ಬೈಂದೂರು ಕ್ಷೇತ್ರಕ್ಕೆ ಮಂಜೂರಾದ 10ಕೋಟಿ ವಿಶೇಷ ಅನುದಾನದಲ್ಲಿ 21 ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ವಿವಿಧ ಗ್ರಾಮಗಳ 21 ರಸ್ತೆಗಳ ಅಭಿವೃದ್ಧಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.

Call us

Click Here

10 ಕೋಟಿ ರೂ. ವಿಶೇಷ ಅನುದಾನದಲ್ಲಿ ಗುದ್ದಲಿಪೂಜೆ ನಡೆಸಲಾದ ಕಾಮಗಾರಿಗಳು:

  • ಸೇನಾಪುರ ಗ್ರಾಮದ ಗುಡ್ಡೆಯಂಗಡಿಯಿಂದ ಗುಡ್ಡಮಾಡಿ ಮೂಲಕ ಬಂಟ್ವಾಡಿ(ಮಂಜುರ ಮನೆ ಹತ್ತಿರ) ರಸ್ತೆ ಅಭಿವೃದ್ಧಿ ಅನುದಾನ 15.00.ಲಕ್ಷ ರೂಪಾಯಿ
  • ನಾಡಾ ಗ್ರಾ ಪಂ ಬಡಾಕೆರೆ ಸೇತುವೆಯಿಂದ ಬಡಾಕೆರೆ ಹೊಗುವ ರಸ್ತೆ ಅಭಿವೃದ್ಧಿ ಅನುದಾನ. 25.00 ಲಕ್ಷ ರೂಪಾಯಿ
  • ನಾವುಂದ ಗ್ರಾಮದ ನಂದಯ್ಯನ ಮನೆಯಿಂದ ಕರಾವಳಿ ಮೂಲಕ ಮರವಂತೆ ಕೊಡು ರಸ್ತೆ ಅಭಿವೃದ್ಧಿ ಅನುದಾನ 15.00 ಲಕ್ಷ ರೂಪಾಯಿ
  • ನಾವುಂದ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದಿಂದ ಶುಭದಾ ಶಾಲೆವರಗೆ ರಸ್ತೆ ಅಭಿವೃದ್ಧಿ ಅನುದಾನ 15.00 ಲಕ್ಷ ರೂಪಾಯಿ
  • ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಿತ್ಲು ಹಾಡಿಸಳ್ಥದಿಂದ ಸಮುದ್ರ ಕಿನಾರೆಗೆ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಿತ್ಲು ಹಾಡಿಸಳ್ಥ ಮತ್ತು ನಾಗೂರು ಹೊಣೆಹಿತ್ಲು ಭಜನಾಮಂದಿರ ರಸ್ತೆ ಅಭಿವೃದ್ಧಿ ಅನುದಾನ 30.00 ಲಕ್ಷ ರೂಪಾಯಿ
  • ಖಂಬದಕೋಣೆ ಗ್ರಾಮದ ನಾಂದಿಗೊಂಡು ಹಳಗೇರಿ ಶ್ರೀ ಕೊಕ್ಕೆಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಅನುದಾನ. 20.00 ಲಕ್ಷ ರೂಪಾಯಿ
  • ಕಾಲ್ತೊಡು ಗ್ರಾಮದ ಪಾರಿಯಿಂದ ಚಪ್ಪರಿಕೆ ಶಾಲೆಯ ವರೆಗೆ ರಸ್ತೆ ಅಭಿವೃದ್ಧಿ ಅನುದಾನ. 20.00 ಲಕ್ಷ ರೂಪಾಯಿ
  • ಕಾಲ್ತೋಡು ಗ್ರಾಮದ ಬೇಟಿಯಾಣೆ ರಸ್ತೆಯಿಂದ ಕೇರಿಜೆಡ್ಡು ಮಣ್ಣಿನೆಗೆ ಹೊಗುವ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಉಪ್ಪುಂದ ಗ್ರಾಮ ವ್ಯಾಪ್ತಿಯ ಅಮ್ಮನವರ ತೊಪ್ಪ್ಲನಿಂದ ಶಾಲೆ ಬಾಗಿಲು ಕನಕದ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಉಪ್ಪುಂದ ಗ್ರಾಮ ವ್ಯಾಪ್ತಿಯ ಮೀನುಗಾರಿಕೆ ಕಾಲನಿಯಿಿಂದ ಹೊಳೆಕಡಿಮನೆ ವರೆಗೆ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಉಪ್ಪುಂದ ಗ್ರಾಮದ ರಥಬೀದಿಯಿಂದ ಓಲಗಮಂಟಪ ಸೇತುವೆ ತನಕ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಉಪ್ಪುಂದ ಗ್ರಾಮ ವ್ಯಾಪ್ತಿಯ ಬಾಯಮ್ಮಹಿತ್ಲು ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಪಡುವರಿ ಗ್ರಾಮದ ಶ್ರೀರಾಮ ಭಜನಮಂದಿರದಿಂದ ಅಳ್ವೆಕೊಡಿ ತನಕ ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಯಡ್ತರೆ ಗ್ರಾಮದ ರಾಹುತನಕಟ್ಟೆಯಿಂದ ಕುದ್ರುಸಾಲು ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಪಡುವರಿ ಗ್ರಾಮದ ಕಲ್ಲಾರಿತ್ಲು ಬೆಸ್ಕೊರು ವೀರುಪಾಕ್ಷಿ ರಸ್ತೆಯ ಅಭಿವೃದ್ಧಿ ಅನುದಾನ. 10.00 ಲಕ್ಷ ರೂಪಾಯಿ
  • ಬೈಂದೂರು ಗ್ರಾಮದ ತಗ್ಗರ್ಸೆ ಗ್ರಾಮದ ಉದ್ದಾಬೆಟ್ಟು ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಶಿರೂರು ಗ್ರಾಮದ ಅರ್ಮಿ ಕರಿಕಟ್ಟೆಯಿಂದ ಬಪ್ಪನಬೈಲು ರಸ್ತೆ ಅಭಿವೃದ್ಧಿ ಅನುದಾನ. 15.00 ಲಕ್ಷ ರೂಪಾಯಿ
  • ಶಿರೂರು ಗ್ರಾಮದ ಆಳ್ವೆಗೆದ್ದೆ ರಸ್ತೆ ಯಿಂದ ಬಪ್ಪನಬೈಲು ಅಡಕೊಡ್ಲಿ ಹೋಗುವ ರಸ್ತೆ ಅಭಿವೃದ್ಧಿ ಅನುದಾನ. 15.00
  • ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ರೈಲು ನಿಲ್ದಾಣ ರಸ್ತೆ ಅಭಿವೃದ್ಧಿ ಅನುದಾನ. 10.00 ಲಕ್ಷ ರೂಪಾಯಿ
  • ಯಡ್ತರೆ ಗ್ರಾಮದ ಬಂಕೇಶ್ವರ ದೇವಸ್ಥಾನದಿಂದ ಕಾವೇರಿ ಮಾರ್ಗ ರಸ್ತೆ ಅಭಿವೃದ್ಧಿ ಅನುದಾನ :- 20.00 ಲಕ್ಷ ರೂಪಾಯಿ

 

ವಿವಿಧೆಡೆ ಜರುಗಿದ ಕಾರ್ಯಕ್ರಮಗಳಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮೀನುಗಾರಿಕಾ ಸಂಕಷ್ಟ ಪರಿಹಾರ ಸಮಿತಿ ಸದಸ್ಯ ಮದನ್ ಕುಮಾರ್ ಉಪ್ಪುಂದ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರವೀಣ ಶೆಟ್ಟಿ. ಸದಸ್ಯರಾದ ಹೆಚ್ ವಿಜಯ್ ಶೆಟ್ಟಿ, ಜಗದೀಶ್ ಪೂಜಾರಿ, ಜಗದೀಶ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ರಾಜ್ಯ ಐಟಿ ಸೆಲ್ ಸದಸ್ಯ ಮಣಿಕಂಠ ದೇವಾಡಿಗ ಹಾಗೂ ವಿವಿಧ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಹೇಮಂತ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

Leave a Reply