ಕುಂದಾಪುರ: ಉದಯವಾಣಿಯ ಕುಂದಾಪುರ ಕಛೇರಿಯು ನಗರದ ಮುಖ್ಯರಸ್ತೆಯ ಬಳಿ ಇರುವ ಶ್ರೀಸಾಯಿ ಸೆಂಟರ್‌ನ ಎರಡನೇ ಮಹಡಿಗೆ ಸ್ಥಳಾಂತರಗೊಂಡಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ನ ಸಿಇಒ ವಿನೋದ್ ಕುಮಾರ್, ಫೈನಾನ್ಸ್ ಡಿ.ಜಿ.ಎಂ. ಸುದರ್ಶನ್ ಶೇರಿಗಾರ್, ರಾಧಾಕೃಷ್ಣ ಕೊಡವೂರು, ಕೃಷ್ಣಮೂರ್ತಿ, ಉದಯ ಆಚಾರ್ ಸಾಸ್ತಾನ, ಹರೀಶ್ ಜಾಲಾಡಿ, ವಿಶ್ವನಾಥ್, ರಾಘವೇಂದ್ರ ಪ್ರಭು, ಸಂತೋಷ್ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.
ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ. ನ ಮ್ಯಾಗಜೀನ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ರಾಮಚಂದ್ರ ಮಿಜಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಹ ಉಪಾಧ್ಯಕ್ಷ ಆನಂದ ಕೆ. ವಂದಿಸಿದರು.