ಅರೆಹೊಳೆ: ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆ. ಕೊಲೆ ಶಂಕೆ?

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಅ9: ಇಲ್ಲಿಗೆ ಸಮೀಪದ ಅರೆಹೊಳೆಯ ನಿರ್ಜನ ಅರಣ್ಯ ಪ್ರದೇಶದಲ್ಲಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತರನ್ನು ಹೇರೂರು ಗ್ರಾಮದ ರಾಗಿಹಕ್ಲು ಸಿದ್ದನಮನೆ ನಿವಾಸಿ ನಾರಾಯಣ ನಾಯ್ಕ (65) ಗುರುತಿಸಲಾಗಿದೆ.

Call us

Click Here

ಮೃತ ನಾರಾಯಣ ನಾಯ್ಕ ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದು ಶನಿವಾರ ಬೆಳಗ್ಗೆ ಮನೆಯಿಂದ ಹೊರಟವರು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಅರೆಹೊಳೆ ಆಶೀರ್ವಾದ ಬಾರ್‌ನಲ್ಲಿ ಮದ್ಯ ಸೇವಿಸಿದ್ದರು ಎಂದು ಬಾರ್ ಮಾಲಕರು ತಿಳಿಸಿದ್ದು ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಭಾನುವಾರ ಬೆಳಗ್ಗೆ ಬಾರ್ ಹಿಂಭಾಗದಲ್ಲಿರುವ ಮಹಾದೇವ ಮಂಜ ಅವರಿಗೆ ಸೇರಿದ ನಿರ್ಜನ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ವರ್ಷದ ಹಿಂದೆ ಅವರ ಪುತ್ರನೊಬ್ಬ ಆಕಸ್ಮಿಕವಾಗಿ ಮೃತಪಟ್ಟಿದ್ದು, ಆ ಬಳಿಕ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಹೆಚ್ಚು ಹೆಚ್ಚು ಮದ್ಯ ಸೇವಿಸುತ್ತಿದ್ದರು ಎಂದು ಅವರ ಇನ್ನೊರ್ವ ಪುತ್ರ ರಾಜು ನಾಯ್ಕ ತಿಳಿಸಿದ್ದಾರೆ.

ವಿಪರೀತ ಮದ್ಯ ಸೇವನೆ ಚಟಹೊಂದಿರುವ ನಾರಾಯಣ ನಾಯ್ಕ್ ಹೃದಯಾಘಾತದಿಂದ ಅಥವಾ ವಿಷಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಮೃದೇಹದ ಮುಖದ ಹಾಗೂ ದೇಹದ ಮೇಲೆ ರಕ್ತ ಹರಡಿದ ರೂಪದಲ್ಲಿ ಕಾಣುತ್ತಿರುವುದು ಮತ್ತು ನಿರ್ಜನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುರುವುದರ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Leave a Reply