆಯಿತು.
ಪ್ರಾರಂಬಿಕ ಹಂತದಲ್ಲಿ ದೇವಿಯ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೆವಾಲಯದ ಒಳಪ್ರಾಂಗಣದಲ್ಲಿ ಒಂದುಸುತ್ತು ಬರುತ್ತಿದ್ದಂತೆ ಶ್ರೀ ಮೂಕಾಂಬಿಕೆಯ ಸ್ತೋತ್ರಪಠಿಸಿ ದೇವಿಯ ದರ್ಶನ ಪಡೆದು ಕಣ್ತುಂಬಿಕೊಂಡು ಪುಳಕಿತರಾದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತವೃಂದ ’ಅಮ್ಮಾ, ದೇವಿ, ನಾರಾಯಣಿ’ ಎಂಬಿತ್ಯಾದಿ ಉದ್ಘೋಷದಿಂದ ಮೈಮರೆತು ಭಕ್ತಿಪರವಶರಾದರು.
ನವರಾತ್ರಿಯ ಮಹಾನವಮಿಯಂದು ಪ್ರಸಾದ ರೂಪವಾಗಿ ದೊರಕುವ ಈ ನಾಣ್ಯ ಭಾಗ್ಯವನ್ನು ದಯಪಾಲಿಸುತ್ತದೆ ಹಗೂ ಆರ್ಥಿಕ ಸ್ಥಿತಿ-ಗತಿಗಳನ್ನು ಭದ್ರಪಡಿಸುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇಂದಿಗೂ ಅಚಲವಾಗಿದ್ದು, ಇದಕ್ಕಾಗಿ ಮಹಾನವಮಿಯ ರಥೋತ್ಸವ ಸಂದರ್ಭದಲ್ಲಿ ದೇವಸ್ಥಾನದ ಪೌಳಿಯ ಒಳ ಪ್ರಾಂಗಾಣದಲ್ಲಿ ಲಕ್ಷಾಂತರ ಜನರು ಮಹಾನವಮಿಯಂದು ನಡೆಯುವ ಶ್ರೀದೇವಿಯ ರಥೋತ್ಸವಕ್ಕಾಗಿ ಕಾಯುತ್ತಾರೆ. ಇದರಲ್ಲಿ ಕೇರಳಿಗರೆ ಹೆಚ್ಚು ಎನ್ನುವುದು ವಿಶೇಷ. ಈ ಸಂದರ್ಭ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ದೇವಳದ ವ್ಯವಸ್ಥಾಪನಾ ಸಮಿತಿ, ಆಡಳಿತ ಮಂಡಳಿ, ಅರ್ಚಕವೃಂದ ಹಾಗೂ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು. ಯಾವೂದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಪೋಲಿಸರು ಮುಂಜಾಗೃತಾ ಕ್ರಮವಾಗಿ ವಿಶೇಷ ಬಿಗುಬಂದೋಬಸ್ತ್ ಮಾಡಿದ್ದರು.