ಜೇಸೀ ರಂಗ ಸಪ್ತಾಹ 2017 ಕ್ಕೆ ಚಾಲನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಸ್ವಲ್ಪ ಹಿಂದೆ ಬಿದ್ದಿದ್ದರು ಕೂಡ ಮತ್ತೆ ಪುಟಿದೇಳುತ್ತದೆ ಎಂದು ನಂಬಿಕೊಂಡವರು ನಾವು. ಅದಕ್ಕೆ ಪೂರಕವಾಗಿ ಇಂದು ಆಯೋಜಿಸಿರುವ ಕಾರ್ಯಕ್ರಮ ರಂಗ ಭೂಮಿಗೆ ಹೆಚ್ಚಿನ ಒತ್ತು ನೀಡಿದೆ. ವಿದ್ಯಾರ್ಥಿ ಜೀವನದಲ್ಲಿರುವ ಯಾರು ರಂಗ ಭೂಮಿ ಮತ್ತು ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರ ಮುಂದಿನ ಜೀವನದಲ್ಲಿ ಅವರು ಬಹಳಷ್ಟು ವಿಶಿಷ್ಟವಾಗಿರುತ್ತಾರೆ. ಅತ್ಯಂತ ಗ್ರಾಮೀಣ ಪ್ರದೇಶದಿಂದ ಬಂದ ಕೆಲವರ ನಡವಳಿಕೆ ಒರಟಾಗಿರುತ್ತದೆ ಪ್ರಥಮದಲ್ಲಿ, ಆದರೆ ನಾಟಕಗಳಲ್ಲಿ ತೊಡಗಿಸಿಕೊಂಡ ಬಳಿಕ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿರುವುದನ್ನು ನಾನು ಕಂಡಿದ್ದೇನೆ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ ಹೇಳಿದರು.

Call us

Click Here

ಅವರು ಕುಂದಾಪುರದ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಜೇಸಿಐ ಕುಂದಾಪುರ ವತಿಯಿಂದ ಕುಂದ ಸಂಪದ ಸಹಭಾಗಿತ್ವದಲ್ಲಿ ಆಯೋಜಿಸಲಾದ ಜೇಸೀ ರಂಗ ಸಪ್ತಾಹ ೨೦೧೭ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೇಸಿಐ ಕುಂದಾಪುರದ ಅಧ್ಯಕ್ಷೆ ಅಕ್ಷತಾ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ಇಂಡಿಯಾದ ನಿರ್ದೇಶಕರಾದ ವೈ.ಸುಕುಮಾರ್, ಜೇಸಿರೆಟ್ ಅಧ್ಯಕ್ಷೆ ನಾಗರತ್ನ ಜಿ.ಹೇರ್ಳೆ, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿಐ ರಾಪ್ಟ್ರೀಯ ಮಾಜಿ ಕಾನೂನು ಸಲಹೆಗಾರ ಶ್ರೀಧರ ಪಿ.ಎಸ್., ಕಾರ್ಯದರ್ಶಿ ರಾಘು ವಿಠಲವಾಡಿ, ಜೇಸಿರೆಟ್ ಅಧ್ಯಕ್ಷೆ ನಾಗರತ್ನ, ಕಾರ್ಯಕ್ರಮ ನಿರ್ದೇಶಕ ಚಂದನ್ ಗೌಡ, ಪೂರ್ವಾಧ್ಯಕ್ಷ ನವೀನ್ ಶೇಟ್, ಜ್ಯೂನಿಯರ್ ಜೇಸಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭ ಸೈಕಲ್ ಜಾಥದಲ್ಲಿ ಭಾಗವಹಿಸಿದ ಅದೃಷ್ಟಶಾಲಿಗೆ ೧೮ ಸಾವಿರ ಮೌಲ್ಯದ ಸೈಕಲ್ ಹಸ್ತಾಂತರಿಸಲಾಯಿತು. ಸೈಕಲ್ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಮೂವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ವಿತರಿಸಲಾಯಿತು. ಜೇಸಿಐ ಕುಂದಾಪುರದ ನರೇಶ್ ಕೋಟೇಶ್ವರ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಚೇತನ್ ಸಹಕರಿಸಿದರು. ಕಾರ್ಯದರ್ಶಿ ರಾಘು ವಿಠಲವಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರು ವಿಶ್ವಪಥ ಕಲಾ ಸಂಗಮ ತಂಡದವರ ಅಶೋಕ್ ಬಿ. ನಿರ್ದೇಶನದ ಪೂರ್ಣಚಂದ್ರ ತೇಜಸ್ವಿ ಅವರ ಎಂಗ್ಟನ ಪುಂಗಿ ನಾಟಕ ಪ್ರದರ್ಶನ ನಡೆಯಿತು.

Leave a Reply